Home » Madhu Bangarappa: ಚಕ್ರವರ್ತಿ ಸೂಲಿಬೆಲೆ ತಲೆಹರಟೆ, ಮಾನ, ಮರ್ಯಾದೆ, ಕಾಮನ್‌ಸೆಲ್ಸ್‌ ಇಲ್ಲ ಅವನಿಗೆ-ಸಚಿವ ಮಧು ಬಂಗಾರಪ್ಪ

Madhu Bangarappa: ಚಕ್ರವರ್ತಿ ಸೂಲಿಬೆಲೆ ತಲೆಹರಟೆ, ಮಾನ, ಮರ್ಯಾದೆ, ಕಾಮನ್‌ಸೆಲ್ಸ್‌ ಇಲ್ಲ ಅವನಿಗೆ-ಸಚಿವ ಮಧು ಬಂಗಾರಪ್ಪ

1 comment

Madhu Bangarappa: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ,” ಚಕ್ರವರ್ತಿ ಸೂಲಿಬೆಲೆ ತಲೆಹರಟೆ; ಅವನಿಗೆ ಮಾನ,ಮರ್ಯಾದೆ, ಕಾಮನ್‌ಸೆನ್ಸ್‌ ಇಲ್ಲ. ನಮಾಜ್‌ಗೆ ಅವಕಾಶ ನೀಡಲು ಪರೀಕ್ಷಾ ವೇಳಾಪಟ್ಟಿ ಬದಲಾವಣೆ ಮಾಡಿದ್ದಾರೆ ಎಂದು ಟ್ವೀಟ್‌ ಮಾಡಿದ್ದು, ತಪ್ಪು ಸಂದೇಶವನ್ನು ಹರಡುತ್ತಿದ್ದಾರೆ. ಮಾರ್ಚ್‌ 1 ರಿಂದ ದ್ವಿತೀಯ ಪಿಯು ಪರೀಕ್ಷೆ ಪ್ರಾರಂಭವಾಗುತ್ತಿರುವ ಕಾರಣ ಅಂದು ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: Parliment election : ಜಯದೇವ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಲೋಕಸಭಾ ಅಭ್ಯರ್ಥಿ ?! ಈ ಕ್ಷೇತ್ರದಿಂದಲೇ ಕಣಕ್ಕೆ, ಪಕ್ಷ ಯಾವುದು ?

ಚಕ್ರವರ್ತಿ ಸೂಲಿಬೆಲೆ ಟ್ವೀಟ್‌ಗೆ ಕೆಲವು ಬಿಜೆಪಿ ನಾಯಕರು ಸಾಥ್‌ ನೀಡಿದ್ದು, ಇದೊಂದು ವಿಷ ಬೀಜ ಬಿತ್ತುವ ಸಮಯವಲ್ಲ. ಸೂಲಿಬೆಲೆ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿದ್ದು, ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಎಚ್ಚರಿಕೆಯನ್ನು ನೀಡಿದ್ದಾರೆ.

You may also like

Leave a Comment