Home » Sirsi News: ಚಾಕ್ ಪೀಸ್ ನಿಂದ ಶಿವಲಿಂಗದ ಮೇಲೆ ಗೀಚಿದ ದುಷ್ಕರ್ಮಿಗಳು!

Sirsi News: ಚಾಕ್ ಪೀಸ್ ನಿಂದ ಶಿವಲಿಂಗದ ಮೇಲೆ ಗೀಚಿದ ದುಷ್ಕರ್ಮಿಗಳು!

1 comment
Sirsi News

ದೇವಸ್ಥಾನದ ಬಾಗಿಲು ಮುರಿದು ಕಿಡಿಗೇಡಿಗಳು ಶಿವಲಿಂಗದ ಮೇಲೆ ಚಾಕ್ ಪೀಸ್ ತಿಂದ ಬರೆದು ಲಿಂಗವನ್ನು ವಿಕೃತಗೊಳಿಸಿದ್ದಾರೆ.

ಶಿರಸಿ: ದೇವಾಲಯದ ಗರ್ಭಗುಡಿ ನುಗ್ಗಿದ ಕಿಡಿಗೇಡಿಗಳು ಬಳಪದಿಂದ ಬರೆದು ಲಿಂಗವನ್ನು ವಿಕೃತಗೊಳಿಸಿದ್ದಾರೆ. ಶಿರಸಿಯ ನರೆಬೈಲ್‌ನಲ್ಲಿರುವ ಶ್ರೀ ಸೋಮೇಶ್ವರ ದೇವಸ್ಥಾನದ ಶಿವಲಿಂಗ ಮೂರ್ತಿ ಮೇಲೆ ಚಾಕ್‌ಪೀಸ್‌ನಿಂದ ಬರೆದು ವಿಕೃತಿ ಮೆರೆದಿದ್ದಾರೆ.

ಇದನ್ನೂ ಓದಿ: Bengaluru: ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ; 5,8,9 ನೇ ತರಗತಿ ಮೌಲ್ಯಾಂಕನ ( SA-2) ಪರೀಕ್ಷೆಯ ವೇಳಾಪಟ್ಟಿ ಕುರಿತು ಇಲ್ಲಿದೆ ಮಾಹಿತಿ!!

ಭಾನುವಾರ ಬೆಳಿಗ್ಗೆ 10 ಗಂಟೆಗೆ ಪುರೋಹಿತರು ಗರ್ಭಗುಡಿಯ ಬಾಗಿಲನ್ನು ತೆರೆದಿದ್ದಾರೆ. ಈ ವೇಳೆ ಬಾಗಿಲು ಮುರಿದಿರುವುದು ಮತ್ತು ಶಿವಲಿಂಗವನ್ನು ವಿಕೃತಿಗೊಳಿಸಿರುವುದು ಬೆಳಕಿಗೆ ಬಂದಿದೆ. ಶಿವಲಿಂಗದ ಮೇಲೆ ಆಂಗ್ಲ ಭಾಷೆಯಲ್ಲಿ ಏನೇನೋ ಬರೆದಿದ್ದಾರೆ. ಆದರೆ ದೇವಸ್ಥಾನದ ಒಳಗಿನ ಯಾವುದೇ ಆಭರಣಗಳು ಕಳವಾಗಿಲ್ಲ ಎಂದು ದೇವಸ್ಥಾನದ ಅರ್ಚಕ ಮಹೇಶ್ ತಿಳಿಸಿದ್ದಾರೆ.

ಜೆಇಎಸ್‌ 2024ಕ್ಕೆಂದು ಇಂಗ್ಲೀಷ್‌ನಲ್ಲಿ ಬರೆದಿದ್ದಾರೆ. ಗರ್ಭಗುಡಿಗೆ ನುಗ್ಗಿ ಅಶುದ್ಧತೆ ಮಾಡಿದ್ದಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ.

ಈ ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

You may also like

Leave a Comment