Home » K S Eshwarappa: ಪ್ರತಾಪ್ ಸಿಂಹ ಬಗ್ಗೆ ಕೆ ಎಸ್ ಈಶ್ವರಪ್ಪ ಅಚ್ಚರಿ ಸ್ಟೇಟ್ಮೆಂಟ್ !!

K S Eshwarappa: ಪ್ರತಾಪ್ ಸಿಂಹ ಬಗ್ಗೆ ಕೆ ಎಸ್ ಈಶ್ವರಪ್ಪ ಅಚ್ಚರಿ ಸ್ಟೇಟ್ಮೆಂಟ್ !!

1 comment
K S Eshwarappa

K S Eshwarappa: ಬಿಜೆಪಿ(BJP) ಪ್ರಬಲ ನಾಯಕ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು ಸಂಸದ ಪ್ರತಾಪ್ ಸಿಂಹ ಅವರ ಕುರಿತು ಕೆಲವು ಅಚ್ಚರಿ ಸ್ಟೇಟ್ಮೆಂಟ್ ಅನ್ನು ನೀಡಿದ್ದು, ಅವರ ಪರ ವಕಾಲತ್ತು ವಹಿಸಿ ಬೆನ್ನಿಗೆ ನಿಂತಿದ್ದಾರೆ.

 

ಹೌದು, ದೆಹಲಿಯ ಸಂಸತ್(Parliament) ಭವನದ ಒಳಗಡೆ ನಡೆದ ಸ್ಮೋಕ್ ಬಾಂಬ್(Smoke bomb) ದಾಳಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದು ಕೂಡ ನಮ್ಮ ರಾಜ್ಯದ ಮೈಸೂರು ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹ(Prathap Simha) ಅವರ ಪಾಸ್ ಪಡೆದು ಈ ರೀತಿ ದಾಳಿ ನಡೆಸಿರುವುದು ಸಾಕಷ್ಟು ಚರ್ಚೆಯಾಗುತ್ತಿದೆ. ಕಾಂಗ್ರೆಸ್ಸಂತೂ ಇದನ್ನು ಅಸ್ತ್ರವಾಗಿ ಬಳಸಿಕೊಂಡು ಪ್ರತಾಪ್ ಸಿಂಹ ಅರ ಮೇಲೆ ವಾಕ್ಸಮರ ನಡೆಸುತ್ತಿದೆ. ಆದರಿಗ ಈ ಬೆನ್ನಲ್ಲೇ ಬಿಜೆಪಿಯ ನಾಯಕ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ(K S Eshwarappa) ಅವರು ಪ್ರತಾಪ್ ಸಿಂಹ ಕುರಿತು ಅಚ್ಚರಿಯ ಸ್ಟೇಟ್ಮೆಂಟ್ ನೀಡಿದ್ದಾರೆ.

 

ಪಾರ್ಲಿಮೆಂಟ್ ನಲ್ಲಿ ನಡೆದ ದಾಳಿ ವಿಚಾರವಾಗಿ ಹಾಗೂ ಪ್ರತಾಪ್ ಸಿಂಹ ಅವರ ವಿರುದ್ಧ ಕೇಳಿಬರುತ್ತಿರುವ ಆಕ್ರೋಶದ ಕುರಿತು ಮಾತನಾಡಿದ ಅವರು, ಪ್ರತಾಪ್‌ಸಿಂಹನಂತಹ (Pratap Simha) ರಾಷ್ಟ್ರಭಕ್ತ ಹಾಗೂ ಹಿಂದುತ್ವವಾದಿಯನ್ನು ಯಾರೂ ಖಂಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಅವರಿಗೆ ಮಾಡಲು ಬೇರೆ ಕೆಲಸವಿಲ್ಲ ಅದಕ್ಕೆ ಹೀಗೆ ಮಾಡ್ತಾರೆ ಎಂದರು. ಅಲ್ಲದೆ ಪಾರ್ಲಿಮೆಂಟ್‌ನಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಯಿದ್ದರೂ ನಡೆಸಿದ ದುಷ್ಕೃತ್ಯ ನೋಡಿದರೆ ಆಶ್ಚರ್ಯ, ನೋವು ಎರಡು ಆಗುತ್ತದೆ. ಈ ಭದ್ರತಾ ವೈಫಲ್ಯದ ಕುರಿತು ಬಿಗಿಯಾದ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ನಿಲುವು ತೆಗೆದುಕೊಂಡಿದೆ ಎಂದು ತಿಳಿಸಿದರು.

You may also like

Leave a Comment