Home » Prabhakar Bhat: ಪ್ರಭಾಕರ್‌ ಭಟ್‌ಗೆ ಜಾಮೀನು ನೀಡಿದ ವಕೀಲನ ಉಚ್ಛಾಟನೆ ಮಾಡಿದ ಕಾಂಗ್ರೆಸ್‌!!

Prabhakar Bhat: ಪ್ರಭಾಕರ್‌ ಭಟ್‌ಗೆ ಜಾಮೀನು ನೀಡಿದ ವಕೀಲನ ಉಚ್ಛಾಟನೆ ಮಾಡಿದ ಕಾಂಗ್ರೆಸ್‌!!

1 comment
Prabhakar Bhat

Kalladka Prabhakar Bhat: ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ RSS ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರಿಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿತ್ತು. ಇದೀಗ ಪ್ರಭಾಕರ್‌ ಭಟ್‌ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದ ಶ್ರೀರಂಗಪಟ್ಟಣ ಕಾಂಗ್ರೆಸ್‌ ಕಾನೂನು ಘಟಕದ ಅಧ್ಯಕ್ಷರು ಎಂಬ ವಿಚಾರ ಬಹಿರಂಗವಾಗಿದೆ. ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ.

ಇದನ್ನೂ ಓದಿ: Gram Panchayat: ಅತೀ ಶೀಘ್ರದಲ್ಲಿ 1,500 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಕ್ಕೆ ಕ್ರಮ!!

ಡಿ.ಚಂದ್ರೇಗೌಡ ಅವರು ಕಲ್ಲಡ್ಕ ಪ್ರಭಾಕರ್‌ ಪರ ವಕಾಲತ್ತು ವಹಿಸಿದ್ದರು. ಜ.17 ರಂದು ಪ್ರಭಾಕರ್‌ ಭಟ್‌ಗೆ ಜಾಮೀನು ಮಂಜೂರು ಆಗಿತ್ತು. ಇದೀಗ ಕಾಂಗ್ರೆಸ್‌ ಮುಖಂಡರು ಕಲ್ಲಡ್ಕ ಪ್ರಭಾಕರ್‌ ಅವರಿಗೆ ಜಾಮೀನು ನೀಡಿದ್ದಕ್ಕೆ ಆಕ್ರೋಶಗೊಂಡಿದ್ದಾರೆ. ಇದೀಗ ಇದು ಕಾಂಗ್ರೆಸ್‌ ನಿಯಮದ ಉಲ್ಲಂಘನೆ ಎಂಬ ಆರೋಪಿಸಲಾಗಿದೆ. ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಎಎಸ್‌ ಗೌರಿಶಂಕರ್‌ ಅವರು ಚಂದ್ರೇಗೌಡ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಆದೇಶ ನೀಡಿದ್ದಾರೆ.

You may also like

Leave a Comment