Home » Actress Nithya Menon: ಹುಡುಗಿಯರು ಇದನ್ನು ಸುಲಭದಲ್ಲಿ ಮಾಡುತ್ತಾರೆ, ಆದರೆ ಹುಡುಗರನ್ನು ಯೋಚನೆ ಮಾಡಿದರೆ ಅಯ್ಯೋ ಪಾಪ ಅನ್ಸುತ್ತೆ- ನಿತ್ಯಾ ಮೆನನ್‌

Actress Nithya Menon: ಹುಡುಗಿಯರು ಇದನ್ನು ಸುಲಭದಲ್ಲಿ ಮಾಡುತ್ತಾರೆ, ಆದರೆ ಹುಡುಗರನ್ನು ಯೋಚನೆ ಮಾಡಿದರೆ ಅಯ್ಯೋ ಪಾಪ ಅನ್ಸುತ್ತೆ- ನಿತ್ಯಾ ಮೆನನ್‌

1 comment
Actress Nithya Menon

Actress Nithya Menon: ನಿತ್ಯಾ ಮೆನನ್ ಕೇವಲ ಒಂದು ರಂಗಕ್ಕೆ ಸೀಮಿತವಾಗದೆ ಟಾಲಿವುಡ್ ಕಾಲಿವುಡ್ ಸ್ಯಾಂಡಲ್ ವುಡ್ ಮಾಲಿವುಡ್ ಗಳ ಸಿನಿಮಾದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಪ್ರಮುಖವಾಗಿ ಜೋಶ್ ಮೈನಾ ಕೋಟಿಗೊಬ್ಬ 2 ಸಿನಿಮಾಗಳಲ್ಲಿ ಕನ್ನಡಿಗರ ಮನ ಗೆದ್ದಿದ್ದಾರೆ.

ಇದನ್ನೂ ಓದಿ: Uttar Pradesh: 10 ರ ಬಾಲೆಯ ಕನಸಿನಲ್ಲಿ ಕಂಡ ಶ್ರೀ ಕೃಷ್ಣ! ಎಲ್ಲಿದೆ ಎಂದು ಕನಸು ಬಿತ್ತೋ ಅಲ್ಲೇ ಇತ್ತು ಮೂರ್ತಿ

ನಿತ್ಯಾರವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹುಡುಗರು ಮತ್ತು ಹುಡುಗಿಯರ ನಡುವಿನ ವ್ಯತ್ಯಾಸವೇನು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಹುಡುಗರ ಬಗ್ಗೆ ಅನುಕಂಪದ ಮಾತುಗಳನ್ನಾಡಿದ್ದಾರೆ. ಗಂಡು ಮಕ್ಕಳು ಅಷ್ಟು ಸುಲಭವಾಗಿ ಅಳುವುದಿಲ್ಲ. ಅವರಿಗೆ ಚಿಕ್ಕ ವಯಸ್ಸಿನಿಂದಲೇ ಗಂಡಸರು ಆಳಬಾರದು ಎಂದು ಹೇಳಿ ಕೊಟ್ಟಿರುತ್ತಾರೆ. ಆದರೆ ಹೆಣ್ಣು ಮಕ್ಕಳು ಹಾಗಲ್ಲ ಎಂದು ಹೇಳಿದ್ದಾರೆ.

ನಿತ್ಯಾ ಹೇಳುವಂತೆ, ಅಳುವುದು ಒಳ್ಳೆಯದು. ನಾವು ನಮ್ಮ ಎಲ್ಲ ದುಃಖವನ್ನು ಹೊರ ಹಾಕಿದರೆ ನಮ್ಮ ಮನಸ್ಸು ಹಗುರವಾಗುತ್ತದೆ. ಇದರಿಂದ ನಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸಬಹುದು, ಜೊತೆಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದ್ದಾರೆ. ಗಂಡಸರು ಅಳಬೇಕು ಎಂದುಕೊಂಡರೂ ಅಳುವುದಿಲ್ಲ. ಇದನ್ನು ನೋಡಿದಾಗ ನನಗೆ ಬೇಸರವಾಗುತ್ತದೆ ಎಂದಿದ್ದಾರೆ.

ಇನ್ನೂ ನಿತ್ಯಾ ಅವರ ತಿರುಚಿತ್ರಂಬಲಂ ಸಿನಿಮಾ ಯಶಸ್ಸು ಕಂಡಿದೆ. ಧನುಷ್ ಅವರ 50 ನೇ ಸಿನಿಮಾ ಹಾಗೂ ಅವರೇ ನಿರ್ದೇಶನ ಮಾಡುತ್ತಿರುವ ರಾಯನ್ ಚಿತ್ರದಲ್ಲಿ ನಿತ್ಯಾ ನಟಿಸುತ್ತಿದ್ದಾರೆ.

You may also like

Leave a Comment