Ira-Nupur Marriage: ಅಮೀರ್ ಖಾನ್ ಪುತ್ರಿ ಇರಾ ಖಾನ್ ಜ.3 ರಂದು ತಮ್ಮ ಬಹುಕಾಲದ ಗೆಳೆಯನ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಸಾಮಾನ್ಯವಾಗಿ ಬಾಲಿವುಡ್ ನಟ, ನಟಿಯರ ಮಕ್ಕಳ ಮದುವೆ ಎಂದರೆ ಅಲ್ಲಿ ಅದ್ಧೂರಿತನ ಇದ್ದೇ ಇರುತ್ತದೆ. ಅವರ ಬಟ್ಟೆ, ಆಭರಣ ಕಣ್ಣು ಕುಕ್ಕುವಂತೆ ಇರುತ್ತದೆ.
ಆದರೆ ಅಮೀರ್ ಅವರ ಮಗಳ ವಿವಾಹ ಸಮಾರಂಭದಲ್ಲಿ ಇರಾ-ನೂಪುರ್ ವಿವಾಹದಲ್ಲಿ ನೂಪುರ್ ಧರಿಸಿದ್ದ ಬಟ್ಟೆ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ. ಯಾಕೆ? ಅಷ್ಟು ಚೆನ್ನಾಗಿತ್ತೇ ಎಂಬ ಪ್ರಶ್ನೆ ನಿಮ್ಮಲ್ಲಿ ಎದ್ದಿರಬಹುದು. ಆದರೆ ಅದಲ್ಲ ಅಮೀರ್ ಖಾನ್ ಕುಟುಂಬದ ಜೊಎಗೆ ಅಂಬಾನಿ ಕುಟುಂಬ ಕೂಡಾ ಭಾಗವಹಿಸಿದ ಈ ಮದುವೆಯಲ್ಲಿ ಅಮೀರ್ ಅಳಿಯ ಯಾರಿಗೂ ಕೇರ್ ಮಾಡದೆ ಚಡ್ಡಿ ಬನಿಯನ್‌ನಲ್ಲಿ ವಿವಾಹ ನೋಂದಣಿ ಕೆಲಸ ಪೂರೈಸಿದ್ದು ಬಹಳ ಮಟ್ಟಿನ ಸುದ್ದಿಯಾಗಿದೆ.

ಇದೇನು ಚಡ್ಡಿ ಬನ್ನಿಯನ್ನ ಎಂದು ಜನ ಪರಿ ಪರಿಯಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ.
ಇದನ್ನು ಓದಿ: Bengaluru Crime News: ಎದೆಗೆ ಗುಂಡು ಹಾರಿಸಿ ವಿದ್ಯಾರ್ಥಿ ಆತ್ಮಹತ್ಯೆ!!!
ಇರಾ ದುಬಾರಿ ಲೆಹಂಗಾ ಹಾಕಿ ಮಿರ ಮಿರ ಮಿಂಚುತ್ತಿದ್ದರೆ. ಇತ್ತ ಮದುವೆ ವರ ಮಾತ್ರ ಕಪ್ಪು ಬನಿಯನ್, ಬಿಳಿ ಚಡ್ಡಿ ಧರಿಸಿದ್ದು ಬಹಳ ವಿಚಿತ್ರವಾಗಿತ್ತು. ಈ ಕುರಿತ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಆಮೀರ್ ತಮ್ಮ ಅಳಿಯನಿಗೆ ಹೊಸ ಬಟ್ಟೆ ಕೊಡಿಸಲಿಲ್ಲವೇ’ ಎಂದು ಇನ್ನೊಬ್ಬ ನೆಟ್ಟಿಗರು ಕೇಳಿದ್ದಾರೆ
ಇದಿಷ್ಟು ಅಲ್ಲದೇ ವರ ನೂಪುರ್ ಇದೇ ಚಡ್ಡಿ ಬನಿಯನ್‌ನಲ್ಲಿ ಎಂಟು ಕಿ.ಮೀ. ಓಡಿಕೊಂಡು ಬಂದಿದ್ದಾರೆ. ಇದೊಂದು ಅಸಹ್ಯವಾಗಿ ಕಾಣುವ ಮದುವೆ ಎಂದು ನೆಟ್ಟಿಗೊಬ್ಬರು ಕಮೆಂಟ್ ಮಾಡಿದ್ದಾರೆ.
https://twitter.com/i/status/1742574067914350947
