Home » Miracle: 5 ವರ್ಷದಿಂದ ಕೋಮಾದಲ್ಲಿದ್ದ ಮಗಳು – ತಾಯಿ ಹೇಳಿದ ಆ ಜೋಕ್ ಗೆ ಎಚ್ಚರವಾಗಿ ನಕ್ಕುಬಿಟ್ಟಳು !!

Miracle: 5 ವರ್ಷದಿಂದ ಕೋಮಾದಲ್ಲಿದ್ದ ಮಗಳು – ತಾಯಿ ಹೇಳಿದ ಆ ಜೋಕ್ ಗೆ ಎಚ್ಚರವಾಗಿ ನಕ್ಕುಬಿಟ್ಟಳು !!

3 comments
Miracle

Miracle : ಅಪಘಾತವೊಂದರಲ್ಲಿ ಮಗಳು ಕೋಮಾಗೆ ಹೋಗಿ 5 ವರ್ಷ ಕಳೆದಿತ್ತು. ಆದರೆ ಇದೀಗ ತಾಯಿ ಹೇಳಿದ ಒಂದೇ ಒಂದು ಜೋಕ್ಸ್ ನಿಂದಾಗಿ ಆ ಮಗಳು ಪವಾಡ(Miracle)ವೆಂಬಂತೆ ಎದ್ದುಕುಳಿತಿದ್ದಾಳೆ.

ಇದನ್ನೂ ಓದಿ: Tonsil Pain: ಗಂಟಲು ನೋವು ಇದ್ರೆ ಯೋಚ್ನೆ ಬೇಡ, ಇಲ್ಲಿದೆ ಇದಕ್ಕೆ ಪರಿಹಾರ!

ಹೌದು, 2017ರಲ್ಲಿ ಮಿಚಿಗನ್‌ನ ಜೆನ್ನಿಫರ್ ಫ್ಲೆವೆಲೆನ್ ಎಂಬ ಹುಡುಗಿ ಭೀಕರವಾದ ಕಾರು ಅಪಘಾತದಲ್ಲಿ ಕೋಮಾಗೆ ಜಾರಿದ್ದ ಮಗಳು. ಇದೀಗಾ ಪವಾಡವೆಂಬಂತೆ 5ವರ್ಷಗಳ ನಂತರ ತಾಯಿಯ ಜೋಕ್ಸ್ ಕೇಳಿ ಕೋಮಾದಿಂದ ಮಗಳು ಹೊರಬಂದಿದ್ದಾಳೆ.

ಅಂದಹಾಗೆ ಆರಂಭದಲ್ಲಿ ಯುವತಿಯನ್ನು ಕೋಮಾದಿಂದ ಹೊರತರಲು ಆಸ್ಪತ್ರೆಯ ನರ್ಸ್‌ಗಳು ಏನೇನೋ ಹರಸಾಹಸಗಳನ್ನು ಮಾಡಿದ್ದರು. ಆದರೆ ಏನೂ ಪ್ರಯೋಜನವಾಗಿರಲ್ಲಿಲ್ಲ. ವೈದ್ಯರ ಸಲಹೆಯಂತೆ ಈಕೆಗೆ ಆಕೆಯ ತಾಯಿ ಪ್ರತಿದಿನ ಜೋಕ್ಸ್ ಹೇಳುತ್ತಿದ್ದರು. ಕೋಮಾಗೆ ಜಾರಿದಾಗ ಯುವತಿಗೆ 36 ವರ್ಷ. ಇದೀಗ 41 ವಯಸ್ಸು. ಅಂದರೆ ಸುಮಾರು ಐದು ವರ್ಷಗಳ ನಂತರ, ಮಗಳು ಇದ್ದಕ್ಕಿದ್ದಂತೆ ಜೋಕ್ಸ್ ಕೇಳಿ ಕೋಮಾದಿಂದ ಎಚ್ಚರಗೊಂಡು ಜೋರಾಗಿ ನಕ್ಕಿದ್ದಾಳೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮೇರಿ ಫ್ರೀ ಬೆಡ್ ಪುನರ್ವಸತಿ ಆಸ್ಪತ್ರೆಯ ಡಾ. ರಾಲ್ಫ್ ವಾಂಗ್ ಅವರು ಇದು ಪವಾಡಕ್ಕಿಂತ ಕಡಿಮೆಯಿಲ್ಲ. ಏಕೆಂದರೆ, ಇದು ಶೇಕಡಾ 1 ರಿಂದ 2ರಷ್ಟು ರೋಗಿಗಳಲ್ಲಿ ಮಾತ್ರ ಸಂಭವಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

You may also like

Leave a Comment