Home » HSRP Number Plate: ವಾಹನ ಮಾಲೀಕರಿಗೆ ಮುಖ್ಯ ಮಾಹಿತಿ; HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ ಸುಲಭ ವಿಧಾನ ಇಲ್ಲಿದೆ

HSRP Number Plate: ವಾಹನ ಮಾಲೀಕರಿಗೆ ಮುಖ್ಯ ಮಾಹಿತಿ; HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ ಸುಲಭ ವಿಧಾನ ಇಲ್ಲಿದೆ

285 comments
HSRP Number Plate

HSRP Number Plate: ಹಳೆಯ ವಾಹನಗಳಿಗೆ HSRP ಅವಳವಡಿಕೆಯ ಕಾರ್ಯವಿಧಾನ

 

ಮೊದಲಿಗೆ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ನಂತರ Book HSRP ನ್ನು ಕ್ಲಿಕ್‌ ಮಾಡಿ.

ವಾಹನ ತಯಾರಕರನ್ನು ಆಯ್ಕೆ ಮಾಡಿ

ವಾಹನದ ಮೂಲ ವಿವರ ಭರ್ತಿ ಮಾಡಿ

ಡೀಲರ್‌ ಸ್ಥಳವನ್ನು ಆಯ್ಕೆ ಮಾಡಿ (HSRP ಅಳವಡಿಕೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ)

HSRP ಶುಲ್ಕವನ್ನು ನಗದು ರೂಪದಲ್ಲಿ ಪಾವತಿ ಮಾಡಲು ಅವಕಾಶವಿಲ್ಲ, ಹಾಗಾಗಿ ಆನ್‌ಲೈನ್‌ನಲ್ಲಿ ಪಾವತಿಸಿ.

ಆವಾಗ, ವಾಹನ ಮಾಲೀಕರ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.

ನಿಮಗೆ ಯಾವಗ ಸೂಕ್ತ ಅನಿಸುತ್ತದೆಯೋ ಅದಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ

ನಂತರ ನಿಮ್ಮ ವಾಹನದ ಯಾವುದೇ ತಯಾರಕ/ ಡೀಲರ್‌ ಸಂಸ್ಥೆಗೆ ಭೇಟಿ ನೀಡಿ.

 

ಗಮನಸಿಬೇಕಾದ ಪ್ರಮುಖ ಅಂಶಗಳು;

ರಸ್ತೆ ಬದಿಯ ಮಾರಾಟಗಾರರದಿಂದ ನಕಲಿ ಹಾಲೋಗ್ರಾಮ/ IND ಮಾರ್ಕ್‌/ ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP / ಒಂದೇ ರೀತಿಯ ಪ್ಲೇಟ್‌ಗಳು/ ಸ್ಮಾರ್ಟ್‌ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಇವುಗಳು ಹೆಚ್‌ಎಸ್‌ಆರ್‌ಪಿ ಫಲಕಗಳಾಗಿರುವುದಿಲ್ಲ.

ಇದನ್ನೂ ಓದಿ: Bigg Boss ಡ್ರೋನ್‌ ಪ್ರತಾಪ್‌ ಸೋಲು, ಅರ್ಧ ಗಡ್ಡ, ಮೀಸೆ ತೆಗೆದ ಕಡಬದ ಯುವಕ!!!

ಮಾಲಿಕತ್ವ ವರ್ಗಾವಣೆ, ಕಂತು ಕರಾರು ನಮೂದು/ರದ್ಧತಿ, ವರ್ಗಾವಣೆ ಇತ್ಯಾದಿ ಯಾವುದೇ ಸೇವೆಗಳು ಹೆಚ್‌ಎಸ್‌ಆರ್‌ಪಿ ಅಳವಡಿಸದ ಹೊರತು ಅನುಮತಿ ನೀಡಲಾಗುವುದಿಲ್ಲ.

ನಿಗದಿತ ದಿನಾಂಕದಿಂದ ಮೂವತ್ತು ದಿನಗಳವರೆಗೆ ಮಾನ್ಯವಾದ ಹೆಚ್‌ಎಸ್‌ಆರ್‌ಪಿ ರಸೀದಿಯನ್ನು ಹಾಜರುಪಡಿಸುವ ವಾಹನಗಳಿಗೆ ಯಾವುದೇ ದಂಡ ಇರುವುದಿಲ್ಲ

ಸರಕಾರ 17-02-2024 ರವರೆಗೆ ಹೆಚ್‌ಎಸ್‌ಆರ್‌ಪಿ ನಂಬರ್‌ ಅಳವಡಿಕೆ ಅವಕಾಶ ನೀಡಿದೆ.

You may also like

Leave a Comment