Home » High court: ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್- ಇನ್ಮುಂದೆ ಟ್ರಾಫಿಕ್ ಪೋಲೀಸರು ದಂಡ ಸಂಗ್ರಹಿಸುವಂತಿಲ್ಲ !! ಹೈಕೋರ್ಟ್ ನಿಂದ ಬಂತು ಮಹತ್ವದ ತೀರ್ಪು

High court: ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್- ಇನ್ಮುಂದೆ ಟ್ರಾಫಿಕ್ ಪೋಲೀಸರು ದಂಡ ಸಂಗ್ರಹಿಸುವಂತಿಲ್ಲ !! ಹೈಕೋರ್ಟ್ ನಿಂದ ಬಂತು ಮಹತ್ವದ ತೀರ್ಪು

142 comments
High court

High court: ವಾಹನ ಸಭಾರರಿಗೆ ಭರ್ಜರಿ ಸಿಹಿ ಸಿದ್ದಿ ಒಂದು ಬಂದಿದ್ದು ಇನ್ನು ಮುಂದೆ ಟ್ರಾಫಿಕ್ ಪೊಲೀಸರು(Trafic police) ದಂಡ ವಸೂಲಿ ಮಾಡುವಂತಿಲ್ಲ ಎಂದು ಹೈಕೋರ್ಟ್(High court)ಮಹತ್ವದ ಆದೇಶ ಹೊರಡಿಸಿದೆ.

ಹೌದು, ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಆದೇಶ ಹೊರಡಿಸಿದೆ. ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳಲ್ಲಿ ಪೊಲೀಸರು ತಪಾಸಣೆ ಮಾಡುವುದನ್ನು ವಿಡಿಯೋ ಚಿತ್ರೀಕರಣ ಮಾಡಬೇಕಾಗುತ್ತದೆ ಹಾಗೂ ಸಂಚಾರ ಪೊಲೀಸರು ಆರೋಪಿಯಿಂದ ದಂಡದ ಮೊತ್ತ ( ಫೈನ್) ಸಂಗ್ರಹಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಂದಹಾಗೆ ಹೈಕೋರ್ಟ್ ನೀಡಿದ್ದ ತೀರ್ಪು ಉಲ್ಲೇಖಿಸಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರ ಕಚೇರಿ ಸುತ್ತೋಲೆ ಹೊರಡಿಸಿದ್ದು, ಇದರಲ್ಲಿ ದಂಡದ ಮೊತ್ತವನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ಮಾತ್ರ ಅಧಿಕಾರವಿದೆ. ಯಾವುದೇ ಪರಿಸ್ಥಿತಿಯಲ್ಲೂ ಸಂಚಾರ ಪೊಲೀಸರು ಆರೋಪಿಯಿಂದ ದಂಡ ಸಂಗ್ರಹಿ ಸಲು ಸಾಧ್ಯವಿಲ್ಲ. ವಾಹನ ತಪಾಸಣಾ ಚಟುವಟಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು. ದಂಡ ಪಾವತಿಸದಿದ್ದರೆ ವಾಹನವನ್ನು ಜಪ್ತಿ ಮಾಡುವ ಅಧಿಕಾರ ಪೊಲೀಸರಿಗೆ ಇಲ್ಲ ಎಂದು ತಿಳಿಸಿದೆ.

ಈ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದ್ಯಾಕೆ?

ಕೋರಿ ಕೆ ಆರ್ ಪೇಟೆ (K R Pete) ಪಟ್ಟಣದ ಸುಭಾಷ್ ನಗರದ ನಿವಾಸಿ ಕೆ ಟಿ ನಟರಾಜು (K T Nataraj) ಎಂಬುವವರು ಹೆಲ್ಮೆಟ್ (Helmet) ಧರಿಸದೇ ಇರುವುದಕ್ಕೆ ಫೈನ್ ಕಟ್ಟಲು ನಿರಾಕರಿಸಿದ ಮತ್ತು ಸರ್ಕಾರೀ ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದ ಆರೋಪ ಸಂಬಂಧ ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ರದ್ದು, ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಕೇಸನ್ನು ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶವನ್ನು ಹೊರಡಿಸಿದೆ.

ಇದನ್ನು ಓದಿ: D K Shivkumar: ಗೃಹಲಕ್ಷ್ಮೀ ದುಡ್ಡಿನ ಕುರಿತು ಪಬ್ಲಿಕ್ ಅಲ್ಲೇ ಡಿಕೆಶಿ ಗೆ ಮುಜುಗರ ತಂದ ಪೌರಕಾರ್ಮಿಕ ಮಹಿಳೆ !! ವೈರಲ್ ಆಯ್ತು ವಿಡಿಯೋ

 

You may also like

Leave a Comment