Home » Biscuit Row: ನಾಯಿ ತಿನ್ನದ ಬಿಸ್ಕೆಟ್‌ ಕಾರ್ಯಕರ್ತನಿಗೆ ನೀಡಿದ ರಾಹುಲ್;‌ ಕಾರ್ಯಕರ್ತರಿಗೆ ಮಾಡಿದ ಅಪಮಾನವೆಂದ ಬಿಜೆಪಿ, ವೀಡಿಯೋ ವೈರಲ್‌

Biscuit Row: ನಾಯಿ ತಿನ್ನದ ಬಿಸ್ಕೆಟ್‌ ಕಾರ್ಯಕರ್ತನಿಗೆ ನೀಡಿದ ರಾಹುಲ್;‌ ಕಾರ್ಯಕರ್ತರಿಗೆ ಮಾಡಿದ ಅಪಮಾನವೆಂದ ಬಿಜೆಪಿ, ವೀಡಿಯೋ ವೈರಲ್‌

46 comments
Biscuit Row

ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ನಾಯಿ ಬಿಸ್ಕೆಟನ್ನು ಕಾಂಗ್ರೆಸ್ ಕಾರ್ಯಕರ್ತನೋರ್ವನಿಗೆ ನೀಡಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದೆ. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಅದರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಬಿಜೆಪಿ ರಾಹುಲ್ ಕೆಲಸದ ವಿರುದ್ಧ‌ ಕಿಡಿಕಾರಿದ್ದಾರೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಾ ಕಾರ್ಯಕರ್ತರ ಬಗ್ಗೆ ಅವಹೇಳನಕಾರಿ ಹೇಳಿದ್ದು ಇದು ಪಕ್ಷ ತಮ್ಮ ಕಾರ್ಯಕರ್ತರಿಗೆ ಮಾಡಿದ ಅವಮಾನ ಎಂದು ಆರೋಪ ಮಾಡಿದೆ.

ಇದನ್ನೂ ಓದಿ: Rape: ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೋ ನೋಡಿ ತಂಗಿ ಮೇಲೆ ಅತ್ಯಾಚಾರ ಮಾಡಿ, ಕೊಂದ ಅಣ್ಣ

https://twitter.com/pallavict/status/1754555378644529346

ಈ ಯಾತ್ರೆಯ ವೇಳೆ ರಾಹುಲ್‌ ಗಾಂಧಿ ಯಡವಟ್ಟು ಮಾಡಿಕೊಂಡಿದ್ದಾರೆ.ನ ನಾಯಿಯೊಂದು ಯಾತ್ರೆಗೆ ಬಂದಿದ್ದು, ಅವರು ಈ ಸಂದರ್ಭದಲ್ಲಿ ನಾಯಿ ಬಿಸ್ಕೆಟನ್ನು ನೀಡಿದ್ದಾರೆ. ಆದರೆ ನಾಯಿ ಈ ಬಿಸ್ಕೆಟ್‌ ತಿಂದಿಲ್ಲ. ಇದೇ ವೇಳೆ ರಾಹುಲ್‌ ಅವರು ತಮ್ಮ ಬಳಿ ಮಾತನಾಡಲು ಕಾರ್ಯಕರ್ತನೊಬ್ಬನಿ ನಾಯಿಗೆ ಹಾಕಿದ ಬಿಸ್ಕೆಟ್‌ ನೀಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

You may also like

Leave a Comment