Woman Falls Off Hotel Balcony: ಗುಜರಾತ್ ಅಹಮದಾಬಾದ್‌ನ ಸೋಲಾದಲ್ಲಿ ಜ. 10ರಂದು ಸೈನ್ಸ್ ಸಿಟಿ ರಸ್ತೆಯಲ್ಲಿರುವ ಹೋಟೆಲ್ ರಾಯಲ್‌ನಲ್ಲಿ ಅನೈತಿಕ ಸಂಬಂಧ(Illegal Relation)ಹೊಂದಿದ್ದ ಮಹಿಳೆ ಗಂಡ ಹಾಗೂ ಬಾಯ್‌ಫ್ರೆಂಡ್ ಹೆಂಡತಿಯಿಂದ ತಪ್ಪಿಸಿಕೊಳ್ಳಲು ಓಡಿದ ಮಹಿಳೆಯೊಬ್ಬಳು ಹೋಟೆಲ್ ಬಾಲ್ಕನಿಯಿಂದ(Woman Falls Off Hotel Balcony) ಬಿದ್ದ ಘಟನೆ ನಡೆದಿದೆ.
ಹೋಟೆಲ್‌ನ (Hotel)ಎರಡನೇ ಮಹಡಿಯಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಾ ಪತಿಯ ಗೆಳೆಯನ ಜೊತೆಗೆ ರಾಸಲೀಲೆಯಲ್ಲಿ ತೊಡಗಿದ್ದ ವಿಚಾರ ಗೆಳೆಯನ ಹೆಂಡತಿ ಜಿಯಾಗೆ ಗೊತ್ತಾಗಿಬಿಟ್ಟಿದೆ. ಆಕೆ ಪ್ರಿಯಾಳ ಪತಿ ರಾಹುಲ್ ಮತ್ತು ಸಹೋದರಿಗೆ ವಿಚಾರ ತಿಳಿಸಿದ್ದು, ಮೂವರು ಹೊಟೇಲ್ ತಲುಪಿದ ವಿಚಾರ ರತಿ ಕ್ರೀಡೆಯಲ್ಲಿ ಮುಳುಗಿದ್ದ ಜೋಡಿಗೆ ಗೊತ್ತಾಗಿದೆ.
ಮೂವರು ಹೋಟೆಲ್ ಕೊಠಡಿ ತಲುಪಿದಾಗ ಪ್ರಿಯಾ ಮತ್ತು ರಾಜ್ ಬಾಲ್ಕನಿಯಲ್ಲಿ ನಿಂತಿದ್ದರಂತೆ. ಈ ನಡುವೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಹಲ್ಲೆ ಕೂಡ ನಡೆದಿರುವ ಕುರಿತು ಜಿಯಾ ಆರೋಪಿಸಿದ್ದಾರೆ. ಈ ನಡುವೆ ಪ್ರಿಯಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾಳೆ ಎನ್ನಲಾಗಿದೆ. ಕೂಡಲೇ ಹೋಟೆಲ್‌ನ ಸಿಬ್ಬಂದಿಯೊಬ್ಬರು ಆಂಬುಲೆನ್ಸ್‌ಗೆ ಕರೆ ಮಾಡಿದ್ದು, ಪ್ರಿಯಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಾಯಗೊಂಡಿರುವ ಜಿಯಾ ಕೂಡ ಆಸ್ಪತ್ರೆಗೆ ದಾಖಲಾಗಿದ್ದು, ಜಿಯಾ ನೀಡಿದ ದೂರಿನ ಅನುಸಾರ, ಪೊಲೀಸರು ಪ್ರಿಯಾ ಮತ್ತು ರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಿಯಾ ಬಾಲ್ಕನಿಯಿಂದ ಆಕಸ್ಮಿಕವಾಗಿ ಜಾರಿ ಬಿದ್ದೆದ್ದೇ ಇಲ್ಲವೇ ಆಕೆಯನ್ನು ಯಾರಾದರೂ ತಳ್ಳಿದ್ದಾರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
