2
ಪ್ರತೀ ವಾರವೂ ಕಿಚ್ಚನ ಪಂಚಾಯ್ತಿ ಆಗುತ್ತದೆ, ಶನಿವಾರ ಮನೆಮಂದಿಗೆ ಸರಿಯಾದ ಕ್ಲಾಸ್ ಕೂಡ ಆಗುತ್ತೆ , ಭಾನುವಾರ ಮನೆಯಿಂದ ಓರ್ವ ಸ್ಪರ್ಧಿ ಹೊರಗೆ ಹೋಗ್ತಾರೆ. ಹಾಗಾದ್ರೆ ಈ ವಾರ ಮನೆಗೆ ನಟಿ ಶ್ರುತಿ ಬಂದಿದ್ಯಾಕೆ? ಸುದೀಪ್ ಬರಲ್ವಾ? ಎಲಿಮಿನೇಷನ್ ಇಲ್ವಾ? ಎಲ್ಲಾ ಪ್ರಶ್ನೆಗೂ ಉತ್ತರ ಇಲ್ಲಿದೆ ನೋಡಿ.
ಎಸ್, ಈಗಾಗಲೇ ಹೊರ ಬಂದ ಪ್ರೋಮೋದಲ್ಲಿ ನಾವು ಶ್ರುತಿ ಅವರು ಮನೆಗೆ ಬಂದು ನ್ಯಾಯಮೂರ್ತಿ ಆಗಿರೋದನ್ನು ಕಾಣಬಹುದಾಗಿದೆ. KCC Cricket Match ಆಗ್ತಾ ಇರೋದ್ರಿಂದ ಕಿಚ್ಚ ಸುದೀಪ್ ಅವರು ಬ್ಯುಸಿ ಇರಬಹುದು ಎಂಬುದು ಕೇಳಿ ಬರ್ತಾ ಇದೆ.
ಮನೆಯವರಿಗೆ ಬಿಸಿ ಮುಟ್ಟಿಸಿದ ಶ್ರುತಿ!
ಎಸ್, ಎಲ್ಲಿರಿಗೂ ಪ್ರಶ್ನೆಗಳನ್ನು ಕೇಳುತ್ತಾ ಬಿಸಿ ಮುಟ್ಟಿಸಿದ್ದಾರೆ ನಟಿ. ಕೆಲವು ಮಾಹಿತಿಗಳ ಪ್ರಕಾರ ಈ ವಾರ ಮನೆಯಿಂದ ಯಾರೂ ಎಲಿಮಿನೇಟ್ ಆಗಲ್ವಂತೆ! ಹೌದಾ? ಇನ್ನು ಕೆಲವೇ ವಾರಗಳು ಮಾತ್ರ ಬಾಕಿ ಇರೋದು, ಆದ್ರೂ ಯಾರೂ ಹೋಗಲ್ವಾ? ವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಬಹುದಾ? ಈ ಎಲ್ಲಾ ಪ್ರಶ್ನೆಗೆ ಈ ವಾರದ ಸಂಚಿಕೆನೇ ಉತ್ತರ ಕೊಡಬೇಕಾಗಿದೆ ಅಷ್ಟೆ.
