Home » Kalaburagi: 18 ವರ್ಷದೊಳಗಿನ ಹುಡಿಗಿಯೊಂದಿಗೆ ಮದುವೆ – ಮಧುಮಗನಿಗೆ ಕೋರ್ಟ್ ಕೊಟ್ಟ ಶಿಕ್ಷೆ ಕೇಳಿದ್ರೆ ಶಾಕ್ ಆಗ್ತೀರಾ!!

Kalaburagi: 18 ವರ್ಷದೊಳಗಿನ ಹುಡಿಗಿಯೊಂದಿಗೆ ಮದುವೆ – ಮಧುಮಗನಿಗೆ ಕೋರ್ಟ್ ಕೊಟ್ಟ ಶಿಕ್ಷೆ ಕೇಳಿದ್ರೆ ಶಾಕ್ ಆಗ್ತೀರಾ!!

1 comment
Kalaburagi

Kalaburagi: 18 ವರ್ಷದೊಳಗಿನ ಹುಡುಗಿಯರನ್ನು ಮದುವೆಯಾಗುವುದು ನಮ್ಮ ದೇಶದಲ್ಲಿ ಕಾನೂನು ಬಾಹಿರ. ಹೀಗಿದ್ದರೂ ಕೆಲವರು ಅಪ್ರಾಪ್ತ ಬಾಲಕಿಯರನ್ನೇ ಕದ್ದು ಮುಚ್ಚಿ ಮದುವೆಯಾಗುತ್ತಾರೆ. ಅಂತೆಯೇ ಇದೀ ಈ ರೀತಿಯ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಇದು ತಪ್ಪೆಂದು ಗೊತ್ತಿದ್ದರೂ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಫಸ್ಟ್‌ನೈಟ್ ಮಾಡಿಕೊಂಡ ವ್ಯಕ್ತಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ಶಿಕ್ಷೆ ಏನೆಂದು ಕೇಳಿದರೆ ನೀವೇ ಶಾಕ್ ಆಗ್ತೀರಾ.

ಇದನ್ನೂ ಓದಿ: H D kumarswamy: ಎಚ್ ಡಿ ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ ನಾಯಕರು !!

ಹೌದು, ತಪ್ಪೆಂದು ಗೊತ್ತಿದ್ದರೂ ಕಲಬುರಗಿಯಲ್ಲಿ 18ವರ್ಷದೊಳಗಿನ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ವ್ಯಕ್ತಿಗೆ ಕಲಬುರಗಿಯ(Kalaburagi) ಅಪರ ಜಿಲ್ಲಾ ಮತ್ತು ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯ ಬರೋಬ್ಬರಿ 20 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. ಜೊತೆಗೆ, ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕಾಗಿ ಪೋಕ್ಸೋ ಪ್ರಕರಣವನ್ನು ಕೂಡ ದಾಖಲಿಸಿದಾಗಿದೆ. ನ್ಯಾಯಾದೀಶರಾದ ಯಮನಪ್ಪ ಬಮ್ಮಣಗಿ ಅವರಿಂದ ಈ ಮಹತ್ವದ ತೀರ್ಪು ನೀಡಲಾಗಿದೆ.

ವಿಚಿತ್ರ ಅಂದರೆ ಈ ಘಟನೆಯು ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ತೆಲ್ಕೂರ ಗ್ರಾಮದಲ್ಲಿ ಕಳೆದ 2022ರ ಏಪ್ರಿಲ್‌ನಲ್ಲಿ ನಡೆದಿರುವ ಕೃತ್ಯವಾಗಿದೆ. ತೇಲ್ಕೂರ ಗ್ರಾಮದ ವ್ಯಕ್ತಿ ಶಿಕ್ಷೆಗೊಳಗಾಗಿರುವ ಆರೋಪಿಯಾಗಿದ್ದಾನೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿ ಪೋಕ್ಸೋ ಮತ್ತು ಬಾಲ್ಯವಿವಾಹ ಕಾಯ್ದೆಯಡಿ ಆರೋಪವೆಸಗಿರುವುದು ಸಾಬೀತಾದ ಕಾರಣ ನ್ಯಾಯಾಲಯ ಕಠಿಣ ಶಿಕ್ಷೆ ನೀಡಿದೆ.

You may also like

Leave a Comment