Home » Punishment to kids: ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿಗಳಿಂದ ಕಪಾಳ ಮೋಕ್ಷ ಮಾಡಲು ಹೇಳಿದ ಶಿಕ್ಷಕಿ, ಸಿಕ್ಕದೇ ಛಾನ್ಸ್‌ ಎಂದು ಛಟಾರನೇ ಕೆನ್ನೆಗೆ ಬಾರಿಸಿದ ಹುಡುಗ್ರು, ಮುಂದೇನಾಯ್ತು?

Punishment to kids: ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿಗಳಿಂದ ಕಪಾಳ ಮೋಕ್ಷ ಮಾಡಲು ಹೇಳಿದ ಶಿಕ್ಷಕಿ, ಸಿಕ್ಕದೇ ಛಾನ್ಸ್‌ ಎಂದು ಛಟಾರನೇ ಕೆನ್ನೆಗೆ ಬಾರಿಸಿದ ಹುಡುಗ್ರು, ಮುಂದೇನಾಯ್ತು?

by Mallika
1 comment
Punishment to kids

Teacher Punishment: ಶಾಲೆಯಲ್ಲಿ ಶಿಕ್ಷೆ ನೀಡುವುದು ಅಪರಾಧ. ಆದರೆ ಇಲ್ಲೊಂದು ಶಾಲೆಯಲ್ಲಿ ಕ್ಲಾಸ್‌ನಲ್ಲಿರುವ ಹುಡುಗರ ಬಳಿ ಹುಡುಗರಿಯರಿಗೆ ಕಪಾಳಮೋಕ್ಷ ಮಾಡುವಂತೆ ಹೇಳಿದ್ದಾರೆ. ಸಿಕ್ಕಿದ್ದೇ ಅವಕಾಶ ಅಂತ ಹುಡುಗರು ಹುಡುಗಿಯರಿಗೆ ಸರಿಯಾಗಿ ಕೆನ್ನೆಗೆ ಬಾರಿಸಿದ್ದಾರೆ. ಆದರೆ ಈ ಕಪಾಳಮೋಕ್ಷ ಮಾಡಿದ್ದು ಯಾಕೆಂದು ನಿಮಗೆ ಗೊತ್ತೇ? ಅದೇನೆಂದರೆ ಈ ಪ್ರಾಥಮಿಕ ಶಾಲೆಯಲ್ಲಿ ಹುಡುಗಿಯರು ಕ್ಲಾಸ್‌ ನಡೆಯುತ್ತಿದ್ದ ಸಂದರ್ಭದಲ್ಲಿ ಆಹಾರ ಸೇವನೆ ಮಾಡಿದ್ದು, ಇದರಿಂದ ಸಿಟ್ಟುಗೊಂಡ ಶಿಕ್ಷಕಿ ಈ ರೀತಿ ಶಿಕ್ಷೆ ನೀಡಿದ್ದಾರೆ

ಅಂದ ಹಾಗೆ ಈ ಘಟನೆ ನಡೆದಿರುವುದು ಚೀನಾದ ಜಿಯಾಂಗ್ಸು ಪ್ರಾಂತ್ಯದ ಪ್ರಾಥಮಿಕ ಶಾಲೆಯಲ್ಲಿ. ಶಿಕ್ಷೆ ನೀಡಿದ ಶಿಕ್ಷಕಿಯ ಹೆಸರು ಝ. ಆದರೆ ಯಾವಾಗ ಕೆನ್ನೆಗೆ ಪೆಟ್ಟು ತಿಂದ ಹೆಣ್ಣುಮಕ್ಕಳು ಮನೆಗೆ ಹಿಂದಿರಿಗಿದರೋ ಕೆನ್ನೆ ಕೆಂಪಾಗಿರುವುದನ್ನು ಕಂಡು ವಿಚಾರಿಸಿದಾಗ ವಿಷಯ ತಿಳಿದಿದೆ. ನಂತರ ಪಾಲಕರು ಶಿಕ್ಷಕಿ ವಿರುದ್ಧ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಐದಾರು ಬಾರಿ ಮಗಳಿಗೆ ಕಪಾಳಮೋಕ್ಷ ಮಾಡಲಾಗಿದ್ದು, ಹುಡುಗರು ಹುಡುಗಿಯರಿಗೆ ಹೊಡೆದು ಮಹಾನ್‌ ಕೆಲಸ ಮಾಡಿಲ್ಲ ಎಂದು ಆ ಶಿಕ್ಷಕಿಗೆ ಮನವರಿಕೆ ಮಾಡಬೇಕು ಎಂದು ವಿದ್ಯಾರ್ಥಿನಿ ಪಾಲಕರು ಆಗ್ರಹ ಮಾಡಿದ್ದಾರೆ. ಹೊಡೆದ ಹುಡುಗರ ಪಾಲಕರು ನಮ್ಮ ಮಕ್ಕಳು ಚಿಕ್ಕವರು. ಅವರು ಶಿಕ್ಷಕಿ ಹೇಳಿದ ಹಾಗೆ ಮಾಡಿದ್ದಾರೆಂದು ಹೇಳಿದ್ದಾರೆ.

ಆದರೆ ಯಾವಾಗ ಗಲಾಟೆ ಕೈ ಮೀರಿ ಹೋಗುತ್ತದೆ ಎಂದು ಅನಿಸಿತೋ ಯಾವಾಗ ಶಿಕ್ಷಕಕಿ ಗ್ರೂಪ್‌ನಲ್ಲಿ ಕ್ಷಮೆ ಕೇಳಿದ್ದು, ಇದರ ತೀವ್ರತೆಯ ಬಗ್ಗೆ ನಾನು ಹೆಚ್ಚು ಯೋಚನೆ ಮಾಡಿಲ್ಲ, ಕ್ಷಮಿಸಿ ಎಂದಿದ್ದಾಳೆ. ಶಾಲಾ ಆಡಳಿತ ಮಂಡಳಿ ತನ್ನ ಕೌಟುಂಬಿಕ ವಿಷಯದ ಕಿರಿಕಿರಿಯಿಂದ ಶಿಕ್ಷಕಿ ಡಿಸ್ಟರ್ಬ್‌ ಆಗಿದ್ದು ಹಾಗಾಗಿ ಈ ರೀತಿ ವರ್ತನೆ ಮಾಡಿದ್ದಾರೆ ಎಂದು ಹೇಳಿ ಕೆಲಸದಿಂದ ತೆಗೆದಿದ್ದಾರೆ.

ಇದನ್ನು ಓದಿ: Karnataka government: ಸರ್ಕಾರದ ಬೊಕ್ಕಸ ಖಾಲಿ- ಹಣವಿಲ್ಲದೆ ಮಹಿಳೆಯರಿಗಾಗಿ ಜಾರಿಗೊಳಿಸಿದ ಈ ಯೋಜನೆ ನಿಲ್ಲಿಸಲು ಮುಂದಾದ ಸರ್ಕಾರ !!

You may also like

Leave a Comment