Home » Crime News: ವಿದ್ಯಾರ್ಥಿ ಜೊತೆಗೆ ಶಿಕ್ಷಕಿ ಎಸ್ಕೇಪ್: ಅಪ್ರಾಪ್ತ ವಿದ್ಯಾರ್ಥಿಯ ಹೇಳಿಕೆ ಕೇಳಿ ಪೊಲೀಸರೇ ಸುಸ್ತು!

Crime News: ವಿದ್ಯಾರ್ಥಿ ಜೊತೆಗೆ ಶಿಕ್ಷಕಿ ಎಸ್ಕೇಪ್: ಅಪ್ರಾಪ್ತ ವಿದ್ಯಾರ್ಥಿಯ ಹೇಳಿಕೆ ಕೇಳಿ ಪೊಲೀಸರೇ ಸುಸ್ತು!

1 comment
Crime News

Crime News: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ, ತಮಿಳುನಾಡಿನಲ್ಲಿ ವಿದ್ಯಾರ್ಜನೆ ಮಾಡಬೇಕಿದ್ದ ಶಿಕ್ಷಕಿಯೊಬ್ಬಳು 11ನೇ ತರಗತಿಯ ವಿದ್ಯಾರ್ಥಿಯ ಜೊತೆಗೆ ಎಸ್ಕೇಪ್ (Escape)ಆಗಿರುವ ಘಟನೆ (Crime News)ವರದಿಯಾಗಿದೆ.

ಶಿಕ್ಷಕಿ ಮತ್ತು ವಿದ್ಯಾರ್ಥಿ ಇಬ್ಬರು ಚೆನ್ನೈನ ಶೋಲಿಂಗನಲ್ಲೂರಿನಲ್ಲಿರುವ ಖಾಸಗಿ ಶಾಲೆಯವರಾಗಿದ್ದು,ಆರೋಪಿ ಶಿಕ್ಷಕಿ ಇಂಗ್ಲಿಷ್ ಭಾಷೆಯನ್ನು ಬೋಧಿಸುತ್ತಿದ್ದರು ಎಂದು ತಿಳಿದುಬಂದಿದೆ. ಶಿಕ್ಷಕಿ ಕೆಲವು ವರ್ಷಗಳ ಹಿಂದೆ ಗಂಡನಿಂದ ಬೇರೆಯಾಗಿ ಪ್ರತ್ಯೇಕವಾಗಿ ನೆಲೆಸಿದ್ದಳು ಎನ್ನಲಾಗಿದೆ. ಈ ನಡುವೆ ಶಾಲೆಯ 17 ವರ್ಷದ ವಿದ್ಯಾರ್ಥಿಯ ಜೊತೆಗೆ ಸ್ನೇಹ ಬೆಳೆದು ಈ ಸ್ನೇಹ ವಿವಾಹೇತರ ಸಂಬಂಧದವರೆಗೆ ತಲುಪಿತ್ತು ಎನ್ನಲಾಗಿದೆ. ಶಿಕ್ಷಕಿ ಹಾಗೂ ವಿದ್ಯಾರ್ಥಿ ಇಬ್ಬರು ಕೊಯಮತ್ತೂರಿಗೆ ಎಸ್ಕೇಪ್ ಆಗಿದ್ದರೆನ್ನಲಾಗಿದೆ.

ಇದನ್ನು ಓದಿ: Food Poison: ಪರೋಟ ತಂದಿತ್ತು ಜೀವಕ್ಕೆ ಕುತ್ತು: ಮರಣೋತ್ತರ ಪರೀಕ್ಷೆ ವೇಳೆ ಬಯಲಾಯಿತು ರೋಚಕ ಸತ್ಯ!

ಕಳೆದ ಮಂಗಳವಾರ ವಿದ್ಯಾರ್ಥಿ ಶಾಲೆಯಿಂದ ಮನೆಗೆ ಹಿಂತಿರುಗದ ಹಿನ್ನೆಲೆ ಗಾಬರಿಗೊಂಡು ಪಾಲಕರು ಶಾಲೆಯಲ್ಲಿ ಮಗನ ಬಗ್ಗೆ ವಿಚಾರಿಸಿದಾಗ ಮಗ ಶಾಲೆಗೆ ಹೋಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ, ಪೋಷಕರು ಚೆನ್ನೈನ ಥಾಲಂಬುರ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ ಸಂದರ್ಭ ವಿದ್ಯಾರ್ಥಿ ಶಾಲೆಗೆ ಗೈರಾದ ದಿನವೇ ಶಿಕ್ಷಕಿ ಗೈರಾಗಿದ್ದರು. ಇದರ ನಡುವೆ, ಪೊಲೀಸರು ಇಬ್ಬರ ಮೊಬೈಲ್ ಟವರ್ ಲೊಕೇಶನ್ ಟ್ರ್ಯಾಕ್ ಮಾಡಿದಾಗ ಕೊಯಮತ್ತೂರಿನ ಕರಮಡೈನಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಪೊಲೀಸರು ಅಲ್ಲಿಗೆ ತೆರಳಿ ಇಬ್ಬರನ್ನು ವಶಕ್ಕೆ ಪಡೆದು ಚೆನ್ನೈಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.

You may also like

Leave a Comment