Bigg boss kannada: ಬಿಗ್ ಬಾಸ್ ನ ವೀಕೆಂಡಿನಲ್ಲಿ ವಾರದ ಕಥೆ ಕಿಚ್ಚನ ಜೊತೆ ಎಂದು ಸುದೀಪ್ ಜೊತೆ ಪಂಚಾಯಿತಿ ನಡೆಯುವುದು ವಾಡಿಕೆ. ಒಂದು ವಾರದ ಆಗು-ಹೋಗುಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಗುತ್ತದೆ. ಆದರೆ ಈಗ ಸದ್ಯ ಬಿಗ್ ಬಾಸ್ ನ ಪ್ರೋಮೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ನಟಿ ಶ್ರುತಿ ಅವರು ಬಿಗ್ ಬಾಸ್ ಮನೆಗೆ ಕೊಟ್ಟು ನ್ಯಾಯಾಧೀಶಯಾಗಿ ಪಂಚಾಯಿತಿಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಾರ ಕಚ್ಚನ ಮಾತುಕತೆ ಇರೋದಿಲ್ಲ ಎಂಬ ಸುದ್ದಿ ಹರಡುತ್ತಿದೆ.
ಹೌದು, ಬೆಳಿಗ್ಗೆ ಎಲ್ಲ ಸ್ಪರ್ಧಿಗಳೂ ನೋಡುತ್ತಿದ್ದ ಹಾಗೆಯೇ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಅದರಿಂದ ಹಿರಿಯ ನಟಿ, ಬಿಗ್‌ಬಾಸ್(Bigg boss kannada) ಸ್ಪರ್ಧೆಯ ವಿಜೇತೆಯೂ ಆಗಿರುವ ಶ್ರುತಿ ಅವರು ಮನೆಯೊಳಗೆ ಪ್ರವೇಶಿಸಿದ್ದಾರೆ. ಅವರನ್ನು ನೋಡುತ್ತಿದ್ದ ಹಾಗೆಯೇ ಮನೆಯ ಸದಸ್ಯರೆಲ್ಲರೂ ಖುಷಿಯಿಂದ ಕುಣಿದಾಡಿದ್ದಾರೆ. ಎಲ್ಲರೂ ಸಂತೋಷದ ಅಲೆಯಲ್ಲಿ ತೇಲುತ್ತಿರುವ ಹಾಗೆಯೇ ಕಟಕಟೆಯಲ್ಲಿ ನಿಲ್ಲುವ ಗಳಿಗೆ ಎದುರಾಗಿದೆ. ಶ್ರುತಿ ನ್ಯಾಯಾಧೀಶ ಕುರ್ಚಿಯಲ್ಲಿ ಕೂತಿದ್ದಾರೆ. ಸ್ಪರ್ಧಿಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡಿದ್ದಾರೆ.
ಇದನ್ನು ಓದಿ: Hijab Raw: ಹಿಜಾಬ್ ನಿಷೇಧ ವಾಪಸ್ ಕುರಿತು ಸಿಎಂ ಸಿದ್ದರಾಮಯ್ಯ ನೀಡಿದ್ರು ಬಿಗ್ ಅಪ್ಡೇಟ್; ಸ್ಪಷ್ಟನೆ ಕೊಟ್ಟ ಸಿಎಂ!
ಅಂದಹಾಗೆ ಒಬ್ಬೊಬ್ಬ ಸ್ಪರ್ಧಿಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡಿದ ಶ್ರುತಿ, ವಿನಯ್ ಅವರನ್ನು ಕರೆದು ಪ್ರಶ್ನಿಸಿದರು. ‘ವಿನಯ್ ಅವರು ವಾರಾಂತ್ಯದಲ್ಲಿ ಸುದೀಪ್ ಅವರ ಎದುರಿಗೇ ಒಂದು ರೀತಿ ಇರುತ್ತಾರೆ, ವಾರವಿಡೀ ಮನೆಯ ಸದಸ್ಯರ ಜತೆಗೆ ಇನ್ನೊಂದು ರೀತಿ ಇರುತ್ತಾರೆ?’ ಎಂಬ ಪ್ರಶ್ನೆಗೆ ಸಂಗೀತಾ ತುಂಬ ಪ್ರಬಲವಾಗಿ ಹೌದು ಎಂದಿದ್ದಾರೆ. ಅಷ್ಟೇ ಅಲ್ಲ, ಇಷ್ಟು ದಿನಗಳ ಕಾಲ ವಿನಯ್ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದ ನಮ್ರತಾ ಕೂಡ, ‘ನನಗೂ ಹಾಗೇ ಅನಿಸುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ವಿನಯ್(Vinay), ತಮ್ಮ ಎಂದಿನ ಉಡಾಪೆಯ ಧ್ವನಿಯಲ್ಲಿ, ‘ಇವ್ರತ್ರೆಲ್ಲ ನಾಟಕ ಮಾಡ್ಕೊಂಡು ನನಗೆ ಏನೂ ಆಗ್ಬೇಕಾಗಿಲ್ಲ’ ಎಂದಿದ್ದಾರೆ. ಅವರ ಟೋನ್ ಬಗ್ಗೆ ನ್ಯಾಯಾಧೀಶೆ ಶ್ರುತಿ, ‘ನನ್ನ ಬಳಿ, ನ್ಯಾಯಾಧೀಶರ ಬಳಿಯೇ ಧ್ವನಿ ಎತ್ತರಿಸಿ ಮಾತಾಡ್ತೀರಾ?’ ಎಂದು ಅಸಮಧಾನ ಹೊರಹಾಕಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಏನಿದು ಹೊಸ ಕಾರ್ಯಕ್ರಮ?
ಬಿಗ್‌ಬಾಸ್ ಮನೆಯೊಳಗೇ ಸೃಷ್ಟಿಯಾದ ಈ ನ್ಯಾಯಾಲಯದಲ್ಲಿ ಯಾರು ತಪ್ಪಿತಸ್ಥರಾಗುತ್ತಾರೆ? ಯಾರು ಬಿಡುಗಡೆಯಾಗುತ್ತಾರೆ? ಯಾರಿಗೆ ಜಾಮೀನು? ಯಾರಿಗೆ ಜೈಲು? ಕೊನೆಯಲ್ಲಿ ಈ ವಾರ ಯಾರು ಮನೆಯಿಂದಲೇ ಬಿಡುಗಡೆಯಾಗಿ ಹೋಗುತ್ತಾರೆ? ಈ ಎಲ್ಲ ಪ್ರಶ್ನೆಗೆ ಉತ್ತರ ಸಿಗಲು ಬಿಗ್‌ಬಾಸ್ ನೋಡಬೇಕಿದೆ.
