Home » Union Budget 2024: ಕೇಂದ್ರ ಬಜೆಟ್‌ನಲ್ಲಿ ಸರಕಾರಿ ನೌಕರರಿಗೆ ಗುಡ್‌ನ್ಯೂಸ್‌ ಸಾಧ್ಯತೆ!!!

Union Budget 2024: ಕೇಂದ್ರ ಬಜೆಟ್‌ನಲ್ಲಿ ಸರಕಾರಿ ನೌಕರರಿಗೆ ಗುಡ್‌ನ್ಯೂಸ್‌ ಸಾಧ್ಯತೆ!!!

1 comment
Union Budget 2024

Nirmala SItaraman: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitaraman) ಇಂದು (ಫೆ.1) ರಂದು ಮೋದಿ ಸರಕಾರದ ಕೊನೆಯ ಬಜೆಟ್‌ ಅನ್ನು ಮಂಡನೆ ಮಾಡಲಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬಜೆಟ್‌ ಮಂಡನೆಯಾಗಲಿದ್ದು, ಇದಕ್ಕೆ ಎಲ್ಲಾ ತಯಾರಿ ನಡೆದಿದೆ.

ಜನರು ಹಣಕಾಸು ಸಚಿವರಿಂದ ಈ ಬಾರಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರಲ್ಲಿ ಸರಕಾರಿ ನೌಕರರ ಬಹುಕಾಲದ ಬೇಡಿಕೆ ಈ ಭಾರಿ ಈಡೇರುವ ವಿಶ್ವಾಸವನ್ನು ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Parliment attack : ಸಂಸತ್ ದಾಳಿ ನಡೆಸಿದವರಿಗೆ ವಿಪಕ್ಷಗಳ ನಂಟು ?! ಪೋಲಿಸರಿಂದ ಕರೆಂಟ್ ಶಾಕ್, ಚಿತ್ರ ಹಿಂಸೆ !! ದಾಳಿಕೋರರಿಂದ ಸ್ಪೋಟಕ ಸತ್ಯ ಬಯಲು !!

18 ತಿಂಗಳ ಫ್ರೀಜ್‌ ಬಾಕಿ ಪಾವತಿಗಾಗಿ ಸರಕಾರಿ ನೌಕರರು ಕಾಯುತ್ತಿದ್ದಾರೆ. ಕೊರೊನಾ ಅವಧಿಯಲ್ಲಿ 2020 ರಿಂದ 2021ರ ವರೆಗೆ 18 ತಿಂಗಳವರೆಗೆ ಡಿಎ ಅಂದರೆ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಿಲ್ಲ ಸರಕಾರ. ಈ ಬಾರಿಯ ಬಜೆಟ್‌ನಲ್ಲಿ ಈ ಕುರಿತು ಸರಕಾರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಹಾಗೆನೇ ಎಂಟನೇ ವೇತನ ಆಯೋಗವನ್ನು (8th Pay Commission) ಕೂಡಾ ಸರಕಾರ ಇನ್ನೂ ರಚಿಸಿಲ್ಲ. ಈ ಕುರಿತು ನೌಕರರ ಸಂಘಟನೆಗಳು ಹೋರಾಟ ನಡೆಸುತ್ತಲೇ ಇದೆ. ಈ ಬಾರಿ ವೇತನ ಹೆಚ್ಚಿಸುವ ಸಮಯ ಬಂದಿದೆ ಎಂದು ತಜ್ಞರ ಅಭಿಪ್ರಾಯ.

ಕಳೆದ ಮೂರು ವರ್ಷಗಳಿಂದ ಸರಕಾರಕ್ಕೆ ಕೊರೊನಾ ಲಾಕ್‌ಡೌನ್‌ ಒಂದು ಸವಾಲಾಗಿತ್ತು. ಈ ಕಾರಣಕ್ಕೆ ಸರಕಾರಿ ನೌಕರರ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಿಲ್ಲ. ಹಾಗಾಗಿ ಈ ಬಾರಿ ಸರಕಾರ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.

You may also like

Leave a Comment