New Movie Yash 19: ಕೆಜಿಎಫ್‌ನೊಂದಿಗೆ ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಅವರ ಹೊಸ ಚಿತ್ರಕ್ಕಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಒಂದೂವರೆ ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಯಶ್ 19 ಸಿನಿಮಾ (Yash New Movie Yash 19) ಯಾವಾಗ ಎನ್ನುವ ಯಕ್ಷಪ್ರಶ್ನೆಗೆ ಉತ್ತರ ಕೊಡಲು ಸಿದ್ದವಾಗಿದ್ದಾರೆ.
ಮಾಹಿತಿ ಪ್ರಕಾರ, ಯಶ್ ತಮ್ಮ ಮುಂದಿನ ಚಿತ್ರದ ಶೀರ್ಷಿಕೆಯನ್ನು ಡಿಸೆಂಬರ್ 8 ರಂದು ಬೆಳಿಗ್ಗೆ 9:55 ಕ್ಕೆ ಬಹಿರಂಗಪಡಿಸಲಾಗುವುದು ಎಂದು ಘೋಷಿಸಿದಾಗ ಅಭಿಮಾನಿಗಳ ಉತ್ಸಾಹವು ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಯಶ್ 19 ಚಿತ್ರದ ಅಪ್‌ಡೇಟ್ ಇದೀಗ ಹೊರಬಿದ್ದಿದ್ದು ಚಿತ್ರಕ್ಕೆ ನಾಯಕಿಯಾಗಿ ಸಾಯಿಪಲ್ಲವಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.
ಹೌದು, ಚಲನಚಿತ್ರ ವಿಮರ್ಶಕ ರೋಹಿತ್ ಜೈಸ್ವಾಲ್ ಅವರು ಯಶ್ 19 ಗೆ ಸಂಭಾವ್ಯ ನಾಯಕಿಯಾಗಿ ಪಲ್ಲವಿಯನ್ನು ಸೂಚಿಸುವ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಫಿಲ್ಮಂ ಕ್ರಿಟಿಕ್ ಮತ್ತು ಟ್ರೇಡ್ ವಿಶ್ಲೇಷಕ ರೋಹಿತ್ ಜೈಸ್ವಾಲ್ ಈ ಒಂದು ವಿಚಾರವನ್ನ ತಮ್ಮ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೇ ಈ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶನದ ಯಶ್ 19 ಗಾಗಿ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಡಿಸೆಂಬರ್ 8 ರಂದು ಅಧಿಕೃತ ಪ್ರಕಟಣೆಯು ವಿವರಗಳನ್ನು ಅನಾವರಣಗೊಳಿಸಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ರೈಲ್ವೆ ಪ್ರಯಾಣಿಕರಿಗೆ ಬಂತು ಹೊಸ ರೂಲ್ಸ್ – ಇನ್ಮುಂದೆ ವೈಟಿಂಗ್ ಟಿಕೆಟ್ ಮೂಲಕ ಟ್ರಾವೆಲಿಂಗ್ ಸಾಧ್ಯವಿಲ್ಲ
