Home » Kiccha Sudeep: ಸುದೀಪ್ ನಟನೆಯ ಮ್ಯಾಕ್ಸ್ ಶೂಟಿಂಗ್ ಪುನರಾರಂಭ!

Kiccha Sudeep: ಸುದೀಪ್ ನಟನೆಯ ಮ್ಯಾಕ್ಸ್ ಶೂಟಿಂಗ್ ಪುನರಾರಂಭ!

1 comment
Kiccha Sudeep

ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದ ಶೂಟಿಂಗ್ ಮತ್ತೆ ಆರಂಭವಾಗಿದೆ. ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇದೊಂದು ಗುಡ್ ನ್ಯೂಸ್ ಅಂತಲೇ ಹೇಳಬಹುದು. ಎಸ್, ಕಿಚ್ಚನ 46 ನೆ ಸಿನಿಮಾ ಇದಾಗಿದ್ದು ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳುತ್ತಾ ಇದ್ದಾರೆ.

Kiccha Sudeep

ಇದನ್ನು ಓದಿ: Weight Loss Tips: ರಾತ್ರಿ ಹೀಗೆ ಊಟ ಮಾಡಿದ್ರೆ ಪಕ್ಕಾ ಒಂದೇ ತಿಂಗಳಿನಲ್ಲಿ ಸ್ಲಿಮ್ ಆಗ್ತೀರ!

ಈ ಸಿನಿಮಾದ ಸೆಟ್ ತಮಿಳುನಾಡಿನಲ್ಲಿ ಹಾಕಲಾಗಿದೆ. ಡಿಸೆಂಬರ್ ನಲ್ಲಿ ಮಳೆಯ ಕಾರಣದಿಂದಾಗಿ ಶೂಟಿಂಗ್ ನಿಲ್ಲಿಸಲಾಗಿತ್ತು. ಹೀಗಾಗಿ 2023 ತೆರೆಗೆ ಬಂದಿಲ್ಲ. ಹಾಗೆಯೇ ಕನ್ನಡ ಚಲನಚಿತ್ರ ಕಪ್ (KCC) ಮ್ಯಾಚ್ ಇರೋದ್ರಿಂದ ಸುದೀಪ್ ಕೂಡ ಬ್ಯುಸಿ ಇದ್ದರು. ಇದೀಗ ಮತ್ತೆ ಶೂಟಿಂಗ್ ಆರಂಭವಾಗಿದೆ.

ಸಿನಿಮಾದಲ್ಲಿ ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ ಎಂಬುದು ಅಲ್ಲಲ್ಲಿ ಕೇಳಿ ಬರ್ತಾ ಇದೆ. ಇನ್ನು ನಟಿ ಸಂಯುಕ್ತ ಹೊರನಾಡು ಈ ಸಿನಿಮಾದಲ್ಲಿ ಆಕ್ಟ್ ಮಾಡುತ್ತಿದ್ದು, ವಿ ಕ್ರಿಯೇಷನ್ಸ್ ಪ್ರೊಡಕ್ಷನ್ ಮಾಡ್ತಾ ಇದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವರ್ಷದ ಮೊದಲಾರ್ಧದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಹೆಚ್ಚಿದೆ.

You may also like

Leave a Comment