Home » Heart Attack: ಅಡುಗೆ ಮಾಡುತಿದ್ದ ವೇಳೆ ಕುಸಿದ 22 ವರ್ಷದ ಯುವಕ; ಹೃದಯಾಘಾತದಿಂದ ಸಾವು!!

Heart Attack: ಅಡುಗೆ ಮಾಡುತಿದ್ದ ವೇಳೆ ಕುಸಿದ 22 ವರ್ಷದ ಯುವಕ; ಹೃದಯಾಘಾತದಿಂದ ಸಾವು!!

1 comment

ಅಡುಗೆ ಮಾಡುತ್ತಿದ್ದ ವೇಳೆ ಯುವಕನೋರ್ವ ಕುಸಿದು ಮೃತಪಟ್ಟಿರುವ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

ಭೋಪಾಲ್‌ನ ಟಿಐಟಿ ಕಾಲೇಜಿನ ಎಂಬಿಎ ವಿದ್ಯಾರ್ಥಿ ವಿವೇಕ್‌ ಸೋನಿ (22) ಎಂಬಾತನೇ ಮೃತ ಯುವಕ.

ಈತ ತನ್ನ ಸ್ನೇಹಿತರೊಂದಿಗೆ ಅಯೋಧ್ಯನಗರದಲ್ಲಿ ವಾಸ ಮಾಡುತ್ತಿದ್ದ. ಸೋಮವಾರ ರಾತ್ರಿ 8 ಗಂಟೆಯ (ಡಿ.25) ರ ಸುಮಾರಿಗೆ ಫ್ಲ್ಯಾಟ್‌ನಲ್ಲಿ ಓದುತ್ತಿದ್ದ ಈತ ಅಡುಗೆ ಮಾಡಲೆಂದು ಹೋಗಿದ್ದಾನೆ. ಈ ವೇಳೆ ಆತ ತನಗೆ ಎದೆನೋವು ಆಗುತ್ತಿದೆ ಎಂದು ಸ್ನೇಹಿತರಲ್ಲಿ ಹೇಳಿದ್ದ. ಅದೇ ನೋವಿನಲ್ಲಿ ಅಡುಗೆ ಮಾಡಲು ಹೋಗಿದ್ದಾನೆ.

ಆದರೆ ತರಕಾರಿ ಕತ್ತರಿಸುವ ಸಮಯದಲ್ಲಿ ಎದೆಗೆ ಕೈಯಿಟ್ಟುಕೊಂಡೇ ಕುಸಿದ ವಿವೇಕನನ್ನು ಕೂಡಲೇ ಆತನ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿದ್ದ ವೈದ್ಯರು ಆತನನ್ನು ಪರಿಶೀಲಿಸಿದಾಗ ಹೃದಯಾಘಾತದಿಂದ ಮೃತ ಹೊಂದಿರುವುದಾಗಿ ಹೇಳಿದ್ದಾರೆ.

ಇದನ್ನು ಓದಿ: School Holiday: ಇಂದು ಈ ರಾಜ್ಯದ ಈ ಊರುಗಳಲ್ಲಿ ಶಾಲಾ ಕಾಲೇಜಿಗೆ ರಜೆ!!!

You may also like

Leave a Comment