Home » Naked festival: ಇಲ್ಲಿ ನಡೆಯುತ್ತೆ ಬೆತ್ತಲೆ ಹಬ್ಬ, ಗಂಡಸರ ಜೊತೆ ಹೆಂಗಸರಿಗೂ ಇದೆ ಅವಕಾಶ!! ಆದ್ರೆ ಈ ರೂಲ್ಸ್ ಫಾಲೋ ಮಾಡ್ಲೇಬೇಕು

Naked festival: ಇಲ್ಲಿ ನಡೆಯುತ್ತೆ ಬೆತ್ತಲೆ ಹಬ್ಬ, ಗಂಡಸರ ಜೊತೆ ಹೆಂಗಸರಿಗೂ ಇದೆ ಅವಕಾಶ!! ಆದ್ರೆ ಈ ರೂಲ್ಸ್ ಫಾಲೋ ಮಾಡ್ಲೇಬೇಕು

1 comment
Naked festival

Naked festival: ಜಗತ್ತಲ್ಲಿ ಎಂತೆಲ್ಲಾ ವಿಚಿತ್ರ ಆಚರಣೆಗಳಿವೆ ಅಂದ್ರೆ ಕೆಲವೊಂದನ್ನು ಕೇಳಿದ್ರೆ ದಂಗಾಗಿ ಹೋಗ್ತೀವಿ. ಜಗತ್ತು ಇಷ್ಟು ಮುಂದುವರೆದರೂ ಈ ಆಚರಣೆಗಳಿರುವುದು ಅಚ್ಚರಿ ಎನಿಸುತ್ತದೆ. ಅಂತೆಯೇ ಇಲ್ಲೊಂದೆಡೆ ಧಾರ್ಮಿಕ ಕೇಂದ್ರದಲ್ಲಿ ಪ್ರತಿ ವರ್ಷ ಪುರುಷರ ಬೆತ್ತಲೆ ಹಬ್ಬ(Naked festival) ನಡೆಯುತ್ತಿದ್ದು, ಇದರಲ್ಲಿ ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗಿದೆ.

ಹೌದು, ಜಪಾನ್‌ನ(Japan) ಕೊನೊಮಿಯಾ ಧಾರ್ಮಿಕ ಕೇಂದ್ರದಲ್ಲಿ ಪ್ರತಿ ವರ್ಷ ನಡೆಯುವ ಪುರುಷರ ಬೆತ್ತಲೆ ಹಬ್ಬದಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೂ ಅವಕಾಶ ಮಾಡಿಕೊಟ್ಟಿದೆ. ಇದರ ಜೊತೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಮೊದಲ ಬಾರಿಗೆ ಕೇವಲ 40 ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಅಂದಹಾಗೆ ಜಪಾನ್‌ನ ಐಚಿ ಪ್ರಿಫೆಕ್ಟರ್‌ನ ಇನಾಜಾವಾ ಪಟ್ಟಣದಲ್ಲಿರುವ ಕೊನೊಮಿಯಾ ಧಾರ್ಮಿಕ ಕೇಂದ್ರದಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ. ಈ ವರ್ಷ ಫೆಬ್ರವರಿ 22 ರಂದು ನಡೆಯುವ ಉತ್ಸವದಲ್ಲಿ ಸುಮಾರು 10,000 ಸ್ಥಳೀಯ ಪುರುಷರು ಭಾಗವಹಿಸುವ ನಿರೀಕ್ಷೆಯಿದೆ. ಮೊದಲ ಬಾರಿಗೆ ಕೇವಲ 40 ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಅಂದಹಾಗೆ ಹಲವು ವರ್ಷಗಳಿಂದ ಮಹಿಳೆಯರಿಗೆ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಅನ್ನೋ ಮನವಿಗಳಿತ್ತು. ಈ ಮನವಿ ಪುರಸ್ಕರಿಸಿರುವ ಕೊನೊಮಿಯಾ ಧಾರ್ಮಿಕ ಕೇಂದ್ರ, ಈ ವರ್ಷ 40 ಮಹಿಳೆಯರಿಗೆ ಅವಕಾಶ ನೀಡಿದ್ದು, ಹಂತ ಹಂತವಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಕೊನೊಮಿಯಾ ಧಾರ್ಮಿಕ ಕೇಂದ್ರ ಹೇಳಿದೆ.

ಏನಿದು ಬೆತ್ತಲೆ ಹಬ್ಬ?

ಜಪಾನ್‌ನ ಆ್ಯಚಿ ಫ್ರೆಕ್ಷರ್ ಸಮೀಪದ ಇನಝವಾ ಪಟ್ಟಣದಲ್ಲಿ ಈ ಹಬ್ಬ ಅದ್ಧೂರಿಯಾಗಿ ನಡೆಯುತ್ತದೆ.

1650ರಿಂದ ಈ ಪುರುಷರ ಬೆತ್ತಲೆ ಹಬ್ಬ ನಡೆದುಕೊಂಡು ಬರುತ್ತಿದೆ. ಈ ಹಬ್ಬವನ್ನು ಜಾಪನ್ ಸಾಂಪ್ರಾದಾಯಿಕ ಭಾಷೆಯಲ್ಲಿ ಹಡಕ ಮಟ್ಟುರಿ ಎಂದು ಕರೆಯುತ್ತಾರೆ. ಈ ಧಾರ್ಮಿಕ ಹಬ್ಬ ಕೇವಲ ಪುರುಷರಿಗೆ ಮಾತ್ರ ಆಯೋಜಿಸಲಾಗುತ್ತಿತ್ತು ವರ್ಷದಿಂದ ವರ್ಷಕ್ಕೆ ಈ ಹಬ್ಬದಲ್ಲಿ ಪಾಲ್ಗೊಳ್ಳುವ ಪುರುಷರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

You may also like

Leave a Comment