Home » First night : ಫಸ್ಟ್’ನೈಟ್ ಅಲ್ಲಿ ಹುಡುಗಿಯೊಬ್ಬಳನ್ನೇ ಬಿಟ್ಟು ಹುಡುಗ ಎಸ್ಕೇಪ್- ನಂತರ ಆದದ್ದೆಲ್ಲ ವಿಚಿತ್ರ!!

First night : ಫಸ್ಟ್’ನೈಟ್ ಅಲ್ಲಿ ಹುಡುಗಿಯೊಬ್ಬಳನ್ನೇ ಬಿಟ್ಟು ಹುಡುಗ ಎಸ್ಕೇಪ್- ನಂತರ ಆದದ್ದೆಲ್ಲ ವಿಚಿತ್ರ!!

1 comment
First night

First night: ಮದುವೆಯ ಮೊದಲ ಹೆಜ್ಜೆಯೇ ಗಂಡು-ಹೆಣ್ಣಿನ ಮೊದಲ ರಾತ್ರಿ. ಇಲ್ಲಿಂದ ನವ ದಂಪತಿಗಳ ನಿಜವಾದ ಜೀವನ ಶುರು. ಮೊದಲ ರಾತ್ರಿ ಎಂಬುದು ಬದುಕಿಗೆ ಒಂದು ಅರ್ಥ ನೀಡುವ ಸಂದರ್ಭ. ಅದಕ್ಕೆ ಅದರದ್ದೇ ಆದ ಮಹತ್ವವಿದೆ. ಈ ಗಳಿಗೆಗಾಗಿಯೇ ಆ ಎರಡು ಜೀವಗಳು ಸಾಕಷ್ಟು ಸಮಯದಿಂದ ಕಾದಿರುತ್ತವೆ. ಆದರೆ ಇಲ್ಲೊಂದೆಡೆ ಒಬ್ಬ ಆಸಾಮಿ, ಮದುವೆಯಾದ ವರ ಫಸ್ಟ್ ನೈಟ್(First night)ದಿನವೇ ಹುಡುಗಿಯನ್ನು ಏಕಾಂಗಿಯಾಗಿ ಬಿಟ್ಟು ಎಸ್ಕೇಪ್ ಆಗಿದ್ದಾನೆ.

ಇದನ್ನೂ ಓದಿ: Varthur Santhosh: ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ಗೆ ಸನ್ಮಾನ ಮಾಡಿದ್ದ ಎಸ್‌ಐ ರಾತ್ರೋರಾತ್ರಿ ಎತ್ತಂಗಡಿ

ಹೌದು, ಬಿಹಾರದ(Bihar) ಮುಜಾಫರ್ ಪುರದಲ್ಲಿ ಈ ರೀತಿಯ ವಿಚಿತ್ರ ಘಟನೆಯೊಂದು ನಡೆದಿದ್ದು, ಭಾಗಲ್‌ಪುರಿ ಬ್ಯಾಂಕ್‌ನ ಉದ್ಯೋಗಿ ವಿಶ್ವಜಿತ್‌ ಶಾಹಿ ಅವರ ಪುತ್ರ ಆದಿತ್ಯ ಶಾಹಿ ಅವರ ಮದುವೆಯು ಫೆ.4 ರಂದು ನೆರವೆರಿತ್ತು. ಬಳಿಕ ಮೊದಲ ರಾತ್ರಿಗೆ ಎಲ್ಲಾ ತಯಾರಿ ಮಾಡಲಾಗಿದ್ದು, ವಧು ಕೂಡ ಕಾದು ಕುಳಿತಿದ್ದಳು. ಆದರೆ ವಿಚಿತ್ರ ಅಂದ್ರೆ ಆದಿತ್ಯ ಶಾಹಿ ತನ್ನ ಮೊದಲ ರಾತ್ರಿಯಂದೇ ಮನೆ ಬಿಟ್ಟು ಹೊಗಿದ್ದಾನೆ.

ಅಂದಹಾಗೆ ವಿಚಾರ ತಿಳಿಯುತ್ತಿದ್ದಂತೆ ಸಾಕಷ್ಟು ಹುಡುಕಾಡಿ ಸುಸ್ತಾದ ಬಳಿಕ ಅವರ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಮೊಬೈಲ್ ಫೋನ್‌ ಬೇರೆ ಸ್ವಿಚ್ ಆಫ್ ಆಗಿತ್ತು. ಎಲ್ಲಿ ಹೋದನು ಎಂದು ತುಂಬಾ ಚಿಂತೆಯಲ್ಲಿರುವಾಗಲೇ ಮೂರು ದಿನಗಳ ನಂತರ ವರನ ಫೋನ್ ಆನ್ ಆಯಿತು. ಇದಾದ ಬಳಿಕ ಪೋಲಿಸರು ಆದಿತ್ಯ ಶಾಹಿ ಫೋನ್ ಟ್ರ್ಯಾಕ್ ಮಾಡಿ ಆತನ ಸ್ಥಳವನ್ನು ಪತ್ತೆ ಮಾಡಿದರು.

ನಂತರ ಆದಿತ್ಯನನ್ನು ವಶಕ್ಕೆ ಪಡೆಯಲಾಯಿತು. ಮನೆಯಿಂದ ಹೊರಡುವ ವೇಳೆ ಸಮೀಪದ ಎಟಿಎಂನಿಂದ 50,000 ರೂಪಾಯಿ ಡ್ರಾ ಮಾಡಿದ್ದಾನೆ ಎಂದು ವರದಿಯಾಗಿದೆ. ಮೊದಲು ಬಸ್ಸಿನಲ್ಲಿ ಪಟನಾಗೆ ಹೋಗಿ, ನಂತರ ಅಲ್ಲಿಂದ ಡಣಾಪುರಕ್ಕೆ ಹೋದೆ ಎಂದು ಆದಿತ್ಯ ಹೇಳಿದ್ದಾನೆ. ವಿಚಾರಣೆ ಬಳಿಕ ತಾನು ಎಲ್ಲಿಗೆಲ್ಲಾ ಹೋದೆ, ಏನಾಯಿತು ಎಂಬ ವಿಚಾರ ಎಲ್ಲಾ ತಿಳಿಸಿದ್ದಾನೆ. ಆದರೆ ಫಸ್ಟ್ ನೈಟ್ ಬಿಟ್ಟು ತಾನೇಕೆ ಮನೆಯಿಂದ ಕಾಲ್ಕಿತ್ತೆ ಎಂದು ಆದಿತ್ಯ ಬಾಯಿ ಬಿಟ್ಟಿಲ್ಲ.

You may also like

Leave a Comment