Home » Lust Stories ನ ಕಿಯಾರ ಪಾತ್ರಕ್ಕೆ ಮೊದಲು ಸೆಲೆಕ್ಟ್‌ ಆಗಿದ್ದು ಈ ನಟಿ! ಮುಂದಾಗಿದ್ದೇ ಬೇರೆ!!!

Lust Stories ನ ಕಿಯಾರ ಪಾತ್ರಕ್ಕೆ ಮೊದಲು ಸೆಲೆಕ್ಟ್‌ ಆಗಿದ್ದು ಈ ನಟಿ! ಮುಂದಾಗಿದ್ದೇ ಬೇರೆ!!!

2 comments
Lust Stories

Lust Stories ನಲ್ಲಿ ಕಿಯಾರಾ ಅಡ್ವಾನಿ ಮಾಡಿದ ಪಾತ್ರದ ಬಗ್ಗೆ ನಿಮಗೆ ನೆನಪಿದೆಯೇ? ಈ ಚಿತ್ರದಲ್ಲಿ ತನ್ನ ಕುಟುಂಬ ಸದಸ್ಯರ ಮುಂದೆಯೇ ಲೈಂಗಿಕ ಉತ್ಕಟತೆ ಅನುಭವಿಸುವ ಸೀನು ನಿಜಕ್ಕೂ ಬಹಳ ಸದ್ದು ಮಾಡಿತ್ತು. ಈ ಪಾತ್ರ ಮಾಡಿದ್ದು ಕಿಯಾರ. ನಂತರ ಕಿಯಾರ ಕುರಿತು ಜನ ತಿಳಿದುಕೊಳ್ಳಲು ಬಯಸಿದರು. ಕಿಯಾರ ಇದರಿಂದ ಅಭಿಮಾನಿಗಳ ಮನಸ್ಸಲ್ಲಿ ಉಳಿದುಕೊಂಡರು. ಆದರೆ ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್‌ ಎದುರು ನಟಿಸಲು ಮೊದಲ ಆಯ್ಕೆಯಾದದ್ದು ಕಿಯಾರ ಅಲ್ಲ. ಬದಲಿಗೆ ನಿರ್ದೇಶಕ ಕರಣ್‌ ಜೋಹರ್‌ ಮೊದಲು ಸಂಪರ್ಕಿಸಿದ ನಟಿಗೆ ಆಕೆಯ ತಾಯಿಯ ಒಪ್ಪಿಗೆ ಸಿಗಲಿಲ್ಲ. ಹಾಗಾದರೆ ಆ ನಟಿ ಯಾರು?

ಕರಣ್‌ ಜೋಹರ್‌ ಈ ಪಾತ್ರಕ್ಕಾಗಿ ಮೊದಲು ಸಂಪರ್ಕಿಸಿದ್ದು ಕೃತಿ ಸನನ್‌ರನ್ನು. ಆದರೆ ಅವರ ತಾಯಿ ಈ ಪಾತ್ರ ಬೇಡ ಎಂದು ಹೇಳಿದ್ದರಿಂದ ಅದು ಕಿಯಾರಾ ಪಾಲಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಳೆದ ವರ್ಷ ಕಾಫಿ ವಿತ್‌ ಕರಣ್‌ ಎಂಬ ಪ್ರೋಗ್ರಾಮ್‌ಗೆ ಬಂದಾಗ ಈ ವಿಷಯ ಬಹಿರಂಗ ಪಡಿಸಿದ್ದರು.

ಇದನ್ನೂ ಓದಿ: Suicide: ‘ನಾನು ಯಾರಿಗೂ ಮೋಸ ಮಾಡಿಲ್ಲʼ ಡೆತ್‌ನೋಟ್‌ ಬರೆದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

ವೃತ್ತಿ ಜೀವನದ ಆರಂಭದಲ್ಲಿ ಇಂತಹ ದೃಶ್ಯದಲ್ಲಿ ನನ್ನ ಮಗಳು ಅಭಿನಯಿಸುವುದು ಕಂಫರ್ಟ್‌ ಎನಿಸುವುದಿಲ್ಲ. ಹಾಗಾಗಿ ಬೇಡ ಎಂದೆವು ಎಂದು ಕೃತಿ ಸನನ್‌ ತಾಯಿ ಗೀತಾ ಹೇಳಿರುವುದಾಗಿ ಉಲ್ಲೇಖವಾಗಿದೆ.

You may also like

Leave a Comment