Home » Crime: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ವಸತಿ ಶಾಲೆ ಪ್ರಾಂಶುಪಾಲನ ಬಂಧನ

Crime: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ವಸತಿ ಶಾಲೆ ಪ್ರಾಂಶುಪಾಲನ ಬಂಧನ

1 comment
Crime

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಹಿನ್ನೆಲೆ ಚನ್ನಪಟ್ಟಣ ವಸತಿ ಶಾಲೆಯ ಪ್ರಾಂಶುಪಾಲ ಬಿ.ಎಂ ಸತೀಶ್ ಜೈಲುಪಾಲಾಗಿದ್ದಾನೆ.

ಇದನ್ನೂ ಓದಿ: Parliment election: 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿ ಹೈಕಮಾಂಡ್ ಗೆ ಕಳಿಸಿದ ಕರ್ನಾಟಕ ಕಾಂಗ್ರೆಸ್!!

ಪ್ರಾಂಶುಪಾಲ ಸತೀಶ್, ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಸೋಮವಾರ, ಡಿವೈಎಸ್ಪಿ ಗಿರಿ ಮತ್ತು ನಗರ ಸಿಪಿಐ ರವಿಕಿರಣ್ ಮಾರ್ಗದರ್ಶನದಲ್ಲಿ ಪೂರ್ವ ಪೊಲೀಸ್ ಠಾಣೆ ಪಿಎಸ್‌ಐ ಆಕಾಶ್ ಪತ್ತ‌ರ್ ಈತನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪಾವಗಡ ಮೂಲದ ಬಾಲಕಿ ವಸತಿ ಶಾಲೆಯಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾರ್ಥಿನಿಗೆ ಶನಿವಾರ ಜ್ವರ ಬಂದ ಹಿನ್ನೆಲೆಯಲ್ಲಿ ಪ್ರಾಂಶುಪಾಲರಿಂದ ಔಷಧ ಪಡೆಯಲು ಹೋದಾಗ, ಕೆಟ್ಟ ರೀತಿಯಲ್ಲಿ ಮೈಮುಟ್ಟಿ ಮಾತನಾಡಿಸಿ ಇರುವುದಾಗಿ‌ ವಿದ್ಯಾರ್ಥಿ, ಪಾಲಕರಿಗೆ ದೂರವಾಣಿ ಮೂಲಕ ತಿಳಿಸಿದ್ದಾಳೆ. ಶನಿವಾರ ಸಂಜೆ ಶಾಲೆಯ ಬಳಿ ಆಗಮಿಸಿದ ವಿದ್ಯಾರ್ಥಿನಿ ಪೋಷಕರು, ಶಾಲೆಯ ಬಳಿ ಗಲಾಟೆ ನಡೆಸಿದ್ದಾರೆ. ತದನಂತರ, ಪೂರ್ವಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿದ್ದ ಪೊಲೀಸರು ಪ್ರಾಂಶುಪಾಲನನ್ನು ಬಂಧಿಸಲು ಹೋದಾಗ ಪ್ರಾಂಶುಪಾಲ ತಲೆಮರೆಸಿಕೊಂಡಿದ್ದ ಹೆಚ್ಚಿನ ತನಿಖೆಯ ನಂತರ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

You may also like

Leave a Comment