Arjuna death matter: ಅರ್ಜುನ ಆನೆಯ ಸಾವು ನಾಡಿನ ಜನರನ್ನು ಒಮ್ಮೆ ಕಲಕಿಬಿಟ್ಟಿದೆ. ಇದುವರೆಗೂ ಆನೆ ಹಾಗೆ ಸತ್ತಿತಂತೆ, ಹೀಗೆ ಸತ್ತಿತಂತೆ ಎಂದು ಅನೇಕರು ಹೇಳಿದ್ದು. ಮಾವುತ ರಾಜು ಕೂಡ ಕೆಲವು ಸತ್ಯಾಂಶ ಹೊರಹಾಕಿದ್ಧರು. ಆದರೀಗ ಕಾಡಾನೆ ಹಿಡೆಯವ ಕಾರ್ಯಾಚರಣೆಯ ಕೊನೆಯ 2 ನಿಮಿಷದ ವಿಡಿಯೋ, ಕಾರ್ಯಾಚರಣೆಗೆ ಕಾಡಿನ ಒಳಗೆ ಹೋದ ಫೋಟೋಗಳು ಲಭ್ಯವಾಗಿದ್ದು ಭಾರೀ ವೈರಲ್ ಆಗ್ತಿದೆ.
ಹೌದು, ನೀಲಗಿರಿ ತೋಪಿನಲ್ಲಿ ಮದವೇರಿ ನಿಂತಿದ್ದ ಕಾಡಾನೆ ಅರ್ಜುನ ಆನೆ(Arjuna death matter)ಮೇಲೆ ದಾಳಿ ಮಾಡಿತ್ತು. ಈ ವೇಳೆ ಅರ್ಜುನ ಆನೆಯ ಮೇಲೆ ನಾಲ್ವರು ಕುಳಿತಿದ್ದರು. ಅರ್ಜುನ ಆನೆ ಮಾವುತ ವಿನು ಆತನ ಹಿಂದೆ ವೈದ್ಯ ರಮೇಶ್, ಅವರ ಹಿಂದೆ ಭೀಮ ಆನೆಯ ಮಾವುತ ಗುಂಡ, ಅವರ ಹಿಂದೆ ಅನಿಲ್ ಎಂಬ ಹುಡುಗ ಕೂತಿದ್ದರು. ಈ ಮಾವುತರಲ್ಲಿ ಒಬ್ಬನು ವಿಡಿಯೋ ಮಾಡಿದ್ದು ಅದು ಈಗ ಮಾಧ್ಯಮಗಳಿಗೆ ಲಭ್ಯವಾಗಿದೆ.
ಅಂದಹಾಗೆ ಮೊದಲ ಬಾರಿ ಕಾಡಾನೆ ದಾಳಿ ಮಾಡಿದಾಗ ಅರ್ಜುನ ಹಾಗೂ ಸಿಬ್ಬಂದಿ ಕಾಡಾನೆಯನ್ನು ಓಡಿಸಿದ್ದರು. ಮೊದಲ ಬಾರಿ ಕಾಡಾನೆ ಅರ್ಜುನನ ಮೇಲೆ ದಾಳಿ ಮಾಡಿದಾಗ ವಿಚಲಿನಾಗದ ಅರ್ಜುನ ಹಾಗೂ ಇತರರು ಬೀಳುವ ಸ್ಥಿತಿಯಲ್ಲೂ ಹೋರಾಡಿ ಕಾಡಾನೆಯನ್ನು ಹಿಮ್ಮೆಟ್ಟಿಸಿದ್ದನು. ಆದರೆ ನಂತರ ಅರಣ್ಯ ಇಲಾಖೆಯವರ ಪ್ರಮಾದಗಳಿಂದ ದಸರಾ ಕ್ಯಾಪ್ಟನ್ ಅನ್ನು ನಾವು ಕಳೆದುಕೊಳ್ಳಬೇಕಾಯಿತು.
ಕಾಡಾನೆ ಹಿಡಿಯಲು ಹೋದಾಗ ಮೊದಲು ಅದನ್ನು ಅರ್ಜುನ ಕಾದಾಡಿ ಓಡಿಸಿದ. ಆ ವೇಳೆಗೆ ಆನೆ ಡಾಕ್ಟರ್ ಡಾ. ರಮೇಶ್ ಪ್ರಶಾಂತ್(Prashanth) ಆನೆಗೆ ಅರೆವಳಿಕೆ ಚುಚ್ಚುಮದ್ದು ಕೊಟ್ಟಿದ್ದಾನೆ. ಪ್ರಶಾಂತ ಆನೆ ಬಿದ್ದಿದೆ. ಆಗ ಆನೆಮೇಲಿದ್ದ ಮಾವುತರಲ್ಲಿ ಮೂವರು ಕೆಳಗಿಳಿದು ಪ್ರಶಾಂತ್ ಬಳಿಗೆ ತೆರಳಿದ್ದಾರೆ. ಇದರಿಂದ ಅರ್ಜುನನ ಮೇಲೆ ಒಬ್ಬ ಮಾವುತ ಮಾತ್ರವಿದ್ದ. ಮಈ ವೇಳೆ ಕಾಡಾನೆ ಮತ್ತೆ ಅರ್ಜುನ ಆನೆ ಮೇಲೆ ದಾಳಿ ಮಾಡಿದೆ. ಆಗ ಅನಿಲ್ ಕೆಳಗೆ ಬಿದ್ದಿದ್ದಾರೆ. ಮೊದಲ ಕಾದಾಟದ ವೇಳೆ ಚೆರ್ರೆ ಹಾಗೂ ಕೂಳೆಯಿಂದ ಗಾಯಗೊಂಡಿದ್ದ ಅರ್ಜುನ ಸಹಾಯಕ್ಕೆ ಯಾರು ಇಲ್ಲದೆ ಕಾದಾಟದಲ್ಲಿ ಸೋತು ಸಾವನ್ನಪ್ಪಿದ್ದಾನೆ.
