Home » Bihar: ರಾಮ ಮಂದಿರ ಉದ್ಘಾಟನೆ ಬಗ್ಗೆ ಲೇವಡಿ ಮಾಡುತ್ತಿದ್ದಂತೇ ಕುಸಿದು ಬಿತ್ತು ಕಾರ್ಯಕ್ರಮದ ಮೇದಿಕೆ – ಯಪ್ಪಾ.. ದಂಗುಬಡಿಸುತ್ತೆ ವಿಡಿಯೋ !!

Bihar: ರಾಮ ಮಂದಿರ ಉದ್ಘಾಟನೆ ಬಗ್ಗೆ ಲೇವಡಿ ಮಾಡುತ್ತಿದ್ದಂತೇ ಕುಸಿದು ಬಿತ್ತು ಕಾರ್ಯಕ್ರಮದ ಮೇದಿಕೆ – ಯಪ್ಪಾ.. ದಂಗುಬಡಿಸುತ್ತೆ ವಿಡಿಯೋ !!

1 comment
Bihar

Bihar: ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ(Ramalalla) ಪ್ರಾಣ ಪ್ರತಿಷ್ಠಾಪನೆ ನೆರವೇರಲಿದ್ದು, ಇದೀಗ ರಾಮಲಲ್ಲನ ಮೂರ್ತಿ ಪುರ ಪ್ರವೇಶ ಮಾಡಿ, ದೇವಾಲದ ಗರ್ಭಗುಡಿ ಪ್ರವೇಶಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮ ಮನೆಮಾಡಿದೆ. ಆದರೆ ಕೆಲವರು ಮಂದಿರ ಉದ್ಘಾಟನೆ ಬಗ್ಗೆ, ಪ್ರಾಣ ಪ್ರತಿಷ್ಠೆ ಬಗ್ಗೆ ಕುಹಕವಾಡುತ್ತಲೇ ಇದ್ದಾರೆ. ಅಂತೆಯೇ ಬಿಹಾರದ(Bihar) ಕಾರ್ಯಕ್ರಮವೊಂದರಲ್ಲಿ ರಾಮ ಮಂದಿರ ಉದ್ಘಾಟನೆ ಕುರಿತು ಲೇವಡಿ ಮಾಡುತ್ತಿದ್ದು, ಹೀಗೆ ಮಾಡುವಾಗಲೇ ಆ ವೇದಿಕೆ ಕುಸಿದು ಬಿದ್ದು ಭಾರೀ ಅಚ್ಚರಿ ಮೂಡಿಸಿದೆ.

https://x.com/MeghUpdates/status/1748325657648795671?t=DXATcn_Uguub3T2Lu5DCfg&s=08

ಹೌದು, ಜನವರಿ 18 ರಂದು ಬಿಹಾರದ ಗಯಾದಲ್ಲಿ ಪಸ್ಮಾಂಡ ವಂಚಿತ್ ಮಹಾಸಂಘಟನ್‌, ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಕ್ವಾಮ್ ಅನ್ಸಾರಿ ಅವರ 51 ನೇ ಪುಣ್ಯಸ್ಮರಣೆ ಸಭೆಯನ್ನು ಆಯೋಜಿಸಿತ್ತು. ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಸಹ ಇದರಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಅವರು ರಾಮ ಮಂದಿರದ ಬಗ್ಗೆ ಪ್ರಶ್ನೆ ಮಾಡುತ್ತಾ, ಇಡೀ ಸಮಾರಂಭದ ಬಗ್ಗೆ ಲೇವಡಿ ಮಾಡುತ್ತಿದ್ದರು. ಪವಾಡವೋ, ಕಾಕತಾಳಿಯವೋ ಎಂಬಂತೆ ರಾಮ ಮಂದಿರದ ರಚನೆಯ ಬಗ್ಗೆ, ರಾಮನ ಬಗ್ಗೆ ಈತ ಪ್ರಶ್ನೆ ಮಾಡುತ್ತಿರುವಾಗಲೇ ಆತನಿದ್ದ ವೇದಿಕೆ ಇಸ್ಪೀಟ್‌ನ ಎಲೆಗಳ ರೀತಿ ಕುಸಿದುಬಿದ್ದಿದೆ. ಈ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದ್ದು ಭಾರೀ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: Government holiday: ರಾಮ ಮಂದಿರ ಉದ್ಘಾಟನೆ- ರಾಜ್ಯ ಸರ್ಕಾರದಿಂದ ಸಾರ್ವಜನಿಕ ರಜೆ ಘೋಷಣೆ

ಅಂದಹಾಗೆ ವೇದಿಕೆ ನೆಲಕ್ಕುರುಳಿದಂತೆ ವೇದಿಕೆ ಮೇಲೆ ಕುಳಿತಿದ್ದ ಎಲ್ಲರೂ ನೆಲಕ್ಕೆ ಬಿದ್ದಿದ್ದಾರೆ. ವೇದಿಕೆಯಿಂದ ಬೀಳುವ ಮುನ್ನವೇ ಮಾಜಿ ಸಂಸದ ಹಾಗೂ ಪಸ್ಮಾಂಡ ವಂಚಿತ್‌ ಮಹಾಸಂಘಟನ್‌ನ ರಾಷ್ಟ್ರೀಯ ಅಧ್ಯಕ್ಷ ಅಲಿ ಅನ್ವರ್ ಅನ್ಸಾರಿ ಅವರ ಕಾಲಿಗೆ ಗಾಯವಾಗಿದೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇನ್ನು ಇಡೀ ವೇದಿಕೆ ಕುಸಿದು ಬಿದ್ದ ಬಳಿಕ, ಮೈದಾನದಲ್ಲಿ ಮೇಜು ಇಟ್ಟು ಸಭೆಯನ್ನು ಮುಂದುವರಿಸಲಾಗಿದೆ.

You may also like

Leave a Comment