Home » Lakshmi hebbalkar: ಸಿಎಂ ಸಿದ್ದುಗೇ ಇಲ್ಲ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ, ಆದ್ರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೇ ಬಂತು ಆಮಂತ್ರಣ !!

Lakshmi hebbalkar: ಸಿಎಂ ಸಿದ್ದುಗೇ ಇಲ್ಲ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ, ಆದ್ರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೇ ಬಂತು ಆಮಂತ್ರಣ !!

1 comment
Lakshmi hebbalkar

Lakshmi hebbalkar: ಬರುವ ಜನವರಿ 22ರಂದು ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಿ, ಪ್ರಾಣ ಪ್ರತಿಷ್ಠೆಯೂ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅನೇಕ ಗಣ್ಯಮಾನ್ಯರಿಗೆ ಆಮಂತ್ರಣ ನೀಡಲಾಗುತ್ತಿದೆ. ಆದರೆ ಯಾವ ರಾಜ್ಯದ ಮುಖ್ಯಮಂತ್ರಿಗಳಿಗೂ ಭದ್ರತೆಯ ದೃಷ್ಟಿಯಿಂದ ಆಮಂತ್ರಣ ನೀಡುವುದಿಲ್ಲ ಎಂದು ಮಂದಿರದ ಟ್ರಸ್ಟ್ ತಿಳಿಸಿದೆ. ಅಂತೆಯೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಆಹ್ವಾನ ಇಲ್ಲ. ಆದರೆ ಅವರ ಸಚಿವ ಸಂಪುಟದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi hebbalkar) ಮನೆಗೇ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆ.

ಹೌದು, ಮುಖ್ಯಮಂತ್ರಿಗಳಿಗೆ ಆಹ್ವಾನ ಇಲ್ಲವಾದರೂ ಸಿದ್ದರಾಮಯ್ಯ ಸರ್ಕಾರದ ಮಂತ್ರಿ ಮಂಡಲದ ಸದಸ್ಯೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ದೇವಾಲಯ ವತಿಯಿಂದ ಮನೆಗೇ ಬಂದು ಆಹ್ವಾನ ನೀಡಲಾಗಿದೆ. ಇದರಿಂದ ಮುಖ್ಯಮಂತ್ರಿಗಳಿಗೇ ಆಹ್ವಾನ ಇಲ್ಲ ಗುರೂ, ಮಿನಿಸ್ಟರ್ ಗೆ ಅದೂ ಕೂಡಾ ಮಹಿಳಾ ಸಚಿವೆಗೆ ಹೇಗೆ ಆಹ್ವಾನ ಬಂತು ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಕರ್ನಾಟಕ ಸರ್ಕಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಸಿಕ್ಕಿದಾದ್ರೂ ಹೇಗೆ?

ಇನ್ನು ಈ ಬಗ್ಗೆ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಅಕ್ಷತಾ ಅಭಿಯಾನದ ಅಂಗವಾಗಿ ವಿಶ್ವ ಹಿಂದೂ ಪರಿಷತ್‌ನ ಪ್ರಮುಖರು ಇಂದು ನಮ್ಮ ಮನೆಗೆ ಆಗಮಿಸಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ನೀಡಿದ್ದಾರೆ ತಿಳಿಸಿದ್ದಾರೆ.

You may also like

Leave a Comment