Home » Bengaluru Bomb Blast: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿದವರನ್ನು ಮೈ ಬ್ರದರ್‌ ಅಂದ್ರಿ, ಇವರು ಅಂಕಲ್‌ಗಳಾ??- ಆರ್‌. ಅಶೋಕ್‌ ವಾಗ್ದಾಳಿ

Bengaluru Bomb Blast: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿದವರನ್ನು ಮೈ ಬ್ರದರ್‌ ಅಂದ್ರಿ, ಇವರು ಅಂಕಲ್‌ಗಳಾ??- ಆರ್‌. ಅಶೋಕ್‌ ವಾಗ್ದಾಳಿ

1 comment
Bengaluru Bomb Blast

Bengaluru Bomb Blast: ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು ರಾಮೇಶ್ವರಂ ಕೆಫೆ ಬಾಂಬ್‌ ದಾಳಿ ಕುರಿತು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Blast in Bengaluru: ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ಗೂ ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೂ ಸಂಬಂಧವಿಲ್ಲ-ಸಿಎಂ ಸಿದ್ದರಾಮಯ್ಯ

ಡಿಕೆ ಶಿವಕುಮಾರ್‌ ಅವರೇ ನೀವು ಬ್ರ್ಯಾಂಡ್‌ ಬೆಂಗಳೂರು ಮಾಡಿದಿದ್ದರೂ ಪರ್ವಾಗಿಲ್ಲ, ಬಾಂಬ್‌ ಬೆಂಗಳೂರು ಮಾಡಬೇಕು. ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿದವರನ್ನು ಮೈ ಬ್ರದರ್‌ ಅಂದ್ರಿ, ಇದೀಗ ಇನ್ನೊಂದು ಭಯ ನನಗೆ ಆಗ್ತಿದೆ. ಇದೀಗ ರಾಮೇಶ್ವರ ಕೆಫೆಯಲ್ಲಿ ಬ್ಲಾಸ್ಟ್‌ ಮಾಡಿದವರನ್ನು ಎಲ್ಲಿ ಮೈ ಅಂಕಲ್‌ ಅಂತೀರಾ ಎಂದು ವ್ಯಂಗ್ಯ ಮಾಡಿದರು.

ಆಡಳಿತ ಪಕ್ಷದ ನಾಯಕರಲ್ಲಿ, ಸದಸ್ಯರಲ್ಲಿ ನನ್ನದೊಂದು ವಿನಂತಿ, ತಮ್ಮ ಮನಸ್ಸು ಬದಲು ಮಾಡಿಕೊಳ್ಳಿ. ಮಂಗಳೂರು, ಬೀದರ್‌, ಕಲ್ಬುರ್ಗಿ, ವಿಧಾನಸೌಧದ ವರೆಗೂ ಮಾಡಿದ್ದೀರಿ. ನೀವೇನಾದರೂ ಮಾಡಿ, ಆದರೆ ನಮಗೆ ಓಟ್‌ ಹಾಕಿದವರನ್ನು ರಕ್ಷಣೆ ಮಾಡ್ತೀನಿ ಅನ್ನೋ ನಿಲುವು ಕಾಂಗ್ರೆಸ್‌ ಪಕ್ಷದ್ದು ಎಂದು ಹೇಳಿದರು.

ರಾಮೇಶ್ವರ ಕೆಫೆ ಬಳಿ ಇರೋದು ಅಂತರಾಷ್ಟ್ರೀಯ ಮಟ್ಟದ ಕಂಪನಿಗಳು. ಹಾಗಾಗಿ ಅರ್ಥ ಮಾಡಿಕೊಳ್ಳಿ. ಬೆಂಗಳೂರಿಗೆ ಬರುವ ಹೂಡಿಕೆ ಕಡಿಮೆ ಆಗಬೇಕು. ಇಲ್ಲಿ ಇರುವ ಕಂಪನಿಗಳಿಗೆ ಭದ್ರತೆ ಇಲ್ಲ ಅನ್ನೋದು ಗೊತ್ತಾಗಬೇಕು ಎನ್ನುವ ಕಾರಣಕ್ಕಾಗಿ ಈ ಘಟನೆ ನಡೆದಿರಬಹುದು ಎಂದು ಅಶೋಕ್‌ ಅವರು ಹೇಳಿದ್ದಾರೆ.

You may also like

Leave a Comment