Home » Chikkamagaluru tourist Spots: ಪ್ರವಾಸಿಗರೇ ಗಮನಿಸಿ- ಇಷ್ಟು ದಿನ ಬಂದ್ ಆಗಲಿದೆ ಚಿಕ್ಕಮಗಳೂರಿನ ಪ್ರಸಿದ್ದ ಈ ‘ಟೂರಿಸ್ಟ್ ಪ್ಲೇಸ್’ಗಳು !!

Chikkamagaluru tourist Spots: ಪ್ರವಾಸಿಗರೇ ಗಮನಿಸಿ- ಇಷ್ಟು ದಿನ ಬಂದ್ ಆಗಲಿದೆ ಚಿಕ್ಕಮಗಳೂರಿನ ಪ್ರಸಿದ್ದ ಈ ‘ಟೂರಿಸ್ಟ್ ಪ್ಲೇಸ್’ಗಳು !!

1 comment
Chikkamagaluru tourist Spots

Chikkamagaluru Tourist spots: ಪ್ರವಾಸಿಗರೇ ಗಮನಿಸಿ, ನೀವೇನಾದರೂ ಕ್ರಿಸ್ಮಸ್ ರಜೆ ಹಿನ್ನೆಲೆ ಚಿಕ್ಕಮಗಳೂರು ಹೋಗುವ ಯೋಜನೆ ಹಾಕಿದ್ದರೆ ಮೊದಲು ಈ ವಿಚಾರ ತಿಳಿದುಕೊಳ್ಳಿ. ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ (Baba Budan giri) ದರ್ಗಾ, ದತ್ತಪೀಠದಲ್ಲಿ ಡಿಸೆಂಬರ್ 24, 25 ಮತ್ತು 26ರಂದು ದತ್ತಜಯಂತಿ ನಡೆಯಲಿರುವ ಹಿನ್ನೆಲೆ ಜಿಲ್ಲೆಯ ಹಲವು ಪ್ರವಾಸಿ ತಾಣಗಳಿಗೆ (Chikkamagaluru Tourist spots) ನಿರ್ಬಂಧ ಹೇರಲಾಗಿದೆ.

ಚಂದ್ರದ್ರೋಣ ಪರ್ವತ ಸಾಲಿನ ಪ್ರವಾಸಿ ತಾಣಗಳಿಗೆ 6 ದಿನ ನಿರ್ಬಂಧ ಹೇರಲಾಗಿದೆ. ಡಿಸೆಂಬರ್ 22ರಿಂದ 27ರವರೆಗೆ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದ್ದು, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರಾ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಡಿಸೆಂಬರ್ 26ಕ್ಕೆ 20 ಸಾವಿರಕ್ಕೂ ಅಧಿಕ ಮಾಲಾಧಾರಿಗಳು ದತ್ತಪೀಠಕ್ಕೆ ಭೇಟಿ ನೀಡುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಇದನ್ನು ಓದಿ: Parliament: ಸಂಸತ್ ಪ್ರವೇಶಕ್ಕೆ 3 ಹಂತದ ಭಧ್ರತೆಯಿದ್ದರೂ ಲೋಪವಾದದ್ದೆಲ್ಲಿ ?! ಭದ್ರತೆಯ ಮೇಲುಸ್ತುವಾರಿ ಯಾರು ?!

You may also like

Leave a Comment