Home » Actor Vijayakanth: ತಮಿಳು ಚಿತ್ರರಂಗದ ʼಯಜಮಾನʼ ವಿಜಯಕಾಂತ್‌ ನಿಧನ!!

Actor Vijayakanth: ತಮಿಳು ಚಿತ್ರರಂಗದ ʼಯಜಮಾನʼ ವಿಜಯಕಾಂತ್‌ ನಿಧನ!!

0 comments
Actor Vijayakanth

Vijayakant Passes Away: ತಮಿಳು ಚಿತ್ರರಂಗದ ನಟ, ಡಿಎಂಡಿಕೆ ನಾಯಕ ವಿಜಯಕಾಂತ್‌ ಅವರು ಕೋವಿಡ್‌ನಿಂದ ಬಳಲುತ್ತಿದ್ದು,  ಗುರುವಾರ, ಡಿಸೆಂಬರ್ 28, 2023 ರಂದು ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಯಜಮಾನ ಸಿನಿಮಾದ ಮೂಲ ಚಿತ್ರವಾದ ವಾನತೈ ಪೋಲಾ ಅದ್ಭುತ ವಿಜಯ ಗಳಿಸಿದ್ದು, ಇದೇ ಚಿತ್ರವನ್ನು ಕನ್ನಡದಲ್ಲಿ ನಟ ವಿಷ್ಣುವರ್ಧನ್‌ ನಾಯಕತ್ವದಲ್ಲಿ ಯಜಮಾನ ಹೆಸರಿನಲ್ಲಿ ರಿಮೇಕ್‌ ಮಾಡಲಾಗಿತ್ತು.

MIOT ಆಸ್ಪತ್ರೆಯ ಹೇಳಿಕೆಯ ಪ್ರಕಾರ, ‘ಕ್ಯಾಪ್ಟನ್’ ವಿಜಯಕಾಂತ್ ಅವರು ಅಸೌಖ್ಯದಿಂದ ಬಳಲುತ್ತಿದ್ದು ವೆಂಟಿಲೇಟರ್‌ ನಲ್ಲಿ ಇಡಲಾಗಿತ್ತು. ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಅವರು 28 ಡಿಸೆಂಬರ್ 2023 ರಂದು ಬೆಳಿಗ್ಗೆ ನಿಧನರಾದರು ಎಂದು ಆಸ್ಪತ್ರೆ ತಿಳಿಸಿದೆ.

ಇದನ್ನು ಓದಿ: Love Jihad: ಶಿವಮೊಗ್ಗದಲ್ಲಿ ಲವ್‌ಜಿಹಾದ್‌? ಯುವಕ-ಯುವತಿ ಅಪ್ಪಿಕೊಂಡು ಕುಳಿತಿರುವ ವೀಡಿಯೋ ವೈರಲ್‌!!!

ಈ ಹಿಂದೆ ಕೂಡಾ ವಿಜಯಕಾಂತ್ ಅವರು ಜ್ವರದ ಕಾಯಿಲೆಯ ಚಿಕಿತ್ಸೆಗಾಗಿ ನವೆಂಬರ್ 18 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಡಿಸೆಂಬರ್ 11, 2023 ರಂದು ಡಿಸ್ಚಾರ್ಜ್ ಆಗಿದ್ದರು. ಇದೀಗ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ನಟ ವಿಜಯಕಾಂತ್‌ ಅವರ ನಿಧನಕ್ಕೆ ತಮಿಳು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

You may also like

Leave a Comment