Deadly Accident: ಕೈಮೂರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ನಡೆದಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಭೋಜ್‌ಪುರದ ಖ್ಯಾತ ಗಾಯಕ ಮತ್ತು ನಟ ಪುಣ್ಯಶ್ಲೋಕ್ ಪಾಂಡೆ ಅಲಿಯಾಸ್ ಛೋಟು ಪಾಂಡೆ, ಮಾಡೆಲ್‌ಗಳು ಮತ್ತು ನಟಿಯರಾದ ಸಿಮ್ರಾನ್ ಶ್ರೀವಾಸ್ತವ್ ಮತ್ತು ಆಂಚಲ್ ತಿವಾರಿ, ಗೀತರಚನೆಕಾರ ಸತ್ಯ ಪ್ರಕಾಶ್ ಮಿಶ್ರಾ ಅಲಿಯಾಸ್ ಬೈರಾಗಿ ಬಾಬಾ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Mangalore: ಏಣಿಯಲ್ಲಿ ನಿಂತು ಪೈಂಟ್ ಮಾಡುತ್ತಿದ್ದ ಯುವಕ ಜಾರಿಬಿದ್ದು ಸಾವು
ಈ ಭೀಕರ ರಸ್ತೆ ಅಪಘಾತದಿಂದಾಗಿ ಭೋಜ್‌ಪುರಿ ಚಿತ್ರರಂಗದಲ್ಲಿ ಶೋಕದಲ್ಲಿ ಮುಳುಗಿದೆ. ಈ ಘಟನೆಯಿಂದ ಭೋಜ್‌ಪುರಿ ಚಿತ್ರರಂಗವು ಬೆಚ್ಚಿಬಿದ್ದಿದೆ.
ಛೋಟು ಪಾಂಡೆ ಅವರು ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತಮ್ಮ ಇಡೀ ತಂಡದೊಂದಿಗೆ ತಮ್ಮ ಸ್ಕಾರ್ಪಿಯೋ ಕಾರಿನಲ್ಲಿ ಯುಪಿಗೆ ಹೋಗುತ್ತಿದ್ದರು ಎಂದು ಹೇಳಲಾಗುತ್ತಿದೆ. ಕೈಮೂರ್ ಜಿಲ್ಲೆಯ ಮೊಹಾನಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ಎಚ್ 2 ರ ದೇವಕಾಲಿ ಬಳಿ ಇದ್ದಕ್ಕಿದ್ದಂತೆ ಬೈಕ್ ಸವಾರನೊಬ್ಬ ಸ್ಕಾರ್ಪಿಯೋ ಮುಂದೆ ಬಂದಿದ್ದಾನೆ. ಬೈಕ್ ಸವಾರನನ್ನು ರಕ್ಷಿಸುವ ಯತ್ನದಲ್ಲಿ ಸ್ಕಾರ್ಪಿಯೋ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಆ ಸಮಯದಲ್ಲಿ ಏಕಾಏಕಿ ಹಿಂದಿನಿಂದ ಬಂದ ಕಂಟೈನರ್ (ಟ್ರಕ್) ಸ್ಕಾರ್ಪೊಯೋ ಅನ್ನು ನುಜ್ಜುಗುಜ್ಜಾಗಿಸಿದೆ.
ಅಪಘಾತವು ತೀವ್ರವಾಗಿದ್ದು, ಸ್ಕಾರ್ಪಿಯೋ ಧ್ವಂಸವಾಗಿದ್ದು, ಕೆಲವೇ ಸಮಯದಲ್ಲಿ ಎಂಟು ಜನರು ಸಾವನ್ನಪ್ಪಿದರು. ಅಷ್ಟೇ ಅಲ್ಲ ಬೈಕ್ ಸವಾರ ಕೂಡ ಕಂಟೈನರ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಪೊಲೀಸರು ಹಾಗೂ ಎನ್ ಎಚ್ ಎಐ ತಂಡ ಆಗಮಿಸಿದಾಗ ಅಪಘಾತದ ತೀವ್ರತೆ ನೋಡಿ ಬೆಚ್ಚಿಬಿದ್ದಿದ್ದಾರೆ.
ಘಟನೆಯ ನಂತರ, NH ನಲ್ಲಿ ದೀರ್ಘ ಜಾಮ್ ಆಗಿತ್ತು. ಇದಾದ ನಂತರ ಪೊಲೀಸರು ಎರಡೂ ವಾಹನಗಳನ್ನು ಎನ್‌ಎಚ್‌ನಿಂದ ಹೊರತೆಗೆದರು. ಮೃತದೇಹಗಳನ್ನೂ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
