Home » MS Dhoni: ಎಂ.ಎಸ್‌ ಧೋನಿ ಅಭಿಮಾನಿ ಆತ್ಮಹತ್ಯೆ!!

MS Dhoni: ಎಂ.ಎಸ್‌ ಧೋನಿ ಅಭಿಮಾನಿ ಆತ್ಮಹತ್ಯೆ!!

2 comments

MS Dhoni: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಹಾಗೂ ಮಹೇಂದ್ರ ಸಿಂಗ್‌ ಧೋನಿಯ (MS Dhoni) ಅಪ್ಪಟ ಅಭಿಮಾನಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೋಮ್‌ ಆಫ್‌ ಧೋನಿ ಎಂದು ಹೆಸರನ್ನು ತನ್ನ ಮನೆಗೆ ಇಟ್ಟಿದ್ದ ಈ ಅಭಿಮಾನಿ ತನ್ನ ಮನೆಗೆ ಸಂಪೂರ್ಣವಾಗಿ ಹಳದಿ ಬಣ್ಣ ಬಳಿದಿದ್ದರು.

ಕಡಲೂರಿನ ತಿಟ್ಟಕುಡಿ ತಾಲೂಕಿನ ನಿವಾಸಿಯಾದ ಗೋಪಿ ಕೃಷ್ಣನ್‌ ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ದುಬೈನಲ್ಲಿ ಕೆಲಸ ಮಾಡುತ್ತಿದ್ದ ಗೋಪಿ ಕೃಷ್ಣನ್‌ ಕೆಲವು ವರ್ಷಗಳ ಹಿಂದೆ ತಮ್ಮ ಊರಿಗೆ ಮರಳಿ ಬಂದಿದ್ದರು. ದುಬೈನ್‌ ಜರ್ಮನ್‌ ವ್ಯಾಪಾರ ಕಂಪನಿಯಲ್ಲಿ ಮಾರುಕಟ್ಟೆ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಅವರು ಭಾರತದಲ್ಲಿ ಷೇರು ಮಾರುಕಟ್ಟೆಯಲ್ಲಿ ಭಾರೀ ಹೂಡಿಕೆ ಮಾಡಲು ಪ್ರಾರಂಭ ಮಾಡಿದ್ದರು. ಅದಕ್ಕಾಗಿ ಸಾಲ ಕೂಡಾ ಮಾಡಿದ್ದರು. ಅದರಲ್ಲಿ ನಷ್ಟವನ್ನು ಅನುಭವಿಸಿರುವ ಕುರಿತು ವರದಿಯಾಗಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಪೊಂಗಲ್‌ ಆಚರಣೆ ವೇಳೆ ಸಾಲದ ವಿಚಾರಕ್ಕೆ ಹಲವರ ಜೊತೆ ಗಲಾಟೆ ಮಾಡಿರುವುದಾಗಿ ವರದಿಯಾಗಿದೆ. ಈ ಬೇಸರಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ.

 

You may also like

Leave a Comment