Bengaluru News: ಸಾರ್ವಜನಿಕ ಸ್ಥಳದಲ್ಲಿ ಕಾಮುಕನೋರ್ವ ಯುವತಿ ಎದುರಿಗೆ ಹಸ್ತಮೈಥುನ ಮಾಡಿಕೊಂಡ ಘಟನೆಯೊಂದು ನಡೆದಿದೆ. ಈ ಘಟನೆ ಮಹಾದೇವಪುರದ ಪಾರ್ಕ್ ಎದುರಿನ ಸರ್ವಿಸ್ ರಸ್ತೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆ ಜ.5ರಂದು ನಡೆದಿರುವ ಕುರಿತು ವರದಿಯಾಗಿದೆ.
ಕಾರು ಪಾರ್ಕ್ ಮಾಡಿ ಕಾರಿನಲ್ಲಿ ಕುಳಿತುಕೊಂಡಿದ್ದ ಯುವತಿಯ ಮುಂದೆ ವ್ಯಕ್ತಿಯೋರ್ವ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗ ವರ್ತಿಸಿದ್ದಾನೆ. ಇದನ್ನು ಕಂಡು ಹೆದರಿದ ಯುವತಿ ಕಾರಿನಿಂದ ಹೊರಗೆ ಬಂದಿಲ್ಲ. ಅನಂತರ ಆ ವ್ಯಕ್ತಿ ಕಾರಿನ ಬಳಿ ಬಂದಿದ್ದು, ಕಾರಿನ ಸುತ್ತ ಓಡಾಡಿಕೊಂಡಿದ್ದಾನೆ. ನಂತರ ಬೆದರಿಕೆ ಹಾಕುವ ದೃಷ್ಟಿಯಲ್ಲಿ ಯುವತಿಯನ್ನು ನೋಡಿದ್ದಾನೆ ಆ ವ್ಯಕ್ತಿ.
ಇದನ್ನೂ ಓದಿ: PSI Exam: ಅಭ್ಯರ್ಥಿಗಳೇ ಗಮನಿಸಿ, ಜ.23 ರಂದು ನಡೆಯುವ ಪಿಎಸ್‌ಐ ಮರು ಪರೀಕ್ಷೆ ಕುರಿತು KEA ಯಿಂದ ಮಹತ್ವದ ಮಾಹಿತಿ!!
ಯುವತಿ ಆತನನ್ನು ನೋಡಿ ಹೆದರಿ ಕಾರಿನ ಸ್ಟಿಯರಿಂಗ್ ಕೆಳಗೆ ಅವಿತುಕೊಂಡಿದ್ದಳು. ನಂತರ ಆಕೆಯ ಸ್ನೇಹಿತರು ಬಂದ ನಂತರ ಯುವತಿ ಕಾರಿನಿಂದ ಕೆಳಗೆ ಇಳಿದಿದ್ದಾಳೆ. ಇದಾದ ನಂತರ ಯುವತಿ ತಾನು ಅನುಭವಿಸಿದ ಸಮಸ್ಯೆಯ ಬಗ್ಗೆ ಯುವತಿ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾಳೆ. ಮಹಾದೇವಪುರ ಪೊಲೀಸ್ ಠಾಣೆಗೆ ಈ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
