Home » Agricultural Idea: ವಿಶ್ವದ ಅತ್ಯಂತ ದುಬಾರಿ ಆಗಿರೋ ಈ ಮಸಾಲೆಯನ್ನು ಮನೆಯಲ್ಲೂ ಬೆಳೆಯಬಹುದಂತೆ !! ಹೇಗೆ ಗೊತ್ತಾ?

Agricultural Idea: ವಿಶ್ವದ ಅತ್ಯಂತ ದುಬಾರಿ ಆಗಿರೋ ಈ ಮಸಾಲೆಯನ್ನು ಮನೆಯಲ್ಲೂ ಬೆಳೆಯಬಹುದಂತೆ !! ಹೇಗೆ ಗೊತ್ತಾ?

1 comment
Agricultural Idea

saffron growing: ಭಾರತದಲ್ಲಿ ಅನೇಕ ವಿಧದ ಮಸಾಲೆಗಳನ್ನು ಬೆಳೆಯುವುದು ಗೊತ್ತಿರುವ ಸಂಗತಿ. ಮಸಾಲೆ ಪ್ರಪಂಚದಲ್ಲೇ ಅತ್ಯಂತ ದುಬಾರಿ ಮಸಾಲೆ ಯಾವುದು ಗೊತ್ತಾ? ಇದನ್ನು ನೀವು ಮನೆಯಲ್ಲಿ ಹೇಗೆ ಬೆಳೆಯಬಹುದು ಎಂಬ ಡೀಟೈಲ್ಸ್ ಇಲ್ಲಿದೆ ನೋಡಿ!!

ಪ್ರಪಂಚದಲ್ಲೇ ಅತ್ಯಂತ ದುಬಾರಿ ಮಸಾಲೆ ಎಂದರೆ ಅದು ಕೇಸರಿ(saffron growing). ಇದನ್ನೂ ಹೆಚ್ಚಾಗಿ ಶೀತ ಸ್ಥಳಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ. ಭಾರತದಲ್ಲಿ, ಇದನ್ನು ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಮಾತ್ರ ಬೆಳೆಸಲಾಗುವ ಹಿನ್ನೆಲೆ ಕೇಸರಿ ಬೆಲೆ ಗಗನ ಕುಸುಮವಾಗಿದೆ. ಹೌದು!! ಕೇಸರಿ ಬೆಲೆ ಕೆಜಿಗೆ ಸುಮಾರು ಲಕ್ಷ ರೂ. ಗೂ ಅಧಿಕವಾಗಿದೆ.

ಭಾರತದಲ್ಲಿ ಒರಿಜಿನಲ್ ಕೇಸರಿ ಬೆಲೆ ಎಷ್ಟಿದೆ ಎಂದು ಗಮನಿಸಿದರೆ, ಕಾಶ್ಮೀರದ ಬುದ್ಗಾಮ್‌ನಲ್ಲಿ ಬೆಳೆಯುವ ಕೇಸರಿಗೆ ಪ್ರತಿ ಕೆಜಿಗೆ ಸುಮಾರು 5 ಲಕ್ಷ ರೂ. ಆಗಿದೆ. ಇದನ್ನು ಅತ್ಯುತ್ತಮ ಕೇಸರಿ ಎಂದು ಪರಿಗಣಿಸಲಾಗಿದೆ. ನೀವು ಕೂಡ ಒಂದು ವೇಳೆ ಮನೆಯಲ್ಲಿ ಕೇಸರಿ (saffron growing at home)ಬೆಳೆಯಲು ಇಚ್ಚಿಸಿದರೆ, ಕಾಶ್ಮೀರದ ಬುಡ್ಗಾಮ್ ಋತುವಿನ ರೀತಿಯಲ್ಲಿಯೇ ಬೆಳೆಯಬೇಕು. ಅಂದರೆ, ಮೊದಲು ಖಾಲಿ ಜಾಗದಲ್ಲಿ ಏರೋಪೋನಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ನೀವು ಕೊಠಡಿಯನ್ನು ಅಭಿವೃದ್ಧಿಪಡಿಸಬೇಕು.ಇದರ ಜೊತೆಗೆ ಅಲ್ಲಿ ಗಾಳಿಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದ್ದು, ಈ ಒಂದು ಕೋಣೆಯ ಮೂಲಕ ನೀವು ಕೇಸರಿ ಬೆಳೆಸಬಹುದು.

Agricultural Idea

ಕೇಸರಿ ಕೃಷಿ ಮಾಡಲು ಮಣ್ಣು ಮರಳು, ಜೇಡಿಮಣ್ಣು, ಮರಳು ಅಥವಾ ಲೋಮಮಿ ಬೇಕಾಗುತ್ತದೆ. ಏರೋಪೋನಿಕ್ ರಚನೆಯಲ್ಲಿ ಮಣ್ಣನ್ನು ಪುಡಿಮಾಡಿದ ನಂತರ ಮಾತ್ರ ಹಾಕಬೇಕು. ನೀರು ಸಂಗ್ರಹವಾಗದ ರೀತಿಯಲ್ಲಿ ಹೊಂದಿಸಿಕೊಂಡು ಇದರ ನಂತರ, ಸಾರಜನಕ, ರಂಜಕ, ಪೊಟ್ಯಾಷ್ ಮತ್ತು ಹಸುವಿನ ಸಗಣಿ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಿದರೆ ಕೇಸರಿ ಉತ್ತಮ ಇಳುವರಿಯನ್ನು ಪಡೆಯಬಹುದು. ಇದರಲ್ಲಿ ಮುಖ್ಯವಾಗಿ ಇಲ್ಲಿನ ತಾಪಮಾನವು ಹಗಲಿನಲ್ಲಿ 17 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿಯಲ್ಲಿ 10 ಡಿಗ್ರಿ ಸೆಲ್ಸಿಯಸ್ ಆಗಿರಬೇಕು ಎಂಬುದನ್ನು ಗಮನಿಸಬೇಕು. ಕೇಸರಿ ಉತ್ತಮ ಇಳುವರಿ ಪಡೆಯಲು ಕೊಠಡಿಯನ್ನು 80-90 ಡಿಗ್ರಿ ಆರ್ದ್ರತೆಯಲ್ಲಿ ಇರಿಸಬೇಕು.

ಇದನ್ನು ಓದಿ: Tarikere News: ಅಜ್ಜ ನಿದ್ರೆಗೆ ಜಾರಿದಾಗ ಬಸ್‌ನಿಂದ ಇಳಿದ ಮೂರು ವರ್ಷದ ಮಗು! ಪತ್ತೆಯಾಗಿದ್ದು ಹೇಗೆ ಗೊತ್ತೇ?

You may also like

Leave a Comment