BBK Season 10 Amount: ʼಬಿಗ್‌ಬಾಸ್ ಕನ್ನಡ ಸೀಸನ್ 10′ ಗ್ರ್ಯಾಂಡ್ ಫಿನಾಲೆ ನಡೆಸಿಕೊಟ್ಟಿದ್ದು, ಇದೀಗ ಈ ರಿಯಾಲಿಟಿ ಶೋಗೆ ತೆರೆ ಬಿದ್ದಿದೆ. ನಿನ್ನೆ ಮಧ್ಯರಾತ್ರಿ ವಿಜೇತ ಯಾರು ಎಂಬ ಘೋಷಣೆ ಮಾಡಿದ್ದು. ಕಾರ್ತಿಕ್ ಮಹೇಶ್ ಅವರಿಗೆ 50 ಲಕ್ಷ ರೂಪಾಯಿ ಹಣದ ಜೊತೆಗೆ ಮಾರುತಿ ಸುಜುಕಿ ಬ್ರೆಜಾ ಕಾರು ದೊರಕಿದ್ದು, ಅದರ ಜೊತೆಗೆ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಗಿಫ್ಟ್ ಆಗಿ ದೊರಕಿದೆ.
ಹಾಗಾದರೆ ಗೆದ್ದ ಸ್ಪರ್ಧಿಗಳಿಗೆ ಕರ್ನಾಟಕದಲ್ಲಿ ಎಷ್ಟು ಪರ್ಸೆಂಟ್ ಟ್ಯಾಕ್ಸ್ ಕಟ್ ಆಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
ಇದನ್ನು ಓದಿ: Belthangady: ಭೀಕರ ಪಟಾಕಿ ಸ್ಫೋಟ ಪ್ರಕರಣ; ಗೋಡಾನ್‌ನಲ್ಲಿ ಗ್ರೆನೇಡ್ ತಯಾರಾಗುತ್ತಿತ್ತಾ?
ಕರ್ನಾಟಕದಲ್ಲಿ ಮನರಂಜನಾ ಟ್ಯಾಕ್ಸ್ 31.2 ಪರ್ಸೇಂಟೇಜ್ ಇದೆ. ಅಂದರೆ ಗೆದ್ದಿರುವ ಕಾರ್ತಿಕ್ ಮಹೇಶ್ ಅವರಿಗೆ 50 ಲಕ್ಷ ರೂಪಾಯಿಯಲ್ಲಿ 34.40 ಲಕ್ಷ ರೂಪಾಯಿ ಮಾತ್ರ ದೊರಕಲಿದೆ. ಉಳಿದ 14.40 ಲಕ್ಷ ಸರಕಾರಕ್ಕೆ ಸೇರಲಿದೆ. ಬೇರೆ ಬೇರೆ ರಾಜ್ಯಗಳಲ್ಲಿ ನಾನಾ ರೀತಿಯ ಸ್ಲ್ಯಾಬ್ ಇದೆ. ಉತ್ತರ ಪ್ರದೇಶ ಶೇ.60, ಬಿಹಾರ, ಶೇ.50, ಮಹಾರಾಷ್ಟ್ರ ಶೇ.45 ಹೀಗೆ ಇರುತ್ತದೆ. ನಿಯಮಗಳು ಆಯಾ ರಾಜ್ಯಗಳಿಗೆ ಬದಲಾವಣೆ ಆಗುತ್ತದೆ. ಇದು 10 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿರುವ ಅಮೌಂಟ್‌ಗೆ ಮಾತ್ರ ಅಪ್ಲೈ ಆಗುತ್ತದೆ.
