Home » Cockfight: ಸುಳ್ಯದ ಕೋಳಿ ಅಂಕದ ಮೇಲೆ ಪೊಲೀಸ್‌ ದಾಳಿ, 6 ಮಂದಿ, 8 ಕೋಳಿ ಪೊಲೀಸ್‌ ವಶ!!

Cockfight: ಸುಳ್ಯದ ಕೋಳಿ ಅಂಕದ ಮೇಲೆ ಪೊಲೀಸ್‌ ದಾಳಿ, 6 ಮಂದಿ, 8 ಕೋಳಿ ಪೊಲೀಸ್‌ ವಶ!!

1 comment
Cockfight

Sullia: ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ದಾಳಿ ಮಾಡಿರುವ ಘಟನೆಯೊಂದು ನಡೆದಿದೆ. ಸುಳ್ಯ ತಾಲೂಕು ಕಳಂಜ ಗ್ರಾಮದ ಕಳಂಜ ಮಾಡದ ಗುಡ್ಡೆಯಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಬೆಳ್ಳಾರೆ ಎಸೈ ಸಂತೋಷ್‌ ಬಿ.ಪಿ, ನೇತೃತ್ವದ ಪೊಲೀಸರು ದಾಳಿ ಮಾಡಿ, 6 ಮಂದಿ ಆರೋಪಿಗಳನ್ನು ಹಾಗೂ 8 ಮಂದಿ ಅಂಕದ ಕೋಳಿಗಳನ್ನು ವಶಕ್ಕೆ ಪಡೆದಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Dragon Fruit: ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಡ್ರಾಗನ್‌ ಹಣ್ಣು! ಇದರ ಬೇಸಾಯ ಕ್ರಮ ಹೇಗೆ? ಇಲ್ಲಿದೆ ವಿವರ

ವರದಿಯ ಪ್ರಕಾರ, ಕೋಳಿ ಅಂಕ ನಡೆದ ಸ್ಥಳದಲ್ಲಿ ನಗದು ಹಣ ರೂ.1300.-, ಅಂಕದ ಕೋಳಿಗಳು 8, ಕೋಳಿಯ ಕಾಲುಗಳಿಗೆ ಕಟ್ಟಿದ ಕತ್ತಿ-4, ಹಾಗೂ ಸ್ಥಳದಲ್ಲಿದ್ದ 9 ಮೋಟಾರು ಸೈಕಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

ಬಂಧಿತ ಆರೋಪಿಗಳ ವಿರುದ್ಧ ಕಲಂ 87 ಕರ್ನಾಟಕ ಪೊಲೀಸ್‌ ಕಾಯ್ದೆ 11 prevention of cruelty to Animal Act 1960 ರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

You may also like

Leave a Comment