Home » Congress : ಕಾಂಗ್ರೆಸ್’ನ ನಿಜಬಣ್ಣ ಬಯಲು – ಅದಾನಿ ಜೊತೆಗೆ ಬರೋಬ್ಬರಿ 12,400 ಕೋಟಿ ಹೂಡಿಕೆಗೆ ಒಪ್ಪಂದ !!

Congress : ಕಾಂಗ್ರೆಸ್’ನ ನಿಜಬಣ್ಣ ಬಯಲು – ಅದಾನಿ ಜೊತೆಗೆ ಬರೋಬ್ಬರಿ 12,400 ಕೋಟಿ ಹೂಡಿಕೆಗೆ ಒಪ್ಪಂದ !!

1 comment
Congress

Congress: ತೆಲಂಗಾಣ ರಾಜ್ಯದಲ್ಲಿ 12,400 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಗೆ ಸಂಬಂಧಿಸಿದ ನಾಲ್ಕು ಮಹತ್ವದ ಒಪ್ಪಂದಗಳಿಗೆ(ಎಂಒಯು) ಅದಾನಿ ಸಮೂಹ ಮತ್ತು ತೆಲಂಗಾಣ ಕಾಂಗ್ರೆಸ್ ಸರ್ಕಾರ(Telangana government)ಬುಧವಾರ ಒಪ್ಪಂದ ಮಾಡಿಕೊಂಡಿವೆ.

Congress

ಸಂಸತ್ತಿನಲ್ಲಿ ಪ್ರಧಾನಿ ಮೋದಿ(PM Modi) ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಅದಾನಿ ಕೈಯಲ್ಲಿದೆ. ಅದಾನಿಗೆ ನೆರವು ನೀಡುತ್ತಾರೆ. ಅದಾನಿ ವಿರುದ್ಧ ಮಾತಾಡಿದ್ರೆ ನಮ್ಮ ವಿರುದ್ಧ ಇಂಟೆಲಿಜೆನ್ಸ್ ಏಜೆನ್ಸಿ, ಸಿಬಿಐ(CBI)ಗಳನ್ನು ನಮ್ಮ ವಿರುದ್ಧ ಬಳಕೆ ಮಾಡುತ್ತಾರೆ. ಬಡವರ ದುಡ್ಡನ್ನು ಮೋದಿ ಅದಾನಿ ಕೈಗೆ ನೀಡಿದ್ದಾರೆ ಎಂದೆಲ್ಲಾ ಭಾರೀ ಟೀಕೆ ಮಾಡುತ್ತಾ ಅದಾನಿ ಜೊತೆಗಿನ ಮೋದಿ ಫೋಟೋಗಳನ್ನು ಪ್ರದರ್ಶಿಸಿ ದೊಡ್ಡ ಸಂಚಲನ ಸೃಷ್ಟಿಸಲು ಮುಂದಾಗಿದ್ದ ಕಾಂಗ್ರೆಸ್ಸಿನ(Congress) ಅಸಲಿ ಮುಖ ಕಳಚಿ ಬಿದ್ದಿದೆ. ಯಾಕೆಂದರೆ ಇದೇ ಅದಾನಿ ಜೊತೆ ತೆಲಂಗಾಣ ಕಾಂಗ್ರೆಸ್ ಸರ್ಕಾರ ಬರೋಬ್ಬರಿ 12,400 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ.

ಇದನ್ನೂ ಓದಿ: D K Shivkumar: ಯತೀಂದ್ರನ ಬಗ್ಗೆ ಕೊನೆಗೂ ಮೌನ ಮುರಿದ ಡಿಕೆಶಿ- ಭಾರೀ ಕುತೂಹಲ ಕೆರಳಿಸಿದ ಹೇಳಿಕೆ!!

ಹೌದು, ವಿಶ್ವ ಆರ್ಥಿಕ ವೇದಿಕೆ-2024 ರಲ್ಲಿ ತೆಲಂಗಾಣ ಸರ್ಕಾರದೊಂದಿಗೆ ಅದಾನಿ ಗ್ರೂಪ್‌ ಬಹುಕೋಟಿ ರೂಪಾಯಿ ಮೊತ್ತದ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿದೆ. ಅದಾನಿ ಎಂಟರ್‌ಪ್ರೈಸಸ್‌ನ ಹೂಡಿಕೆಯು 50 ಶತಕೋಟಿ ರೂಪಾಯಿಗಳಿಗೆ ಸ್ಥಾಪಿಸಲು 100 ಮೆಗಾವ್ಯಾಟ್ ಡೇಟಾ ಕೇಂದ್ರವನ್ನೂ ಒಳಗೊಂಡಿದೆ. ಅದಾನಿ ಗ್ರೀನ್ ಎನರ್ಜಿ, ಅಂಬುಜಾ ಸಿಮೆಂಟ್ಸ್ ಮತ್ತು ಅದಾನಿ ಡಿಫೆನ್ಸ್ ಸಿಸ್ಟಮ್ಸ್ ಮತ್ತು ಟೆಕ್ನಾಲಜೀಸ್ ರಾಜ್ಯದಲ್ಲಿ ಯೋಜನೆಗಳನ್ನು ಜಾರಿಗೆ ತರುವ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ತಿಳಿದುಬಂದಿದೆ. ಇಂಧನ ಕ್ಷೇತ್ರದಲ್ಲಿ ಅದಾನಿ ಎನರ್ಜಿ ತೆಲಂಗಾಣದಲ್ಲಿ 5 ಸಾವಿರ ಕೋಟಿ ರೂ., ಅಂಬುಜಾ ಸಿಮೆಂಟ್‌ ತಯಾರಿಕೆಗೆ 1,400 ಕೋಟಿ ರೂ. ಹೂಡಿಕೆ ಮಾಡಲಿದೆ.

ಇನ್ನು ಅದಾನಿ ವಿಚಾರದಲ್ಲಿ ಬಿಜೆಪಿ, ಪ್ರಧಾನಿ ಮೋದಿಯನ್ನು ಖಂಡತುಂಡವಾಗಿ ವಿರೋಧಿಸುವ ರಾಹುಲ್ ಗಾಂಧಿ, ತೆಲಂಗಾಣ ಸೇರಿದಂತೆ ಇತರ ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿನ ಒಪ್ಪಂದ , ಹೂಡಿಕೆ ಕುರಿತು ಮೌನ ವಹಿಸಿದ್ದಾರೆ. ಈ ಹೂಡಿಕೆ ಬೆನ್ನಲ್ಲೇ ಕಾಂಗ್ರೆಸ್ ಮುಖಭಂಗ ಎದುರಿಸಿದೆ.

You may also like

Leave a Comment