Home » Vinod Raj Secret Marriage: ಮಗ ವಿನೋದ್ ರಾಜ್ ಮದುವೆಯನ್ನ ಲೀಲಾವತಿ ಎಲ್ಲಿ ಮಾಡಿದ್ರು ಗೊತ್ತಾ ?! ಹೀಗೇಕೆ ಮಾಡಿದ್ರು ಲೀಲಮ್ಮ ?!

Vinod Raj Secret Marriage: ಮಗ ವಿನೋದ್ ರಾಜ್ ಮದುವೆಯನ್ನ ಲೀಲಾವತಿ ಎಲ್ಲಿ ಮಾಡಿದ್ರು ಗೊತ್ತಾ ?! ಹೀಗೇಕೆ ಮಾಡಿದ್ರು ಲೀಲಮ್ಮ ?!

2 comments
Vinod Raj Secret Marriage

Vinod Raj Secret Marriage : ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಲೀಲಾವತಿ(Actress Leelavathi) ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಹಿರಿಯ ನಟಿ ಲೀಲಾವತಿ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ(ಡಿಸೆಂಬರ್ 8) ರಂದು ತಕ್ಷಣವೇ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಟಿ ಲೀಲಾವತಿ( Leelavathi Passed Away)ವಿಧಿವಶರಾಗಿದ್ದಾರೆ.

ಲೀಲಾವತಿ ಅವರು ವಿಧಿವಶರಾದ ಸುದ್ದಿ ಕೇಳಿ ಚೆನ್ನೈನಲ್ಲಿ ನೆಲೆಸಿದ್ದ ವಿನೋದ್‌ ರಾಜ್ (Vinod Raj Wife)ಪತ್ನಿ ಅನು ಹಾಗೂ ಮಗ ಯುವರಾಜ್‌ ಮೊಮ್ಮಗ ಯುವರಾಜ್ ಚೆನ್ನೈನಿಂದ ಆಗಮಿಸಿದ್ದಾರೆ. ಇಂದು ಸಂಜೆ 4 ಗಂಟೆಗೆ ಸೋಲದೇವನಹಳ್ಳಿಯ ಅವರ ತೋಟದಲ್ಲಿ ಲೀಲಾವತಿಯವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಕೆಲವು ತಿಂಗಳ ಹಿಂದೆ ವಿನೋದ್ ರಾಜ್ ಅವರ ಮದುವೆ (Vinod Raj Secret Marriage)ವಿಷಯ ಭಾರೀ ಚರ್ಚೆಗೆ ಕಾರಣವಾಗಿತ್ತು. ಲೀಲಾವತಿ ಅವರಿಗೆ ಇಲ್ಲಿಯವರೆಗೆ ಯಾಕೆ ಮಗನ ಮದುವೆ ವಿಚಾರ ಮುಚ್ಚಿಟ್ಟಿದ್ದೀರಿ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಲೀಲಾವತಿ ಅವರು ಹಿಂದೊಮ್ಮೆ ಪ್ರತಿಕ್ರಿಯೆ ಕೂಡ ನೀಡಿದ್ದರು. ನನ್ನ ಮಗನ ಮದುವೆಯಾಗಿದ್ದು ನಿಜ, ಅದರಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ. ಯಾವ ತಾಯಿಯೂ ತನ್ನ ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದು ಬಯಸುತ್ತಾಳೆ. ಮಗನ ಮದುವೆಯನ್ನು ಬಹಳ ಅದ್ಧೂರಿಯಾಗಿ ಮಾಡಬೇಕು ಅಂತ ಆಸೆ ಇತ್ತು. ಆದರೆ ಕಾರಣಾಂತರದಿಂದ ತನ್ನ ಆಸೆ ಈಡೇರಲಿಲ್ಲ ಎಂದು ನಟಿ ಲೀಲಾವತಿ ಹೇಳಿಕೊಂಡಿದ್ದರು.

ನನ್ನ ಹತ್ತಿರ ದುಡ್ಡು ಇರದ ಹಿನ್ನೆಲೆ ಸರಳವಾಗಿ ಮದುವೆ ನಡೆದಿದೆ. ತಿರುಪತಿ ಬೆಟ್ಟದ ಮೇಲೆ ನನ್ನ ಮಗನ ಮದುವೆ ನಡೆದಿದ್ದು, ಮಗ ಪವಿತ್ರವಾಗಿದ್ದಾನೆ. ಒಳ್ಳೆಯ ಮಗನಾಗಿದ್ದಾನೆ. ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿಸಿದ್ದೇನೆ. ಎಲ್ಲರಿಗೂ ಗೊತ್ತಾಗಿ ಕೊಂಕು ಮಾತನ್ನು ಕೇಳುವ ಬದಲಿಗೆ, ಪರಿಶುದ್ಧವಾದ ಜಾಗದಲ್ಲಿ ಮದುವೆ ಮಾಡಿಸಿದ್ದೇನೆ. ಕೇವಲ ಏಳೇ ಜನ ಕನ್ನಡಿಗರು ಈ ಮದುವೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿಕೊಂಡಿದ್ದರು. ಸೊಸೆ ಮೊಮ್ಮಕ್ಕಳು ಚಿನ್ನದ ಹಾಗಿದ್ದಾರೆ ಎಂದು ನಟಿ ಲೀಲಾವತಿ ಈ ಹಿಂದೆ ಹೇಳಿದ್ದರು.

ಇದನ್ನು ಓದಿ: Madhya Pradesh: ನೀರು ಕುಡಿದ ಕೂಡಲೇ ಪ್ರಾಣ ಬಿಟ್ಟ ಯುವಕ – ಆತನಿಗೆ ಗೊತ್ತಿಲ್ಲದೆ ನೀರೊಂದಿಗೆ ಹೊಟ್ಟೆ ಸೇರಿದ್ದೇನು ಗೊತ್ತಾ?! ಅಬ್ಬಬ್ಬಾ.. ಕೇಳಿದ್ರೆ ಶಾಕ್ ಆಗ್ತೀರಾ

ವಿನೋದ್ ರಾಜ್ ಕೂಡ ತಮ್ಮ ಮದುವೆಯ ಬಗ್ಗೆ ಪ್ರತಿಕ್ರಿಯೆ ನೀಡಿ ವಿವಾಹವಾಗಿರುವುದು ನಿಜ ಎಂದು ಹೇಳಿಕೊಂಡಿದ್ದರು. ವಿನೋದ್ ರಾಜ್ ಅವರ ಪತ್ನಿಯ ಹೆಸರು ಅನು.ಬಿ. ಮತ್ತು ಮಗನ ಹೆಸರು ಯುವರಾಜ್.ವಿ. ಎಂದು ತಿಳಿದು ಬಂದಿದೆ. ನಟಿ ಲೀಲಾವತಿ(Actress Leelavathi) ಅವರ ಮಗನಾದ ವಿನೋದ್ ರಾಜ್(Vinod Raj) ಈ ಮೊದಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಚಿತ್ರರಂಗದಲ್ಲಿ ಹೆಸರು ಮಾಡಿ ಈಗ ಕೃಷಿಯತ್ತ ಗಮನ ಹರಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಇದೀಗ, ತಮ್ಮ ತಾಯಿಯ ಅಗಲಿಕೆಯಿಂದ ವಿನೋದ್ ರಾಜ್ ಒಬ್ಬಂಟಿಯಾಗಿ ಬಿಟ್ಟಿದ್ದಾರೆ.

ಇದನ್ನೂ ಓದಿ: Actress Leelavathi Grandson: ಲೀಲಾವತಿ ಅಂತಿಮ ದರ್ಶನಕ್ಕೆ ಕೊನೆಗೂ ಬಂದ್ರು ಸೊಸೆ- ಮೊಮ್ಮಗ !! ಇದೇನಾ ವಿನೋದ್ ರಾಜ್ ಸಂಸಾರ?!

You may also like

Leave a Comment