Home » Mangalore (Ullala): ದುಬೈ ರಸ್ತೆ ಅಪಘಾತದಲ್ಲಿ ಕೋಟೆಕಾರು ನಿವಾಸಿ ಸಾವು, ಹೊಸ ಕಾರಿನಲ್ಲೇ ಸಂಭವಿಸಿತು ದುರಂತ ಘಟನೆ

Mangalore (Ullala): ದುಬೈ ರಸ್ತೆ ಅಪಘಾತದಲ್ಲಿ ಕೋಟೆಕಾರು ನಿವಾಸಿ ಸಾವು, ಹೊಸ ಕಾರಿನಲ್ಲೇ ಸಂಭವಿಸಿತು ದುರಂತ ಘಟನೆ

1 comment
Mangalore (Ullala)

Mangalore: ದುಬೈನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಕೋಟೆಕಾರು ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ (28) ಮೃತ ಹೊಂದಿದ್ದಾರೆ.

ಇದನ್ನೂ ಓದಿ: CBSE: 9 ರಿಂದ 12ನೇ ತರಗತಿ ಮಕ್ಕಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯಲು ರೆಡಿಯಾಗಿ

ಮಂಗಳೂರು ತಾಲೂಕು ಪಂಚಾಯತ್‌ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್‌ ಕುಲಾಲ್‌ ಕೆಂಪುಮಣ್ಣು ಅವರ ಪುತ್ರಿ ವಿದಿಶಾ ಏಕೈಕ ಮಗಳಾಗಿದ್ದರು. ಬೆಂಗಳೂರಿನಲ್ಲಿ ಒಂದು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದರು. ನಂತರ 2019 ರಲ್ಲಿ ದುಬೈಗೆ ತೆರಳಿ ಎಕ್ಸ್‌ಕ್ಯೂಜೆಟ್‌ನಲ್ಲಿ ಅಧಿಕಾರಿಯಾಗಿ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ನಿತ್ಯ ಕಂಪನಿಯ ಕ್ಯಾಬ್‌ನಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದ ವಿದಿಶಾ ಅವರು ಫೆ.22ರಂದು ಗುರುವಾರ ಲೇಟಾಯಿತೆಂದು ತನ್ನ ಕಾರಿನಲ್ಲಿ ಸಂಚರಿಸಿದಾಗ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ.

ಅಪಘಾತದ ತೀವ್ರತೆಗೆ ವಿದಿಶಾಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತ ಹೊಂದಿದ್ದಾರೆ.

ದುಬೈನಲ್ಲಿ ವಾಹನ ಚಾಲನಾ ಲೈಸೆನ್ಸ್‌ ಪಡೆದಿದ್ದು, ಆರು ತಿಂಗಳ ಹಿಂದೆ ಹೊಸ ಕಾರುನ್ನು ವಿದಿಶಾ ಖರೀದಿ ಮಾಡಿದ್ದರು. ತಂದೆ, ತಾಯಿಯನ್ನು ದುಬೈಗೆ ಕರೆಸಿ ಕಾರಿನಲ್ಲಿ ಸುತ್ತಾಡಿಸಿದ್ದರು ಕೂಡಾ. ಇತ್ತ ಮಗಳ ಮದುವೆಯ ಸಿದ್ಧತೆ ನಡೆಸುತ್ತಿರುವಾಗ ಈ ಘಟನೆ ನಡೆದಿದೆ.

You may also like

Leave a Comment