Home » Parliment attack : ಸಂಸತ್ ದಾಳಿ ನಡೆಸಿದವರಿಗೆ ವಿಪಕ್ಷಗಳ ನಂಟು ?! ಪೋಲಿಸರಿಂದ ಕರೆಂಟ್ ಶಾಕ್, ಚಿತ್ರ ಹಿಂಸೆ !! ದಾಳಿಕೋರರಿಂದ ಸ್ಪೋಟಕ ಸತ್ಯ ಬಯಲು !!

Parliment attack : ಸಂಸತ್ ದಾಳಿ ನಡೆಸಿದವರಿಗೆ ವಿಪಕ್ಷಗಳ ನಂಟು ?! ಪೋಲಿಸರಿಂದ ಕರೆಂಟ್ ಶಾಕ್, ಚಿತ್ರ ಹಿಂಸೆ !! ದಾಳಿಕೋರರಿಂದ ಸ್ಪೋಟಕ ಸತ್ಯ ಬಯಲು !!

1 comment
Parliment attack

Parliment attack: ಕಳೆದ ಡಿಸೆಂಬರ್ 13ರಂದು ದೆಹಲಿಯ ಸಂಸತ್ ಭವನದ ಒಳಗೆ ದಾಳಿ ನಡೆಸಿದ ಧಾಳಿಕೋರರಿಂದ ಸ್ಪೋಟಕ ಸತ್ಯವೊಂದು ಬಯಲಾಗಿದ್ದು ‘ವಿಪಕ್ಷಗಳೊಂದಿಗೆ ನಿಮಗೆ ಸಂಬಂಧವಿದೆ ಎಂಬುದನ್ನು ಒಪ್ಪಿಕೊಳ್ಳಿ’ ಎಂದು ದೆಹಲಿ ಪೊಲೀಸರು ನಮಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Areca nut farming: ಅಡಿಕೆಯನ್ನು ವೈಜ್ಞಾನಿಕವಾಗಿ ಬೆಳೆಯಬಹುದ?

ಹೌದು, ಲೋಕಸಭೆಯ(Parliament)ಒಳಗೆ ಹಾಗೂ ಸಂಸತ್ತಿನ ಆವರಣದಲ್ಲಿ ಹೊಗೆ ಬಾಂಬ್‌ ಸಿಡಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಮೈಸೂರಿನ(Mysore)ಮನೋರಂಜನ್‌ ಡಿ ಸೇರಿ ಐವರು ಆರೋಪಿಗಳಾದ ಸಾಗರ್‌ ಶರ್ಮಾ, ಲಲಿತ್‌ ಝಾ, ಅಮೋಲ್‌ ಶಿಂಧೆ ಹಾಗೂ ಮಹೇಶ್‌ ಕುಮಾವತ್ ಅವರನ್ನು

ವಿಚಾರಣೆಗೆ ಕರೆದೊಯ್ಯುವಾಗ ಕೋರ್ಟ್‌ನ ಎದುರು ಮಾತನಾಡಿದ್ದು ‘ವಿಪಕ್ಷಗಳೊಂದಿಗೆ ನಿಮಗೆ ಸಂಬಂಧವಿದೆ ಎಂಬುದನ್ನು ಒಪ್ಪಿಕೊಳ್ಳಿ’ ಎಂದು ದೆಹಲಿ ಪೊಲೀಸರು ನಮಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 70 ಖಾಲಿ ಕಾಗದಗಳಿಗೆ ಸಹಿ ಹಾಕುವಂತೆ ನಮಗೆ ಒತ್ತಾಯ ಮಾಡಲಾಗಿದೆ. ಯುಎಪಿಎ ಅಡಿಯಲ್ಲಿ ರಾಜಕೀಯ ಪಕ್ಷಗಳೊಂದಿಗೆ ನಮಗೆ ಸಂಬಂಧವಿದೆ ಎಂಬ ದಾಖಲೆಗೆ ಸಹಿ ಹಾಕುವಂತೆ ಹಾಗೂ ತಪ್ಪೊಪ್ಪಿಕೊಳ್ಳುವಂತೆ ನಮಗೆ ಹಿಂಸೆ ನೀಡಲಾಗುತ್ತಿದೆ. ಕರೆಂಟ್‌ ಶಾಕ್‌ ಕೊಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ಇನ್ನು ಈ ಕುರಿತ ಆರೋಪದ ಬಗ್ಗೆ ಉತ್ತರಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ. ಅಲ್ಲದೇ ಪ್ರಕರಣದ ಮತ್ತೊಬ್ಬ ಆರೋಪಿ ನೀಲಂ ಆಜಾದ್‌ ಸೇರಿ ಎಲ್ಲಾ 6 ಆರೋಪಿಗಳ ನ್ಯಾಯಾಂಗ ಬಂಧನವನ್ನು ಮಾರ್ಚ್‌ 1ರ ತನಕ ವಿಸ್ತರಿಸಿದೆ. ಈ ವೇಳೆ ಮುಂದಿನ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಲಾಗಿದೆ.

You may also like

Leave a Comment