Home » Deadly Accident: ನಿಂತಿದ್ದ ಕಾರುಗಳಿಗೆ ಲಾರಿ ಡಿಕ್ಕಿ; ಪ್ರವಾಸಕ್ಕೆಂದು ಹೊರಟವರು ಸ್ಥಳದಲ್ಲೇ ಮೃತ್ಯು!!!

Deadly Accident: ನಿಂತಿದ್ದ ಕಾರುಗಳಿಗೆ ಲಾರಿ ಡಿಕ್ಕಿ; ಪ್ರವಾಸಕ್ಕೆಂದು ಹೊರಟವರು ಸ್ಥಳದಲ್ಲೇ ಮೃತ್ಯು!!!

1 comment
Deadly Accident

Deadly Accident: ನಿಂತಿದ್ದ ಎರಡು ಕಾರುಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಪುಣೆ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳಿಗಟ್ಟಿ ಕ್ರಾಸ್‌ನ ಬಳಿ ನಡೆದಿದೆ.

ಈ ಅಪಘಾತದಲ್ಲಿ ಹಾಸನ ಮೂಲದವರು ಮೂವರು, ಬೆಂಗಳೂರಿನ ಒಬ್ಬರು ಮೃತ ಹೊಂದಿದ್ದು ಇಬ್ಬರಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಮೃತರನ್ನು ಮಣಿಕಂಠ (26), ಪವನ (23), ಚಂದನ (310, ಪ್ರಭು (34) ಎಂದು ಗುರುತಿಸಲಾಗಿದೆ.

ಒಂದು ಕಾರಿನಲ್ಲಿ ಗೆಳೆಯರು ಜೊತೆಗೂಡಿ ಗೋವಾಕ್ಕೆ ತೆರಳುತ್ತಿದ್ದರು. ಬೆಂಗಳೂರಿನಿದ ಕಾರು ಶಿರಡಿಗೆ ಹೊರಟಿತ್ತು. ಅಲ್ಲಿಂದ ಗೋವಾಗೆ ಹೋಗುವ ಪ್ಲ್ಯಾನ್‌ ಮಾಡಿಕೊಂಡಿದ್ದರು. ಆದರೆ ಮಾರ್ಗಮಧ್ಯೆಯೇ ಅಪಘಾತ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಎರಡೂ ಕಾರುಗಳು ಜಖಂಗೊಂಡಿದೆ. ಲಾರಿ ಚಾಲಕ ಪರಾರಿಯಾಗಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Expensive Gift: ತನ್ನ ಸಹಪಾಠಿಗೆ ದುಬಾರಿ ಉಡುಗೊರೆ ನೀಡಿದ ನರ್ಸರಿ ಬಾಲಕ: ಬಾಲಕ ಕೊಟ್ಟ ಉಡುಗೊರೆ ಬೆಲೆ ತಿಳಿದರೆ ಶಾಕ್ ಆಗೋದು ಗ್ಯಾರಂಟಿ!!

ಘಟನಾ ಸ್ಥಳಕ್ಕೆ ಹೆದ್ದಾರಿ ಪೆಟ್ರೋಲಿಂಗ್‌ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಗಾಯಗೊಂಡ ಇಬ್ಬರನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

You may also like

Leave a Comment