Home » Congress: ಬಿಜೆಪಿಯ ‘ನನನ್ನು ಬಂಧಿಸಿ’ ಅಭಿಯಾನಕ್ಕೆ ಕಾಂಗ್ರೆಸ್ ನಿಂದ ಸಖತ್ ಕೌಂಟರ್ – ಬಿಜೆಪಿ ನಾಯಕರ ಮರ್ಯಾದೆಯನ್ನೇ ಹಾರಜಾಕಿದ ‘ಕೈ’ ಪಡೆಯ ಹೊಸ ಪೋಸ್ಟರ್

Congress: ಬಿಜೆಪಿಯ ‘ನನನ್ನು ಬಂಧಿಸಿ’ ಅಭಿಯಾನಕ್ಕೆ ಕಾಂಗ್ರೆಸ್ ನಿಂದ ಸಖತ್ ಕೌಂಟರ್ – ಬಿಜೆಪಿ ನಾಯಕರ ಮರ್ಯಾದೆಯನ್ನೇ ಹಾರಜಾಕಿದ ‘ಕೈ’ ಪಡೆಯ ಹೊಸ ಪೋಸ್ಟರ್

1 comment
Congress

Congress: ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿಯ ಹೋರಾಟಗಾರನನ್ನು ಮೂವತ್ತು ವರ್ಷಗಳ ಬಳಿಕ ಬಂಧಿಸಿರುವುದಕ್ಕೆ ಬಿಜೆಪಿಯು ಭಾರೀ ಅಕ್ರೋಶ ವ್ಯಕ್ತಪಡಿಸುತ್ತಿದ್ದು, ಬಿಜೆಪಿ ನಾಯಕರೆಲ್ಲರೂ ನಾನೂ ಕೂಡ ರಾಮನಸೇವಕ, ಕರಸೇವಕ ನನ್ನನ್ನು ಬಂಧಿಸಿ ಎಂದು ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಕೌಂಟರ್ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್(Congress)ಹೊಸ ಪೋಸ್ಟರ್ ರಿಲೀಸ್ ಮಾಡಿ, ಬಿಜೆಪಿಗರ ಮಾನ ಹರಾಜಾಕಿದೆ.

ಹೌದು, ಬಿಜೆಪಿ ನಾಯಕರಾದ ಸಿಟಿ ರವಿ, ಸುನಿಲ್ ಕುಮಾರ್, ಕೆ ಎಸ್ ಈಶ್ವರಪ್ಪ ಹಾಗೂ ಪ್ರತಾಪ್ ಸಿಂಹ ಅವರು ನನ್ನನ್ನೂ ಬಂಧಿಸಿ ಎಂದು ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಕೌಂಟರ್ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಹೊಸ ಪೋಸ್ಟರ್ ರಿಲೀಸ್ ಮಾಡಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Karnataka government: ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿಬಿದ್ದ ಮುಸ್ಲಿಂ ಮುಖಂಡರು !!

ಅದರಲ್ಲಿ ಪ್ರತಾಪ್ ಸಿಂಹ ಅವರೇ, ನೀವು ಈ ಪೋಸ್ಟರ್ ಹಿಡಿದು ಕೂರುವ ಧೈರ್ಯ ತೋರಿಸಿ, ನಿಮ್ಮವರೇ ಹೇಳುವ ದಮ್ಮು, ತಾಕತ್ತು ಪ್ರದರ್ಶಿಸಿ. ಈಶ್ವರಪ್ಪ ಅವರೇ ನೀವು ಹಿಡಿಯಬೇಕಾದ ಪೋಸ್ಟರ್ ಇದು! ನ್ಯಾಯಾಲಯದಲ್ಲಿ ಬಿಜೆಪಿಗರ ಅಕ್ರಮಗಳು, ಅನಾಚಾರಗಳು, ಹಗರಣಗಳು ಸಾಬೀತಾದರೆ ನನ್ನನ್ನೂ ಬಂಧಿಸಿ ಎಂದು ಹೇಳುವುದೇ ಬೇಡ, ಬಂಧನ ಆಗೇ ಆಗುತ್ತದೆ! ಎಂದು ಕೌಂಟರ್ ನೀಡಿದೆ.

ಅಲ್ಲದೆ ನನ್ನನ್ನೂ ಬಂಧಿಸಿ ಎನ್ನುತ್ತಿರುವ ಸುನೀಲ್ ಕುಮಾರ್ ಅವರೇ, ಪರಶುರಾಮ ಮೂರ್ತಿಗೆ ಕಂಚಿನ ಬದಲು ಫೈಬರ್ ಹಾಕಿದ್ದಕ್ಕೆ ನಿಮ್ಮನ್ನು ಬಂಧಿಸಬೇಕೆ? ಅಥವಾ ಸರ್ಕಾರದ ಸಿಮೆಂಟ್ ಕಳ್ಳತನದ ಆರೋಪಕ್ಕಾಗಿ ಬಂಧಿಸಬೇಕೆ? ರಾಮನ ಹೆಸರಲ್ಲಿ ರಾವಣನ ಕೆಲಸ ಮಾಡುವ ಆರೋಪಿಗಳನ್ನು ಬಂಧಿಸಬೇಕಲ್ಲವೇ? ಎಂದು ಕಾಂಗ್ರೆಸ್ ಕೌಂಟರ್ ನೀಡಿದೆ.

https://x.com/INCKarnataka/status/1743135199263678537?t=ASf2lbDGHe17WNOFwV9xpg&s=08

https://x.com/INCKarnataka/status/1743134043967799522?t=Kkmvqr8Hjqc3dbq9r7rsPg&s=08

https://x.com/INCKarnataka/status/1743113328262607236?t=byctVd6563med3fXj7sGdw&s=08

https://x.com/INCKarnataka/status/1743136333525074108?t=3W41kKCnuYhHATHBjzidNg&s=08

You may also like

Leave a Comment