Home » Bantwala: ಓವರ್‌ಟೇಕ್‌ ಭರದಲ್ಲಿ ಬೈಕ್‌ ಸ್ಕಿಡ್‌; ಸಹಸವಾರನ ಮೇಲೆ ಹರಿದ ಲಾರಿ, ಸ್ಥಳದಲ್ಲೇ ಯುವಕ ಮೃತ್ಯು!!!

Bantwala: ಓವರ್‌ಟೇಕ್‌ ಭರದಲ್ಲಿ ಬೈಕ್‌ ಸ್ಕಿಡ್‌; ಸಹಸವಾರನ ಮೇಲೆ ಹರಿದ ಲಾರಿ, ಸ್ಥಳದಲ್ಲೇ ಯುವಕ ಮೃತ್ಯು!!!

1 comment

Bantwala: ಬಿ.ಸಿ.ರೋಡಿನ ಸರ್ಕಲ್‌ ಬಳಿ ಲಾರಿಯೊಂದು ಡಿಕ್ಕಿಯಾಗಿ ದ್ವಿಚಕ್ರವಾಹನ ಸಹಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆಯೊಂದು ಶುಕ್ರವಾರ ರಾತ್ರಿ 11 ಗಂಟೆ ನಡೆದಿದೆ.

ಬೆಂಗ್ರೆ ನಿವಾಸಿ ರಮೀಜ್‌ (20) ಎಂಬಾತನೇ ಮೃತ ಯುವಕ ಎಂದು ವರದಿಯಾಗಿದೆ.

ಓವರ್‌ ಟೇಕ್‌ ಮಾಡುವ ಭರದಲ್ಲಿ  ಬೈಕ್‌ ಸ್ಕಿಡ್‌ ಆಗಿ ಡಾಮರು ರಸ್ತೆಗೆ ಸಹಸವಾರ ಬಿದ್ದಿದ್ದು, ಆತನ ಮೇಲೆ ಲಾರಿ ಹರಿದು ಯುವಕ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಘಟನೆಯ ನಂತರ ಲಾರಿ ಚಾಲಕ ಪರಾರಿಯಾಗಿದ್ದು, ಪೊಲೀಸರು ಲಾರಿಯನ್ನು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: ಪುತ್ತೂರು: ನಗರಸಭೆಯ 2 ಸ್ಥಾನಗಳ ಉಪಚುನಾವಣೆ,ಕಾಂಗ್ರೆಸ್ , ಬಿಜೆಪಿ ತಲಾ 1 ರಲ್ಲಿ ಗೆಲುವು

ಅಜಿಲಮೊಗರು ಮಸೀದಿಯಲ್ಲಿ ನಡೆಯುವ ಉರೂಸ್‌ ಕಾರ್ಯಕ್ರಮಕ್ಕೆ ಸ್ನೇಹಿತನ ಜೊತೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಂಟ್ವಾಳ ಟ್ರಾಫಿಕ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿದ್ದಾರೆ.

You may also like

Leave a Comment