Home » Uttara kannada: ತನ್ನ ಪತ್ನಿಗೆ ಇಷ್ಟವಾಗುವ ಸೀರೆ ಇಲ್ಲ ಅಂದ ಅಂಗಡಿ ಸಿಬ್ಬಂದಿಗೆ ಥಳಿಸಿದ ಪತಿ

Uttara kannada: ತನ್ನ ಪತ್ನಿಗೆ ಇಷ್ಟವಾಗುವ ಸೀರೆ ಇಲ್ಲ ಅಂದ ಅಂಗಡಿ ಸಿಬ್ಬಂದಿಗೆ ಥಳಿಸಿದ ಪತಿ

1 comment
Uttara kannada

Uttarakannada: ತನ್ನ ಪತ್ನಿಗೆ ಸೀರೆ ತೆಗೆದುಕೊಂಡು ಹೋಗಿದ್ದ ಗಂಡ, ಆ ಸೀರೆ ಪತ್ನಿಗೆ ಇಷ್ಟವಾಗಿಲ್ಲವೆಂದು, ವಾಪಾಸು ನೀಡಲೆಂದು ಮರು ವಾಪಾಸು ನೀಡಲೆಂದು ಹೋದಾಗ, ಅಂಗಡಿಯವರ ಮಧ್ಯೆ ಮಾತಿನ ಚಕಮಕಿ ನಡೆಸಿದ ಗಂಡನು ಅಂಗಡಿಯವರಿಗೆ ಹಲ್ಲೆ ನಡೆಸಿದ ಘಟನೆಯೊಂದು ಶಿರಸಿ ನಗರದ ಸಿಪಿ ಬಜಾರಿನಲ್ಲಿ ನಡೆದಿದೆ.

ಇದನ್ನೂ ಓದಿ: Mahesh babu: ನಟ ಮಹೇಶ್ ಬಾಬು ತಲೆಯಲ್ಲಿ ಕೂದಲಿಲ್ವಾ? ಅರೆ, ಅವರು ವಿಗ್ ಬಳಸ್ತಾರಾ? ಇಲ್ಲಿದೆ ನೋಡಿ ಮೇಕಪ್ ಮ್ಯಾನ್ ಬಿಚ್ಚಿಟ್ಟ ಅಸಲಿ ಸತ್ಯ

ಮಹಮ್ಮದ್‌ ಎಂಬಾತನೇ ಹಲ್ಲೆ ಮಾಡಿರುವ ವ್ಯಕ್ತಿ. ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಫೆ.24 ರಂದು ಸಿಪಿ ಬಜಾರ್‌ನಲ್ಲಿರುವ ಸಾಗರ ಬಟ್ಟೆ ಅಂಗಡಿಗೆ ಬಟ್ಟೆ ಖರೀದಿಗೆಂದು ಬಂದಿದ್ದ ಮಹಮ್ಮದ್‌ ಅಲ್ಲಿಂದ ಸೀರೆ ತೆಗೆದುಕೊಂಡು ಹೋಗಿದ್ದು, ಅದನ್ನು ಆತನ ಪತ್ನಿ ಇಷ್ಟವಾಗಿಲ್ಲ ಎಂದಿದ್ದರೆ. ಮಹಮ್ಮದ್‌ ರಾತ್ರಿ 9 ಗಂಟೆಗೆ ಮತ್ತೆ ಸೀರೆ ಅಂಗಡಿಗೆ ಹೋಗಿದ್ದು, ಬೇರೆ ಸೀರೆ ಕೊಡಿ ಎಂದು ಹೇಳಿದ್ದಕ್ಕೆ ಅಂಗಡಿಯವರು ಬೇರೆ ಬೇರೆ ಸೀರೆಗಳನ್ನು ತೋರಿಸಿದ್ದರೂ ಯಾವುದೇ ಸೀರೆ ಮಹಮ್ಮದ್‌ಗೆ ಇಷ್ಟವಾಗಿಲ್ಲ. ಆವಾಗ ಸಿಬ್ಬಂದಿ ಅವರು ನಮ್ಮಲ್ಲಿ ಇಷ್ಟೇ ಇರುವುದು ಎಂದು ಹೇಳಿದಾಗ, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

 

ಅದಕ್ಕೆ ಸಿಬ್ಬಂದಿ ಬೈಯಬೇಡ, ನೀನು ಖರೀದಿ ಮಾಡಿದ ಸೀರೆಯ ಹಣ ವಾಪಾಸು ನೀಡುತ್ತೇವೆ ಎಂದು ಹೇಳಿದ್ದಾರೆ. ಕೂಡಲೇ ಅಂಗಡಿಯಿಂದ ಹೊರಗೆ ಬಂದ ಮಹಮ್ಮದ್‌ ತನ್ನ ಗೆಳೆಯ ಸರ್ಫಾಜ್‌ನನ್ನು ಕರೆದುಕೊಂಡು ಬಂದು ಅಂಗಡಿಯವರಿಗೆ ನಿಂದಿಸಿ, ಹೊರ ಊರಿನಿಂದ ಬಂದ ನೀವು ನಮ್ಮ ಮೇಲೆ ಗೂಂಡಾಗಿರಿ ಮಾಡುತ್ತೀರಾ ಎಂದು ಆವಾಜ್‌ ಹಾಗಿದ್ದು, ಅಂಗಡಿಯಲ್ಲಿದ್ದ ಮಾಲೀಕ, ಸಿಬ್ಬಂದಿಗಳಿಗೆ ಹಲ್ಲೆ ಮಾಡಿದ್ದಾನೆ.

ನಂತರ ನೀವು ಈ ದಿವಸ ಉಳಿದುಕೊಂಡಿದ್ದೀರಿ, ಇನ್ನೊಂದು ದಿನ ನೀವು ಇಲ್ಲಿ ಹೇಗೆ ಅಂಗಡಿ ನಡೆಸುತ್ತೀರಿ, ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಶಿರಸಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment