Home » Yash-Prashanth neel: ರಾಕಿಂಗ್ ಸ್ಟಾರ್ ಯಶ್ ಕುರಿತು ಬಿಗ್ ಸೀಕ್ರೇಟ್ ರಿವೀಲ್ ಮಾಡಿದ ಪ್ರಶಾಂತ್ ನೀಲ್ !!

Yash-Prashanth neel: ರಾಕಿಂಗ್ ಸ್ಟಾರ್ ಯಶ್ ಕುರಿತು ಬಿಗ್ ಸೀಕ್ರೇಟ್ ರಿವೀಲ್ ಮಾಡಿದ ಪ್ರಶಾಂತ್ ನೀಲ್ !!

1 comment
Yash-Prashanth neel

Yash-prashanth neel: KGF ಕಲಿಗಳಾದ ಯಶ್ ಹಾಗೂ ಪ್ರಶಾಂತ್ ನೀಲ್ ನಡುವೆ ಮುನಿಸು ಉಂಟಾಗಿದೆ, ಇಬ್ಬರೂ ಮಾತನಾಡುವುದಿಲ್ಲ ಎಂದು ಚಂದನವನದ ಅಂಗಳದಲ್ಲೊಂದು ಗುಲ್ಲೆಬ್ಬಿತ್ತು. ಆದರೀಗ ಇದೆಲ್ಲದಕ್ಕೂ ನಿರ್ದೇಶಕ ಪ್ರಶಾಂತ್ ನೀಲ್ ಉತ್ತರಿಸಿದ್ದು ನನ್ನ ಯಶ್ ಸ್ನೇಹ ಜೀವನ ಪರ್ಯಂತ ಇರುತ್ತೆ ಎಂದಿದ್ದಾರೆ.

ನ್ಯಾಷನಲ್ ಸ್ಟಾರ್ ಆಗಿ ಯಶ್ ಒಂದು ಕಡೆ ಮಿಂಚುತ್ತಿದ್ರೆ ಕರ್ನಾಟಕದ ಹೆಮ್ಮೆ ಅಂತ ಕರೆಸಿಕೊಳ್ತಿರೋ ಪ್ರಶಾಂತ್ ನೀಲ್ ಇಂಡಿಯನ್ ಸಿನಿಮಾ ಜಗತ್ತಿನ ಟಾಪ್ ಡೈರೆಕ್ಟರ್ ಆಗಿ ಜದಗ್ವಿಕ್ಯಾತಿ ಗಳಿಸಿದ್ದಾರೆ. ಆದ್ರೆ ಯಶ್ ಮತ್ತು ನೀಲ್ ಮಧ್ಯೆ ಎಲ್ಲವೂ ಸರಿ ಇಲ್ಲ, ಇಬ್ಬರೂ ಕಿತ್ತಾಡಿದ್ದಾರೆ ಅನ್ನೋ ವಿಚಾರ ಬಹಳ ದಿನಗಳಿಂದ ಸುದ್ದಿಯಲ್ಲಿತ್ತು. ಆದರೀಗ ಸಲಾರ್ ಸಿನಿಮಾದ ಪ್ರಚಾರದಲ್ಲಿರೋ ಡೈರೆಕ್ಟರ್ ನೀಲ್, ಯಶ್ ಜೊತೆಗಿನ ಮನಿಸಿನ ವಿಷಯಕ್ಕೆ ಉತ್ತರ ಕೊಟ್ಟಿದ್ದಾರೆ.

ಹೌದು, ಸಂದರ್ಶನ ಒಂದರಲ್ಲಿ ಮಾತನಾಡಿರೋ ಪ್ರಶಾಂತ್ ನೀಲ್(Prashanth neel)ನನ್ನ ಯಶ್(Yash) ಸ್ನೇಹ ಬಿಡುವಂತದಲ್ಲ. ನನ್ನ ಯಶ್ ಸ್ನೇಹ ಜೀವನ ಪರ್ಯಂತ ಇರುತ್ತೆ ಎಂದಿದ್ದಾರೆ. ಅಲ್ಲದೆ ಕೆಜಿಎಸ್-2 ರಿಲೀಸ್ ವೇಳೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಸಿನಿಮಾ ರಿಲೀಸ್ ಕೂಡ ಲೇಟಾಗಿತ್ತು. ಈ ವೇಳೆ ಯಶ್ಗೆ ಸಿಕ್ಕಾಪಟ್ಟೆ ಹಠ ಇದೆ. ಬೇಡ ಅಂತ ಡಿಸೈಡ್ ಮಾಡಿದ್ರೆ ಅದೇ ಹಠದಲ್ಲೇ ಯಶ್ ಇರ್ತಾರೆ ಅಂತ ನಿರ್ದೇಶಕ ನೀಲ್ ಹೇಳಿದ್ರು.

ಇದನ್ನು ಓದಿ: KSRTC ಯಿಂದ ಮತ್ತೊಂದು ಗುಡ್ ನ್ಯೂಸ್- ನಿಮ್ಮ ಮನೆಗೇ ಬರುತ್ತೆ ಈ ಹೊಸ ಸೇವೆ !!

You may also like

Leave a Comment