Home » BBK Season 10: ವಿಜಯೀ ಭವ ಸಂಗೀತಾ ಶೃಂಗೇರಿ; ಟ್ರೆಂಡ್‌….ಹೆಚ್ಚಳ!!!

BBK Season 10: ವಿಜಯೀ ಭವ ಸಂಗೀತಾ ಶೃಂಗೇರಿ; ಟ್ರೆಂಡ್‌….ಹೆಚ್ಚಳ!!!

1 comment
BBK Season 10

BBK Season 10: ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಗ್ರ್ಯಾಂಡ್‌ ಫಿನಾಲೆಗೆ ಇನ್ನು ಕೆಲವೇ ಕೆಲವು ದಿನ ಬಾಕಿ. ಈ ಬಾರಿ ಯಾರು ಗೆಲ್ಲಬಹುದು ಎನ್ನುವ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ದೊಡ್ಮನೆಯಲ್ಲಿ ಈಗ ಆರು ಮಂದಿ ಇದ್ದಾರೆ. ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್‌, ತುಕಾಲಿ ಸಂತೋಷ್‌, ವಿನಯ್‌, ಪ್ರತಾಪ್‌, ಮತ್ತು ಕಾರ್ತಿಕ್‌ ಇದ್ದಾರೆ.

ವಾರದ ಮಧ್ಯದಲ್ಲಿ ಮತ್ತೋರ್ವರು ದೊಡ್ಮನೆಯಿಂದ ಹೊರಬರುವ ಸಾಧ್ಯತೆಯಿದೆ.

ಇದನ್ನೂ ಓದಿ: Ayodhya Special Perfume: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಬರುವ ಭಕ್ತರನ್ನು ಸ್ವಾಗತಿಸಲು ವಿಶೇಷ ಸುಗಂಧ ದ್ರವ್ಯ!!!

ಇದೀಗ ಸಂಗೀತಾ ಶೃಂಗೇರಿ ಅವರ ಹೆಸರು ಟ್ವಿಟ್ಟರ್‌ನಲ್ಲಿ ಭಾರೀ ಟ್ರೆಂಡ್‌ ಆಗಿದೆ. ವಿನಯ್‌ಗೆ ಟಕ್ಕರ್‌ ನೀಡಿ ರಾಜ್ಯಾದ್ಯಂತ ವೀಕ್ಷಕರ ಮನಗೆದ್ದ ಸಂಗೀತ, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಅವರನ್ನು ಹೊರಗಿನಿಂದ ಬೆಂಬಲಿಸುವ ಕಾರ್ಯ ನಡೆಯುತ್ತಿದೆ. ಸಂಗೀತ ಪರ ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡುತ್ತಿದ್ದಾರೆ.

‘VIJAYIBHAVA SANGEETHA SRINGERI’ ಎಂಬ ಹೆಸರಿನಲ್ಲಿ ಟ್ವೀಟ್ ಮಾಡಲಾಗುತ್ತಿದೆ.

ಭಾರತದ ಟ್ರೆಂಡ್‌ನಲ್ಲಿ ಐದು ಲಕ್ಷಕ್ಕೂ ಹೆಚ್ಚು ಟ್ವೀಟ್‌ನೊಂದಿಗೆ ಅಗ್ರ ಸ್ಥಾನದಲ್ಲಿ ಸಂಗೀತ ಇದ್ದಾರೆ. ರೂಪೇಶ್ ಶೆಟ್ಟಿ (ಬಿಗ್ ಬಾಸ್ ಸೀಸನ್ 9ರ ವಿಜೇತ), ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್ ಹೆಸರು ಭಾರತದ ಟ್ರೆಂಡ್ ನಲ್ಲಿ ಕಾಣಿಸಿಕೊಂಡಿತ್ತು.

You may also like

Leave a Comment