Home » Health Tips: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರು ಕುಡಿದು ನೋಡಿ; ನಿಮಗೆ ಸಿಗಲಿದೆ ಭರಪೂರ ಆರೋಗ್ಯ ಪ್ರಯೋಜನ!!

Health Tips: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರು ಕುಡಿದು ನೋಡಿ; ನಿಮಗೆ ಸಿಗಲಿದೆ ಭರಪೂರ ಆರೋಗ್ಯ ಪ್ರಯೋಜನ!!

1 comment
Health Tips

Tulasi Water:ಆರೋಗ್ಯವನ್ನು(Health)ಕಾಪಾಡಿಕೊಳ್ಳಲು ಎಲ್ಲರೂ ಒಂದಲ್ಲ ಒಂದು ರೀತಿಯ ಹರಸಾಹಸ ಪಡುವುದು ಸಹಜ. ಚಳಿಗಾಲ ಶುರುವಾಗಿದ್ದು, ಬದಲಾಗುತ್ತಿರುವ ಹವಾಮಾನದಲ್ಲಿ ಅನೇಕ ಜನರು ಶೀತ(Cold)ಮತ್ತು ಕೆಮ್ಮಿನಂತಹ(Cough)ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ನೀವು ಮನೆಯ ಸುತ್ತ ಮುತ್ತ ಸಿಗುವ ಕೆಲವೊಂದು ವಸ್ತುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ(Tulasi)ನೀರನ್ನು ಕುಡಿಯುವುದರಿಂದ ಏನೆಲ್ಲ ಪ್ರಯೋಜನ(Health Tips)ಸಿಗಲಿದೆ ಗೊತ್ತಾ??

ಇದನ್ನೂ ಓದಿ:LPG Cylinder: LPG ಸಿಲಿಂಡರ್ ಯಾಕೆ ಕೆಂಪು ಬಣ್ಣದಲ್ಲಿರುತ್ತೆ ಗೊತ್ತಾ?? ಇದರ ಹಿಂದಿದೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಫ್ಯಾಕ್ಟ್!!

* ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮು ಕಂಡುಬಂದರೆ ತುಳಸಿ ನೀರನ್ನು ಕುಡಿಯಬಹುದು.ಇದು ಬದಲಾಗುತ್ತಿರುವ ಹವಾಮಾನದಿಂದ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

* ತುಳಸಿಯ ನೀರನ್ನು ಸೇವಿಸಿದರೆ ಮೊಣಕಾಲು ನೋವಿನಿಂದ ಪರಿಹಾರ ಕಂಡುಕೊಳ್ಳಬಹುದು. ಅಷ್ಟೆ ಅಲ್ಲದೇ, ಒತ್ತಡವನ್ನು ಕಡಿಮೆ ಮಾಡಲು ತುಳಸಿ ನೀರನ್ನು ಕುಡಿಯಬಹುದು.

* ಅಸಿಡಿಟಿಯ ಸಮಸ್ಯೆ ಇಲ್ಲವೇ ಹೊಟ್ಟೆ ಸಂಬಂಧಿ ಸಮಸ್ಯೆಗಳಿದ್ದರೆ, ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿದು ಪರಿಹಾರ ಪಡೆಯಬಹುದು.

* ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ತುಳಸಿ ನೀರು ಉಪಕಾರಿಯಾಗಿದೆ. ಮುಖದ ಮೇಲಿನ ಕಲೆಗಳು ಮತ್ತು ಮೊಡವೆಗಳನ್ನು ತೆಗೆದುಹಾಕುವಲ್ಲಿ ತುಳಸಿ ನೀರು ಹೆಚ್ಚು ಪ್ರಯೋಜನಕಾರಿಯಾಗಿದೆ.

* ಪ್ರತಿದಿನ ತುಳಸಿ ನೀರನ್ನು ಕುಡಿಯುತ್ತ ಬಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಉತ್ತಮವಾಗಿರುತ್ತದೆ.

You may also like

Leave a Comment