Home » Winter Bath: ಚಳಿಗಾಲದಲ್ಲಿ ಪ್ರತಿ ದಿನವೂ ಸ್ನಾನ ಮಾಡುತ್ತೀರಾ ?! ಇದು ಎಷ್ಟು ಡೇಂಜರ್ ಗೊತ್ತಾ?!

Winter Bath: ಚಳಿಗಾಲದಲ್ಲಿ ಪ್ರತಿ ದಿನವೂ ಸ್ನಾನ ಮಾಡುತ್ತೀರಾ ?! ಇದು ಎಷ್ಟು ಡೇಂಜರ್ ಗೊತ್ತಾ?!

22 comments
Winter Bath

Winter Bath: ಚಳಿಗಾಲ ಬಂದರೆ ಬೆಳಿಗ್ಗೆ ಹೊತ್ತಲ್ಲಿ ನೀರು ಮುಟ್ಟಲು ಹಿಂದೇಟು ಹಾಕುವ ಅದೆಷ್ಟೋ ಮಂದಿಯನ್ನು ನೋಡಿರಬಹುದು. ಚಳಿಯಲ್ಲಿ ಪ್ರತಿದಿನ ಸ್ನಾನ(Winter Bath) ಮಾಡುವುದರಿಂದ ಶೀತ, ಜ್ವರ, ನೆಗಡಿ ಮುಂತಾದ ವಿವಿಧ ರೀತಿಯ ಸಮಸ್ಯೆಗಳು ಕಂಡುಬರಬಹುದು. ಹಾಗಾಗಿ ಈ ಸಮಯದಲ್ಲಿ ಬಿಸಿನೀರಿನಲ್ಲಿ ಸ್ನಾನ ಮಾಡುವುದು ಸಾಮಾನ್ಯ ಆದರೆ, ಸ್ನಾನ ಮಾಡುವಾಗ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಅವಶ್ಯಕ.ಚಳಿಗಾಲದಲ್ಲಿ ಪ್ರತಿನಿತ್ಯ ಸ್ನಾನ ಮಾಡುವುದರಿಂದ ಈ ರೋಗಗಳು(Winter bath side effects) ಬರುವ ಸಾಧ್ಯತೆಗಳಿವೆ.

# ದೇಹಕ್ಕೆ ಹೆಚ್ಚಿನ ಹಾನಿ
ಚಳಿಗಾಲದಲ್ಲಿ ಪ್ರತಿದಿನ ಬಿಸಿನೀರಿನೊಂದಿಗೆ ಸ್ನಾನ ಮಾಡುವುದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಹಾನಿಯಾಗಬಹುದು. ಅದರಲ್ಲಿಯೂ ಅಪ್ಪಿತಪ್ಪಿ ಕೂಡ ನಿಮ್ಮ ಕೂದಲನ್ನು ಬಿಸಿ ನೀರಿನಿಂದ ತೊಳೆಯಬಾರದು. ಏಕೆಂದರೆ, ಬಿಸಿ ನೀರಲ್ಲಿ ಹೆಚ್ಚು ಸ್ನಾನ ಮಾಡಿದರೆ ಕೂದಲು ಒಣಗುವ ಇಲ್ಲವೇ ದುರ್ಬಲವಾಗುವ ಸಂಭವ ಹೆಚ್ಚು.

# ಚರ್ಮ ಅತಿಯಾಗಿ ಒಣಗುತ್ತದೆ
ಚಳಿಯಲ್ಲಿ ದಿನವೂ ಸ್ನಾನ ಮಾಡುವ ಅಭ್ಯಾಸ ಕೆಲವರು ಇಟ್ಟುಕೊಂಡಿರುತ್ತಾರೆ. ಚಳಿಗಾಲದಲ್ಲಿ ಪ್ರತಿನಿತ್ಯ ಸ್ನಾನ ಮಾಡುವುದರಿಂದ ಚರ್ಮವು ಅತಿಯಾಗಿ ಒಣಗುವ ಸಾಧ್ಯತೆ ಹೆಚ್ಚಿದೆ.

ಇದನ್ನು ಓದಿ: C T Ravi: ಚಿಕ್ಕಮಗಳೂರಿನ ಮನೆ ಮನೆಗೆ ತೆರಳಿ ಸಿ. ಟಿ ರವಿ ಅವರಿಂದ ಭಿಕ್ಷಾಟನೆ !!

# ದೇಹದಲ್ಲಿ ದೌರ್ಬಲ್ಯ
ದಿನನಿತ್ಯದ ಸ್ನಾನ ಮಾಡುವ ಅಭ್ಯಾಸ ಇಟ್ಟುಕೊಂಡರೆ ಇದರಿಂದ ದೇಹದ ಉತ್ತಮ ಬ್ಯಾಕ್ಟೀರಿಯಾ ತೆಗೆದುಹಾಕುತ್ತದೆ. ಇದು ದೇಹದಲ್ಲಿ ದೌರ್ಬಲ್ಯವನ್ನು ಉಂಟುಮಾಡುವ ಜೊತೆಗೆ. ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಕೂಡ ಅಡ್ಡ ಪರಿಣಾಮ ಬೀರುತ್ತದೆ.

# ಚರ್ಮದ ಸೋಂಕಿನ ಅಪಾಯ
ಚಳಿಗಾಲದಲ್ಲಿ ಪ್ರತಿದಿನ ಸ್ನಾನ ಮಾಡುವುದರಿಂದ ಚರ್ಮದ ಸೋಂಕಿನ ಅಪಾಯ ಹೆಚ್ಚಾಗುವ ಸಾಧ್ಯತೆಗಳಿವೆ. ಪ್ರತಿನಿತ್ಯ ತಣ್ಣೀರು ಸ್ನಾನ ಮಾಡುವುದರಿಂದ ಶೀತ,ಕೆಮ್ಮು ಮೊದಲಾದ ಸಮಸ್ಯೆಗಳು ಎದುರಾಗಬಹುದು.

# ಮಕ್ಕಳಿಗೆ ಸ್ನಾನ ಮಾಡಿಸಬಾರದು
ಚಿಕ್ಕ ಮಕ್ಕಳಿಗೆ ನೀವು ಪ್ರತಿದಿನ ತಂಪಾದ ವಾತಾವರಣದಲ್ಲಿ ಸ್ನಾನ ಮಾಡಿಸಿದರೆ ಮಕ್ಕಳಿಗೆ ರೋಗಗಳು ಕಾಡಬಹುದು.

ಈ ನಿಟ್ಟಿನಲ್ಲಿ ಚಳಿಗಾಲದಲ್ಲಿ ಪ್ರತಿದಿನ ಸ್ನಾನ ಮಾಡುವಾಗ ಅತೀ ಬಿಸಿ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಿ, ದೇಹ ಮತ್ತು ಕೂದಲಿನ ರಕ್ಷಣೆಗೆ ಆದ್ಯತೆ ನೀಡಿ.

You may also like

Leave a Comment