Home » Attack On Datta Maldhari: ಮಸೀದಿ ಬಳಿ ಕೇಸರಿ ಧ್ವಜ ಕಟ್ಟಿದ ದತ್ತ ಮಾಲಾಧಾರಿಗಳು – ಅನ್ಯ ಕೋಮಿನವರಿಂದ ನಡೆದೇ ಹೋಯ್ತು ಘೋರ ಕೃತ್ಯ

Attack On Datta Maldhari: ಮಸೀದಿ ಬಳಿ ಕೇಸರಿ ಧ್ವಜ ಕಟ್ಟಿದ ದತ್ತ ಮಾಲಾಧಾರಿಗಳು – ಅನ್ಯ ಕೋಮಿನವರಿಂದ ನಡೆದೇ ಹೋಯ್ತು ಘೋರ ಕೃತ್ಯ

1 comment
Attack On Datta Maldhari

Attack On Datta Maldhari: ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮದಲ್ಲಿ ಅನ್ಯಕೋಮಿನ ಯುವಕರು ದತ್ತಮಾಲಾಧಾರಿಗಳ ಮೇಲೆ ಹಲ್ಲೆ (Attack On Datta Maldhari) ಮಾಡಿರುವ ಆರೋಪ ಕೇಳಿ ಬಂದಿದೆ. ಹಾಂದಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಅಲಂಕಾರ ಮಾಡುತ್ತಿದ್ದ ವೇಳೆ ಮಸೀದಿ ಸಮೀಪ ಧ್ವಜ ಕಟ್ಟದಂತೆ ಅನ್ಯಕೋಮಿನ ಯುವಕರ ತಂಡ ದತ್ತಮಾಲಾಧಾರಿಗಳ ಮೇಲೆ ಹಲ್ಲೆ ನಡೆಸಲಾಗಿದೆ.

ಮಾಹಿತಿ ಪ್ರಕಾರ ದತ್ತಜಯಂತಿ ಹಿನ್ನೆಲೆ ದತ್ತಮಾಲಾಧಾರಿಗಳು ಗ್ರಾಮದೆಲ್ಲೆಡೆ ಅಲಂಕಾರ ಮಾಡುತ್ತಿದ್ದಾರೆ. ಕೇಸರಿ ಧ್ವಜ ನೆಟ್ಟಿ ಗ್ರಾಮವನ್ನೆಲ್ಲ ಕೇಸರಿಮಯವನ್ನಾಗಿಸುತ್ತಿದ್ದಾರೆ. ಸದ್ಯ ಹಾಂದಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಅಲಂಕಾರ ಮಾಡುತ್ತಿದ್ದ ವೇಳೆ ಮಸೀದಿ ಸಮೀಪ ಧ್ವಜ ಕಟ್ಟದಂತೆ ಅನ್ಯಕೋಮಿನ ಯುವಕರ ತಂಡ ದತ್ತಮಾಲಾಧಾರಿಗಳ ಮೇಲೆ ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ.

ಅತಿ ಸೂಕ್ಷ್ಮ ಪ್ರದೇಶವಾಗಿರುವ ಆಲ್ದೂರು ಮತ್ತು ಹಾಂದಿ ಗ್ರಾಮದಲ್ಲಿ ಅಲಂಕಾರ ಮಾಡುವುದಕ್ಕೆ ಹಿಂದೂ ಸಂಘನೆಗಳು ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದಿದ್ದರು. ಘಟನೆ ಸಂಬಂಧಿಸಿದಂತೆ ಭಜರಂಗದಳ ಕಾರ್ಯಕರ್ತರು ಸಭೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಘಟನೆ ಬಳಿಕ ಸ್ಥಳಕ್ಕೆ‌ ಆಲ್ದೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ: Batteries plus: ಮೊಬೈಲ್ ಚಾರ್ಜ್ ಹಾಕುವಾಗ ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ !ಈ ಒಂದು ಮಿಸ್ಟೇಕ್ ನಿಂದಲೇ ನಿಮ್ಮ ಬ್ಯಾಟರಿ ಬೇಗ ಖಾಲಿ ಆಗೋದು

You may also like

Leave a Comment