Home » Remote Control Ceiling Fans: ಬೇಸಿಗೆಯ ಸೆಕೆ ತಡೆದುಕೊಳ್ಳಲು ಆಗುತ್ತಿಲ್ಲವೇ? ಇಲ್ಲಿದೆ ಬೆಸ್ಟ್ ರಿಮೋಟ್ ಕಂಟ್ರೋಲ್ ಫ್ಯಾನ್!

Remote Control Ceiling Fans: ಬೇಸಿಗೆಯ ಸೆಕೆ ತಡೆದುಕೊಳ್ಳಲು ಆಗುತ್ತಿಲ್ಲವೇ? ಇಲ್ಲಿದೆ ಬೆಸ್ಟ್ ರಿಮೋಟ್ ಕಂಟ್ರೋಲ್ ಫ್ಯಾನ್!

1 comment
Remote control ceiling fan

Remote Control Ceiling Fans: ಬೇಸಿಗೆ ಬಂದಾಕ್ಷಣ ಎಲ್ಲರು ತಣ್ಣನೆಯ ನೀರನ್ನು ಗಾಳಿಯನ್ನು ಬಯಸುತ್ತಾರೆ. ನಿಮ್ಮ ಮನೆಯನ್ನು ತಂಪಾಗಿಸಲು ರಿಮೋಟ್ ಕಂಟ್ರೋಲ್ ಪ್ಯಾನ್ ಬಂದಿದೆ. Amazon ನಲ್ಲಿ ಈ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್‌ ಅತಿ ಕಡಿಮೆ ಬೆಲೆಗೆ ನಿಮಗೆ ಸಿಗಲಿದೆ.

ರಿಮೋಟ್ ಕಂಟ್ರೋಲ್ ಫ್ಯಾನ್

ಬೆಸ್ಟ್‌ ರಿಮೋಟ್ ಕಂಟ್ರೋಲ್ ಫ್ಯಾನ್ ಯಾವುದು ಗೊತ್ತ?

ಅತಿ ಕಡಿಮೆ ಬೆಲೆಗೆ ರಿಮೋಟ್ ಕಂಟ್ರೋಲ್ ಫ್ಯಾನ್ ಸಿಗಲಿದೆ.

ಕೆಲವೆ ದಿನಗಳಲ್ಲಿ ಬೇಸಿಗೆ ಶುರುವಾಗಲಿದೆ. ರಸ್ತೆಯ ಅಕ್ಕ ಪಕ್ಕ ಕಲ್ಲಂಗಡಿ, ಸೌತೆಕಾಯಿ, ಇತರ ತಂಪೂಪಾನಿಯಾಗಳು ನಿಮ್ಮನ್ನು ಸೆಳೆಯುತ್ತವೆ. ಮಧ್ಯಾಹ್ನ ವಂತೂ ನೀವು ಹೊರಗೆ ಹೋಗಲು ಆಗುವುದಿಲ್ಲ. ನಿಮ್ಮ ಮನೆಯಲ್ಲಿಯೇ ಕೂರಬೇಕು.. ಆದರೂ ನಿಮಗೆ ಸೆಕೆ ಬೆಂಬಿಡದೆ ಕಾಡುತ್ತದೆ.

ಬೇಸಿಗೆಯಲ್ಲಿ ನಮ್ಮ ದೇಹವು ಅತಿಯಾದ ನೀರನ್ನು ಬಯಸುತ್ತದೆ. ವೈದ್ಯರು ಸಹ ಇದನ್ನೇ ಹೇಳುತ್ತಾರೆ. ಬೇಸಿಗೆಯಲ್ಲಿ ತಣ್ಣನೆಯ ಗಾಳಿಯನ್ನು ಎಲ್ಲರೂ ಇಷ್ಟ ಪಡುತ್ತಾರೆ. ಕೆಲವರು ಬೇಸಿಗೆಯ ಮುನ್ನ ಮನೆಗೆ ಹೊಸ ಮಾದರಿಯ ಎಸಿ ಗಳನ್ನು ತಂದು ಹಾಕಿಸಿಕೊಳ್ಳುತ್ತಾರೆ.

ಇನ್ನೂ ಎಸಿ ಕೆಲವರಿಗೆ ಇಡಿಸುತ್ತದೆ. ಇನ್ನೂ ಕೆಲವರಿಗೆ ಎಸಿ ಯ ಗಾಳಿ ಎಂದರೇ ಆಗುವುದಿಲ್ಲ. ತಲೆನೋವು ಬರುತ್ತದೆ ಎಂದು ಹೇಳುತ್ತಾರೆ. ಬಹುತೇಕ ಮಂದಿ ಪ್ಯಾನ್ ಗಾಳಿಯನ್ನು ಇಷ್ಟ ಪಡುತ್ತಾರೆ.

ಮೊದಲು ಪ್ಯಾನ ಅನ್ನು ನಿಯಂತ್ರಿಸಲು ಸ್ವಿಚ್ ಬೋರ್ಡ್ ಹತ್ತಿರ ಹೋಗಬೇಕಿತ್ತು. ಇದು ಕೆಲವರಿಗೆ ಹಿಂಸೆ ಅನಿಸುತ್ತಿತ್ತು. ಆದರೆ ಈಗ ನೀವು ಕುಂತಲ್ಲಿಯೇ ಪ್ಯಾನ್ ಅನ್ನು ನಿಯಂತ್ರಣ ಮಾಡಬಹುದು. ತುಂಬ ತರಹದ ರಿಮೋಟ್ ಕಂಟ್ರೋಲ್ ಫ್ಯಾನ್ ಗಳು ಬಂದಿವೆ. ಇವುಗಳನ್ನು ನೀವು ಅಮೆಜಾನ್ ಅಲ್ಲಿ ಖರೀದಿ ಮಾಡಬಹುದು.

ಆಟಂಬರ್ಗ್ ಫ್ಯಾನ್‌

ಈ ಫ್ಯಾನ್ ತುಂಬ ವಿಭಿನ್ನವಾಗಿದೆ. ಈ ಫ್ಯಾನಿನಲ್ಲಿ ಎಲ್ಇಡಿ ಬಲ್ಬ್ ಗಳನ್ನು ಆಳವಡಿಸಲಾಗಿದೆ. ಇದು ತುಂಬ ವಿಶಿಷ್ಟವಾಗಿ ಕಾಣುತ್ತದೆ. ಇದರ ಬ್ಲೇಡ್ ಗಳು ಬೆಳಕಿಗೆ ಮಿನುಗುತ್ತವೆ. ಈ ಫ್ಯಾನ್ ಅನ್ನು ಐಆರ್ ರಿಮೋಟ್ ಮೂಲಕ ನಿಯಂತ್ರಣ ಮಾಡಬಹುದು. ಇದು ಟೈಮರ್, ಸ್ಲೀಪ್ ಮತ್ತು ಬೂಸ್ಟ್ ಮೋಡ್‌ಗಳನ್ನು ಸಹ ಹೊಂದಿದೆ. ನೀವು ಅದನ್ನು ಕೇವಲ ಒಂದು ಕ್ಲಿಕ್‌ನಲ್ಲಿ ಬಳಸಬಹುದು.

ಈ ಫ್ಯಾನ್ 350 RPM ವೇಗದಲ್ಲಿ ಗಾಳಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಪ್ರತಿಶತ 65 ರಷ್ಟು ಕರೆಂಟ್ ಅನ್ನು ಉಳಿಸುತ್ತದೆ. ಒಂದು ವರ್ಷದ ವಾರಂಟಿಯೊಂದಿಗೆ Amazon ನಲ್ಲಿ ಇದರ ಬೆಲೆ 3,499 ರೂ. ಗೆ ಲಭ್ಯವಿದೆ.

ಹ್ಯಾವೆಲ್ಸ್ ಸೇವಿಂಗ್ಸ್ ಸೀಲಿಂಗ್ ಫ್ಯಾನ್

ಹ್ಯಾವೆಲ್ಸ್ ಎಲ್ಲರೂ ಬಳಸುವ ಮೆಚ್ಚಿನ ಕಂಪನಿಯಾಗಿದೆ. ಹ್ಯಾವೆಲ್ಸ್‌ನ ಈ ರಿಮೋಟ್ ಕಂಟ್ರೋಲ್ ಫ್ಯಾನ್‌ನಲ್ಲಿ ಇಂಡಕ್ಷನ್ ಮೋಟಾರ್ ಅನ್ನು ಒದಗಿಸಲಾಗಿದೆ. ಇದರ ಮೇಲೆ ಧೂಳು ಕೂರುವುದಿಲ್ಲ. ಇದು ನಿಮ್ಮ ಬಿಲ್ ಅನ್ನು ಬಹುತೇಕ ಕಡಿಮೆ ಮಾಡುತ್ತದೆ. Amazon ನಲ್ಲಿ ಈ ಫ್ಯಾನ್ ಬೆಲೆ 3,048 ರೂ. ಆಗಿದೆ.

ಕ್ರೋಂಪ್ಟನ್ ಎನರ್ಜಿನ್ ಕ್ರೋಮೇರ್ ಸೀಲಿಂಗ್ ಫ್ಯಾನ್ 

ಇದು 5 ಸ್ಟಾರ್ ಪಡೆದುಕೊಂಡಿರುವ ಫ್ಯಾನ್ ಆಗಿದೆ. ಕಡಿಮೆ ವಿದ್ಯುತ್ ಬಳಸುತ್ತದೆ. ರಿಮೋಟ್ ಮೂಲಕವೇ ಇದರ ವೇಗವನ್ನು ನಿಯಂತ್ರಣ ಮಾಡಬಹುದು.28 ಮೋಟರ್ ಅನ್ನು ಹೊಂದಿದ್ದು, 350 RPM ಇದರ ವೇಗವಾಗಿದೆ. 5 ವರ್ಷದ ವಾರಂಟಿಯೊಂದಿಗೆ ದೊರೆಯಲಿದೆ.ಇದನ್ನು ಅಮೆಜಾನ್‌ನಿಂದ 3,298 ರೂ.ಗೆ ಖರೀದಿಸಬಹುದು.

You may also like

Leave a Comment